*ಪ್ರಾಣ ಭಯದಲ್ಲೇ ಮೈದುಂಬಿ ಹರಿಯುತ್ತಿರುವ ಹಳ್ಳ ದಾಟುತ್ತಿರುವ ಮಕ್ಕಳು*
ರಠಮದುರ್ಗ-
ಜೀವದ ಹಂಗು ತೊರೆದು ಹಳ್ಳದಲ್ಲೇ ನಿಂತು ಮಕ್ಕಳನ್ನು ಆ ಕಡೆಯಿಂದ ಈ ಕಡೆಗೆ ಶಿಫ್ಟ್ ಮಾಡ್ತಿರುವ ಪೋಷಕರು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಉಡಚಮ್ಮನಗರ ಗ್ರಾಮದ ಹೊರ ವಲಯದಲ್ಲಿ ಘಟನೆ.
ಅದೇ ಗ್ರಾಮದ ಲಕ್ಷ್ಮಿ ನಗರದಿಂದ ಉಡಚಮ್ಮನಗರ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು.
ಹಳ್ಳದಲ್ಲಿ ಹರಿಯುವ ನೀರು ರಭಸವಾದ್ರೆ ಪೋಷಕರ ಜೊತೆಗೆ ಮಕ್ಕಳು ಕೊಚ್ಚಿಕೊಂಡು ಹೋಗುವ ಭೀತಿ.
ಲಕ್ಷ್ಮಿ ನಗರದಿಂದ ನಿತ್ಯ 24 ಕ್ಕೂ ಅಧಿಕ ಮಕ್ಕಳು ಹಳ್ಳ ದಾಟಿಯೇ ಶಾಲೆಗೆ ಹೋಗಬೇಕಾದ ಸ್ಥಿತಿ.
ಉಡಚಮ್ಮನಗರ ಹಾಗೂ ಲಕ್ಷ್ಮಿ ನಗರದ ಮಾರ್ಗಮಧ್ಯೆ ಇರುವ ಮಧ್ಯದಲ್ಲಿರುವ ಸತ್ಯಮ್ಮನ ಹಳ್ಳ.
ಪ್ರತಿ ಮುಂಗಾರು ಸಮಯದಲ್ಲಿ ಕೃಷಿ ಚಟುವಟಿಕೆ ಬಿಟ್ಟು ಮಕ್ಕಳನ್ನು ದಾಟಿಸುವ ಪೋಷಕರು.
ಕೇವಲ 800 ಮೀಟರ್ ದೂರದಲ್ಲಿರುವ ಉಡಚಮ್ಮನಗರ-ಲಕ್ಷ್ಮಿ ನಗರ.
ನೀರಿನ ಪ್ರಮಾಣ ಅಧಿಕವಾದರೆ ಉಡಚಮ್ಮನಗರದಲ್ಲಿರುವ ಸ್ನೇಹಿತರ ಮನೆಯಲ್ಲೇ ಇರಬೇಕಾದ ಸ್ಥಿತಿ.
ನರಗುಂದದಿಂದ ರಾಮದುರ್ಗ ಕಡೆಗೆ ಹರಿಯುವ ಸತ್ಯಮ್ಮನ ಹಳ್ಳಕ್ಕೆ ಬ್ರಿಡ್ಜ್ ನಿರ್ಮಿಸಬೇಕೆಂಬ ಬೇಡಿಕೆ.
ಕಳೆದ ಹಲವು ವರ್ಷಗಳಿಂದ ಇರುವ ಸಮಸ್ಯೆಗೆ ಇತೀಶ್ರೀ ಹಾಡದ ಜನಪ್ರತಿನಿಧಿಗಳು, ಅಧಿಕಾರಿಗಳು.
ಈ ಸಲವಾದರೂ ಈ ಸಮಸ್ಯೆಗೆ ಕಾಯಕಲ್ಪ ಕಲ್ಪಿಸುವರೇ ಸಚಿವ ಸತೀಶ್ ಜಾರಕಿಹೊಳಿ.
ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ ರಾಮದುರ್ಗ ಶಾಸಕ ಅಶೋಕ ಪಟ್ಟಣ.