Breaking News

ನೂತನ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರ ಸ್ವೀಕಾರ

ಬೆಳಗಾವಿ, ಜು.5(ಕರ್ನಾಟಕ ವಾರ್ತೆ): ಬೆಳಗಾವಿಯ ನೂತನ ಜಿಲ್ಲಾಧಿಕಾರಿಯಾಗಿ ಮೊಹಮ್ಮದ್ ರೋಷನ್ ಅವರು ಶುಕ್ರವಾರ(ಜು.5) ಅಧಿಕಾರ ವಹಿಸಿಕೊಂಡರು.

ನಿಕಟಪೂರ್ವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರವನ್ನು ಹಸ್ತಾಂತರಿಸಿದರು.2015 ನೇ ಬ್ಯಾಚಿನ ಐ.ಎ.ಎಸ್. ಅಧಿಕಾರಿಯಾಗಿರುವ ಮೊಹಮ್ಮದ್ ರೋಷನ್ ಅವರು, ಈ ಮುಂಚೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಬಿ.ಟೆಕ್ ಹಾಗೂ ಎಂ.ಬಿ.ಎ.(ಫೈನಾನ್ಸ್), ಎಂ.ಎ.(ಪಬ್ಲಿಕ್ ಪಾಲಿಸಿ) ಪದವೀಧರರಾಗಿರುವ ರೋಷನ್, ಹಾವೇರಿ ಮತ್ತು ಉತ್ತಕ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿರುತ್ತಾರೆ.

ಕಳೆದ ಎರಡು(5-5-2022) ವರ್ಷಗಳಿಂದ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಆಡಳಿತಲ್ಲಿ ಚುರುಕು ತಂದಿದ್ದ ನಿತೇಶ್ ಪಾಟೀಲ ಅವರು, ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆ ನಿರ್ದೇಶಕರಾಗಿ ವರ್ಗಾವಣೆಗೊಂಡಿರುತ್ತಾರೆ.

ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ನಿರ್ಗಮಿತ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರಿಗೆ ಶುಭಕೋರಿದರು. ಇದೇ ವೇಳೆ ನೂತನ ಜಿಲ್ಲಾಧಿಕಾರಿಗಳಿಗೆ ಹೂಗುಚ್ಛ ನೀಡಿ ಬರಮಾಡಿಕೊಂಡರು.
ಪ್ರೊಬೇಷನರಿ ಐ.ಎ.ಎಸ್. ದಿನೇಶ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಮತ್ತಿತರರು ಉಪಸ್ಥಿತರಿದ್ದರು.
****

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *