ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ*

  • ಗೋಕಾಕ- ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಭೇಟಿ ಮಾಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.
    ನದಿ ತೀರದ ಸಂತ್ರಸ್ತರು ಯಾವ ಕಾರಣಕ್ಕೂ ಆತಂಕ ಮಾಡ್ಕೊಬೇಡಿ. ಧೈರ್ಯದಿಂದ ಇರಿ. ಸದಾ ನಾವು ನಿಮ್ಮೊಂದಿಗೆ ಇದ್ದೇವೆ. ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು
    ಘಟಪ್ರಭಾ ನದಿ ತೀರದ ಸಂತ್ರಸ್ತರ ಬಗ್ಗೆ ಕಾಳಜಿ- ಕನಿಕರ ಭಾವನೆಗಳನ್ನು ಹೊಂದಿದ್ದಾರೆ. ಪ್ರವಾಹದಿಂದ ನದಿ ತೀರದ ಗ್ರಾಮಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಸಂತ್ರಸ್ತರಿಗೆ ಅನುಕೂಲವಾಗಲು ಅವರನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ನಮ್ಮ ತಂಡ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು
  • ಸರ್ವೋತ್ತಮ ಜಾರಕಿಹೊಳಿ ಅವರು ಅಡಿಬಟ್ಟಿ ಜಾಕವೆಲ್, ಮೆಳವಂಕಿಯ ಗೌಡನ ಕ್ರಾಸ್, ಸದಾಶಿವ ನಗರದ ಕಾಳಜಿ ಕೇಂದ್ರ, ಹಡಗಿನಾಳ, ಉದಗಟ್ಟಿ, ತಪಸಿ ಗ್ರಾಮಗಳ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬದವರೊಂದಿಗೆ ಚರ್ಚೆ ನಡೆಸಿದರು.

ಪ್ರಮುಖರಾದ ಸಿದ್ದಪ್ಪ ಹಂಜಿ, ಮುತ್ತೆನಗೌಡ ಪಾಟೀಲ, ಅಲ್ಲಪ್ಪ ಕಂಕಣವಾಡಿ, ದೊಡ್ಡಪ್ಪ ಕರೆಪ್ಪನವರ, ಅಡಿವೆಪ್ಪ ಗೌಳಿ, ವಿಠ್ಠಲ ಆಡಿನ, ಪ್ರಕಾಶ ಕಾಮೆವಾಡಿ, ಮಲ್ಲಪ್ಪ ಕಲ್ಲೋಳಿ, ಸಣ್ಣ ಮುತ್ತನಗೌಡ ಪಾಟೀಲ, ಸಿದ್ದಪ್ಪ ಪೂಜೇರಿ, ಭೀಮಪ್ಪ ಚಿಪ್ಪಲಕಟ್ಟಿ, ನಿಂಗಪ್ಪ ಶಿಂತ್ರಿ, ಮಲ್ಲಿಕಾರ್ಜುನ ಶಿಂತ್ರಿ, ಬಾಳಪ್ಪ ಮೆಳವಂಕಿ, ಮಾರುತಿ ನಾಯಿಕ, ಕಸ್ತೂರಿ ಚಿಗಡೊಳ್ಳಿ, ಅಡಿವೆಪ್ಪ ಹಂಜಿ, ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ಅಬ್ದುಲ ಮಿರ್ಜಾನಾಯಿಕ,
ಉಸ್ತುವಾರಿ ಅಧಿಕಾರಿಗಳು, ಗ್ರಾ.ಪಂ.ಸದಸ್ಯರು, ಪಿಡಿಓಗಳು, ಗ್ರಾಮ ಆಡಳಿತ ಅಧಿಕಾರಿಗಳು, ಎಸ್ಡಿಎಂಸಿ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *