ಅಜ್ಜಿಗೆ ಮೋಸ ಆಗಿದ್ದು ಚೆನ್ನಮ್ಮನ ಹುಟ್ಟೂರಿನಲ್ಲಿ ಸಾಹುಕಾರ್ ಕ್ಷೇತ್ರದಲ್ಲಿ….!!

ಬೆಳಗಾವಿ- ಕಣ್ಣೀರು ಹಾಕುತ್ತಿರುವ ಅಜ್ಜಿಗೆ ಮಕ್ಕಳು ಇಲ್ಲ,ಗಂಡನನ್ನು ಕಳೆದುಕೊಂಡು ಏಕಾಂಗಿಯಾಗಿರುವ ಅಜ್ಜಿಗೆ ಬೆಳಗಾವಿ ಪಕ್ಕದ ಕಾಕತಿಯಲ್ಲಿ ವ್ಯಕ್ತಿಯೊಬ್ಬ ಅನ್ನಾಯ ಮಾಡಿದ್ದು ಈ ಅಜ್ಜಿ ವೃದ್ಧಾಶ್ರಮ ಸೇರುವಂತೆ ಮಾಡಿರುವ ಕರಾಳ ಕಹಾನಿಯನ್ನು ಅಜ್ಜಿ ಸುರಿಸಿದ ಕಣ್ಣೀರು ಹೇಳುತ್ತಿದೆ.

ನನಗೆ ಅನ್ಯಾಯವಾಗಿದೆ.ನನಗೆ ಮೋಸ ಮಾಡಿದ್ದಾರೆ ನನಗೆ ನ್ಯಾಯಕೊಡಿ ಎಂದು ಅನ್ಯಾಯಕ್ಕೊಳಗಾದ ಅಜ್ಜಿ ಈಗ ಬೆಳಗಾವಿಯ ಮಾದ್ಯಮಗಳ ಎದುರು ಕಣ್ಣೀರು ಸುರಿಸಿದ್ದಾಳೆ.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಯಮಕನಮರ್ಡಿ ಕ್ಷೇತ್ರದವಳಾದ ಈ ಅಜ್ಜಿಗಿ ವ್ಯಕ್ತಿಯೊಬ್ಬ ಮೋಸ ಮಾಡಿದ್ದಾನೆ ಎಂದು ಈ ಅಜ್ಜಿ ಆರೋಪಿಸಿದ್ದಾಳೆ.

ಅಜ್ಜಿ ಹೇಳಿದ್ದು…

ಮುಪ್ಪಿನ ವಯಸ್ಸಿನಲ್ಲಿ ಆಸರೆಯಾಗಬೇಕಿದ್ದ ಮಕ್ಕಳು ಇಲ್ಲ. ಮೊಮ್ಮಕ್ಕಳು ಇಲ್ಲ. ಗಂಡನನ್ನು ಕಳೆದುಕೊಂಡಿರುವ ಅಜ್ಜಿ ತಾನು ಸಂಪಾದನೆ ಮಾಡಿದ ಹಣದಿಂದ ಎರಡೂ ಗುಂಟೆ ಜಾಗೆ ಪಡೆದು, ಒಂದು ಗುಂಟೆಯಲ್ಲಿ ಮನೆ ನಿರ್ಮಾಣ ಮಾಡಿದ್ದಾಳೆ. ಆ ಮನೆ ಹಾಗೂ ಜಾಗೆಯನ್ನು ಅಜ್ಜಿಗೆ ಮೋಸ ಮಾಡಿ ತನ್ನ ಹೆಸರಿಗೆ ಬರೆಸಿಕೊಂಡು ಮಠ ಸೇರುವಂತೆ ಮಾಡಿದ ಖದೀಮನಿಗೆ ತಕ್ಕ ಶಿಕ್ಷೆಯಾಗಬೇಕೆಂದು ವೃದ್ಧೆ ಶಾಂತಾ ಸುದ್ದಿಗಾರರ ಮುಂದೆ ಕಣ್ಣೀರು ಹಾಕಿ ಬೇಡಿಕೊಂಡಿದ್ದಾಳೆ.

ಗೋವಿಂದ್ ತಳವಾರ ಎಂಬ ವ್ಯಕ್ತಿ ನನಗೆ ಮೋಸ ಮಾಡಿ ನನ್ನ ಮನೆಯನ್ನು ಕಬ್ಜಾ ಮಾಡಿ ಲಕ್ಷಾಂತರ ರೂ‌. ವಂಚನೆ ಮಾಡಿದ್ದಾನೆ. ಕಾಕತಿಯ ಕಿಲ್ಲಾಗಲ್ಲಿಯಲ್ಲಿರುವ ಒಂದು ಗುಂಟೆಯ ಜಾಗೆಯಲ್ಲಿರುವ ಮನೆಯ ತೆರಿಗೆ ತುಂಬಿಲ್ಲ ಎಂದಿದ್ದ ಗೋವಿಂದ್ ಅಜ್ಜಿ ಕರ ತುಂಬುಲು ಕೊಟ್ಟಾಗ ಆ ದಾಖಲೆಯನ್ನು ಇಟ್ಟುಕೊಂಡು ಮೋಸ ಮಾಡಿದ್ದಾನೆ ಎಂದರು‌.

ಒಂದೇ ದಿನದಲ್ಲಿ ಕಾಕತಿಯ ಪಂಚಾಯಿತಿ ಅಧಿಕಾರಿಗಳು ಲಕ್ಷಾಂತರ ರೂ.ಗಳ ಬೆಲೆ ಬಾಳುವ ಮನೆ ಹಾಗೂ ಒಂದು ಗುಂಟೆ ಖಾಲಿ ಜಾಗೆಯನ್ನು ಮೋಸದಿಂದ ಬರೆದುಕೊಟ್ಟಿದ್ದಾರೆ. ಈಗ ನನಗೆ ಯಾರೂ ಇಲ್ಲ. ಹುಬ್ಬಳ್ಳಿಯ ಸಿದ್ದಾರೂಢಮ ಮಠದಲ್ಲಿ ಇದ್ದೇನೆ. ನನಗೆ ಸುಮಾರು 6 ಲಕ್ಷದ ಚೆಕ್ ಕೊಟ್ಟಿರುವ ಗೋವಿಂದ್ ಅದರಲ್ಲಿ ಹಣ ಇಲ್ಲ. ನನಗೆ ಬೀದಿಗೆ ತಂದಿರುವ ಅವನಿಂದ ನನಗೆ ನನ್ನ ಮನೆ ಕೊಡಿಸಿ ಎಂದು ಅಜ್ಜಿ ಸುದ್ದಿಗಾರರ ಮುಂದೆ ಕಣ್ಣೀರು ಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *