Breaking News

ಸಿದ್ರಾಮಯ್ಯ ಹಿತಕ್ಕಾಗಿ ಗೃಹಲಕ್ಷ್ಮೀ ಹಣದಿಂದ ಊರಿಗೆ ಹೋಳಗಿ ಊಟ ಹಾಕಿಸಿದ ಅಜ್ಜಿ….

 

ಬೆಳಗಾವಿ – ಗೃಹಲಕ್ಷ್ಮೀ ಹಣದಿಂದ ಮಹಿಳೆಯರು ಟಿವಿ,ಪ್ರೀಡ್ಜು ಇನ್ನೊಂದು ಮತ್ತೊಂದು ಖರೀಧಿ ಮಾಡ್ತಾ ಇದ್ರೆ ಅಜ್ಜಿಯೊಬ್ಬಳು ಗೃಹಲಕ್ಷ್ಮೀ ಹಣವನ್ನು ಉಳಿಸಿ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದಿದೆ.

ಮುಖ್ಯಮಂತ್ರಿ ಸಿದ್ರಾಮಯ್ಯ ಅನ್ನಭಾಗ್ಯ,ಗೃಹಲಕ್ಷ್ಮೀ ಮೂಲಕ ಜಗತ್ತಿಗೆ ಊಟ ಹಾಕಿಸುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಅಂತಾ ಹರಕೆ ಹೊತ್ತು ಹೋಳಿಗೆ ಊಟ ಹಾಕಿಸುತ್ತಿದ್ದೇನೆ ನಾನೊಬ್ಬಳೇ ಅಲ್ಲ,ದುಂಡವ್ವ ನೂಲಿ,ಲಕ್ಕವ್ಬ ಹಟ್ಟಿಹೊಳಿ,ಇನ್ನು ಹಲವಾರು ಜನ ಗೃಹಲಕ್ಷ್ಮೀಯವರು ಸೇರಿಕೊಂಡು ಸಿದ್ರಾಮಯ್ಯ ಅವರಿಗೆ ಒಳ್ಳೆಯದಾಗಲಿ ಎಂದು ಹೋಳಗಿ ಊಟ ಹಾಕಿಸಿದ್ದೇವೆ ಎಂದು ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೋಟಿ ಹೇಳಿದ್ದಾರೆ.

ಗೃಹಲಕ್ಷ್ಮೀ ಹಣದಿಂದ ವೃದ್ಧ ತಾಯಂದಿರುಗಳ ಹೊಟ್ಟೆ ತುಂಬುತ್ತಿದೆ, ಸಿದ್ರಾಮಯ್ಯ ಜಗತ್ತಿನ ಬಡವರ ಹೊಟ್ಟೆ ತುಂಬಿಸಿದ್ದಾರೆ. ಅವರ ಯೋಜನೆಗಳು ನಿಲ್ಲಬಾರ್ದು ಸಿದ್ರಾಮಯ್ಯನವರಿಗೆ ಒಳ್ಳೆಯದಾಗಬೇಕು,ಅವರಿಗೆ ಒಳ್ಳೆಯದಾದ್ರೆ ಎಲ್ಲ ಬಡವರಿಗೂ ಒಳ್ಳೆಯದಾಗುತ್ತೆ ಎಂದು ಅಜ್ಕಿ ಅಕ್ಕಾತಾಯಿ ಲಂಗೋಟಿ ಸಿದ್ರಾಮಯ್ಯನವರ ಹಿತಕ್ಕಾಗಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದಾಳೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *