Breaking News

ಕಲಾಪ ವೀಕ್ಷಣೆಗೆ ಬಂದವರು ಛೀ…. ಥೂ… ಅಂದರು..

ಬೆಳಗಾವಿ
ಗಡಿನಾಡಿನಲ್ಲಿ ಚಳಿಗಾಲದ ಅಧಿವೇಶನ ‌ನಡೆಯುತ್ತಿದೆ. ನಮ್ಮ ಮಂತ್ರಿಗಳು, ಶಾಕರು ಯಾವ ರೀತಿ ಹೋರಾಟ ಮಾಡುತ್ತಾರೆ ಎಂದು ನೋಡಲು ಬೆಳಗಾವಿ ನಗರದ 75 ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳು ಕಲಾಪ ನೋಡಲು ಸೌಧಕ್ಕೆ ಬಂದಿದ್ದರು.
ಆದರೆ ಇಂದು ಗುರುವಾರ ಇಂದು ಗದ್ದಲದ ಗುರುವಾರ ಆಗುವುದು ಎಂದು ಶಾಲಾ ಮಕ್ಕಳಿಗೆ ತಿಳಿದಿರಲಿಲ್ಲ. ಬೆಳಿಗ್ಗೆ ಬಂದು ಕಲಾಪ ನೋಡಲು ಸರದಿಯಲ್ಲಿ ನಿಂತ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಗದ್ದಲ ಮಾಡಿದವರಿಗೆ ಹಾಗೂ ಕಲಾಪ ಮುಂದಿಡದಲ್ಲಸೆ, ಛೀ… ಥೂ ಅಂದಿದಲ್ಲದೆ ಹಿಡಿ ಶಾಪ ಹಾಕಿದ್ದರು.

25ದಕ್ಕೂ ಅಧಿಕ ಶಾಲೆಗಳ ನೂರಾರು ವಿದ್ಯಾರ್ಥಿಗಳು ಯಡಿಯೂರಪ್ಪ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಜಯಮಾಲ್ , ಲಕ್ಷ್ಮೀ ಹೆಬ್ಬಾಳಕರ, ಅಂಜಲಿ ನಿಂಬಾಳ್ಕರ್, ಅವರ ಅವರಿಗೆ ಬೇಕಾದ ನಾಯಕರನ್ನು ನೋಡಲು ಈ ವಿದ್ಯಾರ್ಥಿಗಳು ಬಂದು ಸುಡು ಬಿಸಿನಲ್ಲಿ ಮೂರು ಬಾರಿ ಸರದಿಯಲ್ಲಿ ನಿಂತು ಸದನ ಪ್ರವೇಶ ಮಾಡಿ ಸದನ ನಡೆಯದೆ ಇರುವುದರಿಂದ ನಿರಾಶೆ ವ್ಯಕ್ತಪಡಿಸಿದರು.

 ಕೆಲವರ ಶಾಲೆಗೆ ರಜೆ ಹಾಕಿ. ಇನ್ನು ಕೆಲವರು ತಮ್ಮ ಕರ್ತವ್ಯಕ್ಕೆ  ರಜೆ ಚೀಟಿ ನೀಡಿ ತಮ್ಮ ತಮ್ಮ ನಾಯಕರ ಕಲಾಪ ವೀಕ್ಷಿಸಲು ಬಂದು ಗುರುವಾರ ಉರು ಬಿಸಿಲಲ್ಲಿ ನಿಂತವರಿಗರ ವಿಜಯಪುರ ಬಾಗಲಕೋಟೆ ಧಾರವಾಡ ಜಿಲ್ಲೆಗಳಿಂದ ಬಂದ್ರೂ ಅವರಿಗೆ ಕಲಾಪ ವಿಕ್ಷಿಸುವ ಅವಕಾಶ ಸಿಗಲಿಲ್ಲ ಒಳಗೆ ಹೊರಗೆ ಹೋಗಿ ಸುಸ್ತಾದ ಈ ಜನ ಕಲಾಪ ಮುಂದೂಡಿದವರಿಗೆ ಹಿಡಿಶಾಪ ಹಾಕಿದ್ರು

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *