ಬೆಳಗಾವಿ-ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜಕಾರಣದಲ್ಲಿ ಮಿಂಚಿನ ಬೆಳವಣಿಗೆಗಳು ನಡೆದಿವೆ.ಲೋಕಸಭೆ ಚುನಾವಣೆಯ ಸೈಡ್ ಎಫೆಕ್ಟ್ ಈಗ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನದ ಖುರ್ಚಿಗೆ ಆಗಿದೆ.
ಮಾಜಿ ಸಂಸದರಾದ ರಮೇಶ್ ಕತ್ತಿ ಮತ್ತು ಅಣ್ಣಾಸಾಹೇಬ್ ಜೊಲ್ಲೆ ಮಧ್ಯೆ ಕಿತ್ತಾಟ ನಡೆದಿದ್ದು ಈ ಕಿತ್ತಾಟ ಈಗ ರಮೇಶ್ ಕತ್ತಿ ಖುರ್ಚಿಗೆ ಕುತ್ತು ತಂದಿದೆಯಾ..? ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ.ರಮೇಶ್ ಕತ್ತಿ ವಿರುದ್ಧ ಮತ್ತೊಂದು ಹಂತದ ಸಮರ ಶುರುವಾಗಿದೆ. ಅಣ್ಣಾಸಾಹೇಬ್ ಜೊಲ್ಲೆ ರಮೇಶ್ ಕತ್ತಿ ವಿರುದ್ಧ ಬರೆದಿದ್ದಾರೆ ಎನ್ನಲಾದ ಲವ್ ಲೆಟರ್ ಈಗ ಚರ್ಚೆಗೆ ಗ್ರಾಸವಾಗಿದೆ.
ರಮೇಶ್ ಕತ್ತಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಣ್ಣಾಸಾಹೇಬ್ ಜೊಲ್ಲೆ ಇದೇ ಬ್ಯಾಂಕ್‌ನ ನಿರ್ದೇಶಕರಾಗಿದ್ದಾರೆ.ಬೆಳಗಾವಿ ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆ ಬಹಿಷ್ಕರಿಸಿ ಅಣ್ಣಾಸಾಹೇಬ್ ಜೊಲ್ಲೆ ಗುಂಪು ಪ್ರತ್ಯೇಕ ಸಭೆ ನಡೆಸುವ ಮೂಲಕ ರಮೇಶ್ ಕತ್ತಿ ವಿರುದ್ಧದ ಆಕ್ರೋಶ ಹೊರಹಾಕಿದ್ದಾರೆ.ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೊರಗಿಟ್ಟು ಉಪಾಧ್ಯಕ್ಷ ಸೇರಿ ಹಲವಾರು ಜನ ನಿರ್ದೇಶಕರು ಪ್ರತ್ಯೇಕ ಸಭೆ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ನಿರ್ದೇಶಕರ ಸಭೆಗೆ ಹಾಜರಾದ ಬಿಜೆಪಿಯ ಜಾರಕಿಹೊಳಿ ಬ್ರದರ್ಸ್ ಅತೃಪ್ತ ನಿರ್ದೇಶಕರನ್ನು ಮನವೊಲಿಸಿ ಡಿಸಿಸಿ ಬ್ಯಾಂಕಿನ ಸಭೆಗೆ ಅವರನ್ನು ಕಳುಹಿಸುವಲ್ಲಿ ರಮೇಶ್ ಜಾರಕಿಹೊಳಿ,ಮತ್ತು ಬಾಲಚಂದ್ರ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ.ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಧಾನ ಸಕ್ಸೆಸ್ ಆಗಿದೆ.
ಡಿಸಿಸಿ ಬ್ಯಾಂಕ್ ಚುನಾವಣೆಗೆ ಒಂದು ವರ್ಷ ಬಾಕಿ ಇದೆ.ನಿರ್ದೇಶಕರು ಈಗಿನಿಂದಲೇ ಕ್ರಿಯಾಶೀಲರಾಗಿದ್ದಾರೆ.ನಿನ್ನೆಯ ದಿನ ಗುರುವಾರ ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಬಿಜೆಪಿಯ ಜಾರಕಿಹೊಳಿ ಬ್ರದರ್ಸ್ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ, ಉಪಾಧ್ಯಕ್ಷ ಸುಭಾಷ ಢವಳೇಶ್ವರ, ನಿರ್ದೇಶಕರಾದ ಅಣ್ಣಾಸಾಹೇಬ್ ಜೊಲ್ಲೆಅರವಿಂದ ಪಾಟೀಲ್, ಮಹಾಂತೇಶ ದೊಡ್ಡಗೌಡರ ಸೇರಿ 14 ನಿರ್ದೇಶಕರು ಹಾಜರಾಗಿದ್ದು ವಿಶೇಷ.
ಹೊಸ ಸದಸ್ಯರ ಹೆಚ್ಚಳಕ್ಕೆ ಅಣ್ಣಾಸಾಹೇಬ್ ಜೊಲ್ಲೆ ಪಟ್ಟು,ಹಿಡಿದಿದ್ದಾರೆ ಇದಕ್ಕೆ ರಮೇಶ್ ಕತ್ತಿ ಒಪ್ಪದ ಕಾರಣ,ಕಿತ್ತಾಟ ಶುರುವಾಗಿದೆ.ರಮೇಶ್ ಕತ್ತಿ ಅವರನ್ನು ಹಿರಿಯರೇ ಕೂಡಿ ಒಮ್ಮತದಿಂದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.ಅಧ್ಯಕ್ಷರಾಗಿರುವ ರಮೇಶ್ ಕತ್ತಿ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಜೊಲ್ಲೆ ಗುಂಪು ಆಕ್ರೋಶ ವ್ಯಕ್ತಪಡಿಸಿದೆ.ಈ ಕಾರಣಕ್ಕೆ ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತ್ಯೇಕ ಸಭೆ ನಡೆಸಿದ ಅಣ್ಣಾಸಾಹೇಬ್ ಜೊಲ್ಲೆ ರಮೇಶ್ ಕತ್ತಿ ವಿರುದ್ಧ ಸಮರ ಸಾರಿದ್ದಾರೆ.
ನಿಪ್ಪಾಣಿಯಲ್ಲಿ ಮೇಂಬರ್‌ಶೀಪ್ ಹೆಚ್ಚಳದಿಂದ ಮೂವರ ನಾಯಕರ ಆಪ್ತರ ಮಧ್ಯೆ ಫೈಫೋಟಿ ನಡೆದಿದೆ.ಡಾ. ಪ್ರಭಾಕರ ಕೋರೆ ಆಪ್ತ ಮಹಾಂತೇಶ ಕವಟಗಿಮಠ, ಸತೀಶ್ ಜಾರಕಿಹೊಳಿ ಆಪ್ತ ಉತ್ತಮ ಪಾಟೀಲ,ರಮೇಶ್ ಜಾರಕಿಹೊಳಿ ಆಪ್ತ ಅಣ್ಣಾಸಾಹೇಬ್ ಜೊಲ್ಲೆ ಮಧ್ಯೆ ಮೇಂಬರ್‌ಶೀಪ್ ಮಾಡಲು ಪೈಪೋಟಿ ನಡೆಯುತ್ತಿದೆ.ಸದಸ್ಯರ ಸಂಖ್ಯೆ ಹೆಚ್ವಳ ಮಾಡಿಕೊಳ್ಳಲು ನಡೆಯುತ್ತಿದೆ ಎನ್ನಲಾದ ಈ ಕಿತ್ತಾಟ ರಮೇಶ್ ಕತ್ತಿ ಅವರ ಖುರ್ಚಿಗೆ ಕುತ್ತು ತರುವ ಸಾಧ್ಯತೆಗಳು ಗೋಚರಿಸುತ್ತಿವೆ.