ಬೆಳಗಾವಿ: ಆರ್ ಎಸ್ ಎಸ್ ಗೂ ಕಾಂಗ್ರೆಸ್ ತರಬೇತಿ ಶಿಬಿರಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ರಾಜ್ಯ ಸಭಾ ಸದಸ್ಯ ಬಿ.ಕೆ. ಹರಿಪ್ರಸಾದ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾತನಾಡಿದರು. ಆರ.ಎಸ.ಎಸ ತರಹ ನಮ್ಮ ಶತ್ರುಗಳನ್ನು ಸಹ ತಯಾರು ಮಾಡಲ್ಲ. ಆರ.ಎಸ.ಎಸ ತರಹ ಸಂಘಟನೆ ಕಾಂಗ್ರೆಸ್ ಪಕ್ಷಕ್ಕೆ ಬೇಕಾಗಿಲ್ಲ.
ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಅಡಿಯಲ್ಲಿ, ಪಕ್ಷದ ಇತಿಹಾಸ ಇಟ್ಟುಕೊಂಡು ದೇಶದ ಅಭಿವೃದ್ಧಿಗಾಗಿ ಕೈ ಕಾರ್ಯಕರ್ತರನ್ನ ತಯಾರು ಮಾಡುತ್ತೇವೆ.
ಕಾಂಗ್ರೆಸ್ ಪಕ್ಷ ಲಾಠಿ ಹಿಡಕೊಂಡರೇ ಬೇರೆದವರಿಗೆ ಸಹಾಯವಾಗುತ್ತದೆ ಹೊರತು ಬೇರೆ ಸಂಘಟನೆಗಳು ಲಾಠಿ ಹಿಡಕೊಂಡರೆ ಬಾಯಿ ಬಿಡಿಸುವ ಕೆಲಸ ಮಾಡ್ತಾರೆ.ಆ ಸಂಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ
ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಶಿಬಿರ ಏರ್ಪಡಿಸುತ್ತಿದ್ದೇವೆ.
ಈಗಾಗಲೇ ಕಾರ್ಯಕರ್ತರಿಗೆ ತರಬೇತಿ ಕೇಂದ್ರ ತಯಾರಿಸಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ನ ಕಾರ್ಯಕರ್ತರಿಗೆ ತರಬೇತಿ ನೀಡಲಿದ್ದೇವೆ.
ಆರ.ಎಸ.ಎಸ ನಮ್ಮಿಂದ ಸಾಕಷ್ಟು ಕಲಿಯಬೇಕಿದೆ.
ಆರ.ಎಸ.ಎಸ ಸ್ವಾತಂತ್ರ್ಯ ಹೋರಾಟದ ವಿರುದ್ಧ ಇದ್ದಂತವರು, ಅವರಿಂದ ಏನು ಕಲಿಯಬೇಕಿಲ್ಲ.
ನಮ್ಮ ಲಾಠಿ ಏನು ಜಾಧು ಮಾಡುವುದಿಲ್ಲ. ಮಹಾತ್ಮ ಗಾಂಧಿ ಲಾಠಿ ಹಿಡದಿದ್ದು ಸಹಾಯ ಮಾಡಲು.
ಆರ.ಎಸ ಎಸ ಲಾಠಿ ಯಾಕೇ ಹಿಡಿತಾರೆ ಅನ್ನೋದು ಜಗತ್ತಿಗೆ ಗೊತ್ತಾಗಿದೆ.ಸ್ವಾತಂತ್ರ್ಯ ಹೋರಾಟಗಾರ ನೆರವಾಗುವ ನಿಟ್ಟಿನಲ್ಲಿ ಸೇವಾದಳ ಕೆಲಸ ಮಾಡಿದೆ.
ಈಗ ಕಾಂಗ್ರೆಸ್ ಸೇವಾದಳ ಮೂಲಕ ಕಾರ್ಯಕರ್ತರಿಗೆ ಭೌದಿಕ ತರಬೇತಿ ಕೊಡುತ್ತೇವೆ. ಈ ಮೂಲಕ ಸೇವಾದಳಕ್ಕೆ ಪುನಶ್ಚೇತನ ನೀಡುತ್ತೇವೆ ಎಂದು ಹೇಳಿದರು. ಬಿಜೆಪಿಯ ದೊಡ್ಡ ನಾಯಕರು ಅಫೀಮು ಗುಂಗಿಲ್ಲದೇ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಕೋವಿಡ್ 19 ನಿರ್ವಹಣೆಯಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಡ್ರಗ್ಸ್ ಪ್ರಕರಣದ ಹಿಂದೆ ಬಿದ್ದಿದೆ. ಕರ್ನಾಟಕದಲ್ಲಿ ನಟಿಯರಾದ ರಾಗಿಣಿ, ಸಂಜನಾ, ಮಹಾರಾಷ್ಟ್ರದಲ್ಲಿ ರಿಯಾ ಚಕ್ರವರ್ತಿ ಬಂಧಿಸಲಾಗಿದೆ. ಈ ಮೂಲಕ ಜನತೆ ಧಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದರು.