ಬೆಳಗಾವಿ -ವಿಧಾನಸಭೆಯಲ್ಲಿ ರಾಜ್ಯದ ಪರವಾಗಿ, ಬೆಳಗಾವಿಯ ಪರವಾಗಿ ಖಡಕ್ ವಾದ ಮಂಡಿಸಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಾಡದ್ರೋಹಿ ಎಂ ಈ ಎಸ್ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಲಕ್ಷ್ಮಣ ಸವದಿ ಮಹಾರಾಷ್ಟ್ರದ ಮತಿಗೇಡಿಯೊಬ್ಬ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡುವಂತೆ ಹೇಳಿಕೆ ಕೊಟ್ಡಿದ್ದಾನೆ. ಆದ್ರೆ ಇದು ಮುಂಬೈ ಕರ್ನಾಟಕ ಪ್ರದೇಶ ಮೊದಲು ಮುಂಬಯಿ ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಆಗಲಿ ಇದು ನನ್ನ ವ್ಯಯಕ್ತಿಕ ಅಭಿಪ್ರಾಯ ಅಲ್ಲ,ಇದು ನಮ್ಮೆಲ್ಲರ ಧ್ವನಿ ಆಗಬೇಕು, ಮುಂಬಯಿ ಕೇಂದ್ರಾಡಳಿತ ಪ್ರದೇಶ ಆಗಬೇಕು ಎನ್ನುವ ನಿರ್ಣಯವನ್ನು ಸದನದಲ್ಲಿ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳಿಸೋಣ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ನಾವು ಮಹಾಜನ ವರದಿಯನ್ನು ಒಪ್ಪಿದ್ದೇವೆ. ವರದಿ ಪ್ರಕಾರ ಬೆಳಗಾವಿ ನಮ್ಮ ನೆಲವಾಗಿದೆ.ಆದ್ರೆ ಮಹಾರಾಷ್ಟ್ರದ ಕೆಲವು ನಾಯಕರು ಪದೇ ಪದೇ ಕಾಲು ಕೆದರಿ ಜಗಳ ಮಾಡುತ್ತಿದ್ದು ಮುಂಬಯಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲು ವಿಧಾಸಭೆಯಲ್ಲಿ ನಿರ್ಣಯ ಕೈಗೊಂಡು ಮತಿಗೇಡಿಗಳ ಬಾಯಿ ಮುಚ್ಚಿಸುವದು ಅಗತ್ಯವಾಗಿದೆ ಎಂದರು.