Breaking News

ಜಗದೀಶ್ ಶೆಟ್ಟರ್ ಹಾಗೂ ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಿದ್ದು ಯಾಕೆ ಗೊತ್ತಾ ?

ದೆಹಲಿ-ಘಟಪ್ರಭಾ ಬಲದಂಡೆ ಕಾಲುವೆ (GRBC) ಹಾಗೂ ಚಿಕ್ಕೋಡಿ ಬಲದಂಡೆ ಕಾಲುವೆ (CBCI) ಗಳನ್ನು ನವೀಕರಣಗೊಳಿಸುವ ನಿಟ್ಟಿನಲ್ಲಿ ಅಂದಾಜು ರೂ. 1722 ಕೋಟಿ ವೆಚ್ಚಕ್ಕೆ ತಯಾರಿಸಿ ರಾಜ್ಯ ಸರ್ಕಾರವು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಕಳುಹಿಸಿದ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವ ಬಗ್ಗೆ ಮಾನ್ಯ ಕೇಂದ್ರ ಜಲಶಕ್ತಿ ರಾಜ್ಯ ಸಚಿವರಾದ ಶ ವಿ. ಸೋಮಣ್ಣ ಇವರ ಉಪಸ್ಥಿಯಲ್ಲಿ, ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ ಹಾಗೂ ಗೋಕಾಕ ವಿಧಾನಸಭಾ ಸದಸ್ಯರಾದ ರಮೇಶ ಜಾರಕಿಹೋಳಿ ಇವರು ಕೇಂದ್ರ ಜಲಶಕ್ತಿ ಸಚಿವರಾದ ಸಿ. ಆರ್ ಪಾಟೀಲ ಇವರನ್ನು ನವ-ದೆಹಲಿಯಲ್ಲಿ ಭೇಟಿ ಮಾಡಿ ವಿನಂತಿಸಿದರು.

ಪ್ರಸ್ತಾಪಿತ ಈ ಕಾಲುವೆಗಳು ಸುಮಾರು ಮೂರು ದಶಕಗಳ ಕಾಲದಷ್ಟು ಹಳೆಯದಾಗಿದ್ದು, ಇದರಿಂದಾಗಿ ರೈತರು ಹೊಂದಿದ ಜಮೀನುಗಳಿಗೆ ಕಾಲುವೆಗಳಿಂದ ಸಮರ್ಪಕವಾಗಿ ನೀರು ಹರಿದು ಹೋಗದೆ ಇರುವುದರಿಂದ ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ.

ಈ ಕಾಲುವೆಗಳನ್ನು ನವೀಕರಿಸುವುದರೊಂದಿಗೆ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಡಿ ಬರುವಂತಹ ಅನೇಕ ಗ್ರಾಮಗಳಲ್ಲಿನ ಲಕ್ಷಾಂತರ ರೈತ ಬಾಂಧವರಿಗೆ ಅವರು ಹೊಂದಿದ ಜಮೀನುಗಳಲ್ಲಿ ಬೆಳೆದ ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ದೊರೆಯಲಿದೆ ಎಂದು ಸಂಸದರಾದ ಶ್ರೀ ಜಗದೀಶ ಶೆಟ್ಟರ ಹಾಗೂ ಗೋಕಾಕ ವಿಧಾನಸಭಾ ಸದಸ್ಯರಾಗಿ ರಮೇಶ ಜಾರಕಿಹೋಳಿ ಇವರು ತಿಳಿಸಿದರು.

ಪ್ರಸ್ತಾಪಿತ ಈ ಯೋಜನೆಯ ಅಗತ್ಯತೆಯ ಅನುಗುಣವಾಗಿ ಸಲ್ಲಿಸಲಾದ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ. ಆರ್ ಪಾಟೀಲ ಇವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರ ಕಾರ್ಯಗತಗೊಳ್ಳಲಿರುವ ಬಗ್ಗೆ ಭರವಸೆ ಹೊಂದಿರುವುದಾಗಿ ಮಾನ್ಯ ಕೇಂದ್ರ ಜಲಶಕ್ತಿ ರಾಜ್ಯ ಸಚಿವರಾದ ವಿ ಸೋಮಣ್ಣ, ಸಂಸದರಾದ ಜಗದೀಶ ಶೆಟ್ಟರ ಹಾಗೂ ಗೋಕಾಕ ವಿಧಾನಸಭಾ ಸದಸ್ಯರಾದ ರಮೇಶ ಜಾರಕಿಹೋಳಿ ಇವರು ತಿಳಿಸಿರುವುದಾಗಿ ಬೆಳಗಾವಿ ಲೋಕಸಭಾ ಸದಸ್ಯರ ಕಾರ್ಯಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *