ಬೆಳಗಾವಿ- ಕರೋಣಾ ವದಂತಿಗಳ ಕಾಟಕ್ಕೆ ಈಡೀ ಜಗತ್ತೇ ತಲ್ಲಣಗೊಂಡಿದೆ ಆದರೆ ಇದರ ಭೀತಿಯ ಕಾಟಕ್ಕೆ ಕೋಳಿ ಕೂಗಿದ್ದೇ ಹೆಚ್ವು ಅದು ಹೇಗಂತೀರಾ ? ಹಾಗಾದರೆ ಡಿಟೇಲ್ಸ್ ಇಲ್ಲಿದೆ ನೋಡಿ
ಬೆಳಗಾವಿ ನಗರದಲ್ಲಿ ದಿನನಿತ್ಯ ಟನ್ ಗಟ್ಟಲೇ ಚಿಕನ್ ಮಟನ್ ಮಾರಾಟವಾಗುತ್ತದೆ ,ಜೊತೆಗೆ ಮೂರ್ನಾಲ್ಕು ಲಾರಿ ಫಿಶ್ ದಿನನಿತ್ಯ ಬೆಳಗಾವಿಗೆ ಬರುತ್ತದೆ .ಕೋರೋನಾ ವೈರಸ್ ಸುದ್ಧಿಗಳು,ವಿವಿಧ ಪೋಸ್ಟ್ ಗಳು, ಟಿಕ್ ಟಾಕ್ ಟಿಂಗಲ್ ಗಳು ಹರಿದಾಡಿದ ನಂತರ,ಬೆಳಗಾವಿಯ ಮಾಂಸಾಹಾರಿ ಉದ್ಯಮ ಹಳ್ಳ ಹಿಡಿದು ಹೋಗಿದೆ.
ಬೆಳಗಾವಿಯಲ್ಲಿ ಚಿಕನ್ ಮಟನ್,ಪಿಶ್ ಕೆಳೋರಿಲ್ಲ,ಬೆಳಗಾವಿಯಲ್ಲಿ ಈಗ ಏನಿದ್ರೂ ತರಕಾರಿ ನಾನ್ ವೇಜ್ ಹೊಟೆಲ್ ಗಳಲ್ಲಿ ರಶ್ ಕಡಿಮೆಯಾಗಿದೆ ವೇಜ್ ಹೊಟೇಲ್ ಗಳಲ್ಲಿ ರಶ್ ಕಾಣಿಸುತ್ತಿದೆ .
ಬೆಳಗಾವಿಯ ಕುಕಟೋದ್ಯಮ ಭಾರೀ ನಷ್ಟ ಅನುಭವಿಸಿದೆ, ಕುರಿ ಮಟನ್ ಉದ್ಯಮ ನಷ್ಟ ಅನುಭವಿಸದೇ ಇದ್ದರೂ ಬೆಲೆಯನ್ನು ಸ್ಥಿರವಾಗಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಚಿಕನ್ ಬೇಯಿಸಿ ತಿಂದರೆ ಯಾವುದೇ ತೊಂದರೆ ಇಲ್ಲ ಎನ್ನುವ ಸಂದೇಶಗಳು , ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಬೆಳಗಾವಿಯ ಕೆಲವು ವೈದ್ಯರು ವಿಡಿಯೋ ಮೂಲಕ ಚಿಕನ್ ಮಟನ್ ,ತಿಂದ್ರೆ ತೊಂದರೆ ಇಲ್ಲಾ ಅಂತಾ ಹೇಳುತ್ತಿದ್ದರೂ ಬೆಳಗಾವಿಯ ಜನ ಮಾತ್ರ ಭೀತಿಯಿಂದ ಹೊರ ಬಂದಂತೆ ಕಾಣುತ್ತಿಲ್ಲ, ಸುಮ್ಮನೇ ಊಸಾಬರಿ ಯಾಕೆ ಕರೋನಾ ನಿರ್ಣಾಮ ಆಗೋವರೆಗೂ ತರಕಾರಿ ತಿನ್ನೋನ ಎನ್ನುವ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ.
ಶಾಖಾಹಾರಿಗಳಿಗೆ ಯಾವುದೇ ಟೆನಶ್ಯನ್ ಇಲ್ಲ ,ಯಾಕಂದ್ರೆ ಬೆಳಗಾವಿಯಲ್ಲಿ ತರಕಾರಿ ಖರೀಧಿ ಮಾಡುವ ವ್ಯಾಪಾರಿಗಳು ಬಾರದೇ ರಾಶಿ ಗಟ್ಟಲೆ ತರಕಾರಿ ಮಾರುಕಟ್ಟೆಯಲ್ಲಿ ಸಿಗುತ್ತಿದೆ.ತರಕಾರಿ ಬೆಲೆಯೂ ಕಡಿಮೆಯಾಗಿದೆ
ಬೆಳಗಾವಿ ಜಿಲ್ಲೆಯಲ್ಲಿ ನೂರಾರು ಕೋಳಿ ಫಾರಂ ಗಳಿದ್ದು ಬಹುತೇಕ ಎಲ್ಲ ಫಾರಂ ಗಳು ಬಂದ್ ಆಗಿವೆ.ಕೆಲವು ಫಾರಂ ಮಾಲೀಕರು ಕೋಳಿಗಳಿಗೆ ಫೀಡ್ಸ್ ಹಾಕಿ ಲಕ್ಷಗಟ್ಟಲೆ ಹಣ ಫೀಡ್ಸ ಗಾಗಿ ಖರ್ಚು ಮಾಡುವದೇ ಬೇಡ ಎಂದು ಫಾರಂ ನಲ್ಲಿರುವ ಕೋಳಿಗಳನ್ನು ಜಂವಂತ ಸಮಾಧಿ ಮಾಡಿದ ಘಟನೆಗಳೂ ನಡೆದಿವೆ.ಮೊಟ್ಟೆ ಸೇವಿಸಲೂ ಜನ ಹೆದರುತ್ತಿರುವದರಿಂದ ಕೋಳಿ ಮೊಟ್ಟೆ ಬೆಲೆಯೂ ನೆಲಕಚ್ಚಿದೆ,
ಬೆಳಗಾವಿಯಲ್ಲಿ ಯಾರೊಬ್ಬರಿಗೂ ಕರೋನಾ ಸೊಂಕು ಪತ್ತೆ ಆಗಿಲ್ಲ,ಬೆಳಗಾವಿಯ ಜನ ಆತಂಕ ಪಡುವ ಅಗತ್ಯ ಇಲ್ಲವೇ ಇಲ್ಲ ,ಜಿಲ್ಲಾಡಳಿತ ವಿದೆಶದಿಂದ ಬೆಳಗಾವಿಗೆ ಬಂದವರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.
ಕರೋನಾ ಸೊಂಕಿನ ಭೀತಿಯಿಂದ ಬೆಳಗಾವಿಯ ಜನ ಹೊರಬರಬೇಕಾಗಿದೆ,ಆರೋಗ್ಯ ಇಲಾಖೆಯ ಸಲಹೆ,ಸೂಚನೆಗಳನ್ನು ಪಾಲಿಸುತ್ತ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರ್ಭಿತವಾಗಿ ತೊಡಗಿಸಿಕೊಂಡರೆ ಬೆಳಗಾವಿ ಸಹಜ ಸ್ಥಿತಿಗೆ ಬರುವದರಲ್ಲಿ ಸಂದೇಹವೇ ಇಲ್ಲ.
ವದಂತಿಗಳಿಗೆ ಕಿವಿ ಗೊಡಬೇಡಿ, ತಮಗೆ ಯಾವುದೇ ರೀತಿಯ ಅನುಮಾನ ಇದ್ದರೆ ಜಿಲ್ಲಾ ಆಸ್ಪತ್ರೆಯ ವೈದ್ಯರನ್ನು ಸಂಪರ್ಕ ಮಾಡಿ ಅನುಮಾನಗಳನ್ನು ಕ್ಲಿಯರ್ ಮಾಡಿಕೊಳ್ಳಲು ಸರ್ಕಾರ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕವಾದ ಚಿಕಿತ್ಸಾ ಘಟಕ ತೆರೆದಿದೆ.