ಕಾಣೆಯಾದ ಮಗು ಬೋರವೆಲ್ ನಲ್ಲಿ ಬಿದ್ದಿದೆ,ರಕ್ಷಣಾ ಕಾರ್ಯಚರಣೆ ಶುರುವಾಗಲಿದೆ.

ಬೆಳಗಾವಿ- ರಾಯಬಾಗ ತಾಲ್ಲೂಕಿನ ಗ್ರಾಮವೊಂದರ ಎರಡು ವರ್ಷದ ಮಗು ನಿನ್ನೆಯ ದಿನ ಕಾಣೆಯಾದ ಬಗ್ಗೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಆದ್ರೆ ಇವತ್ತು ಈ ಮಗು ಬೋರವೆಲ್ಲನಲ್ಲಿ ಬಿದ್ದಿರುವದು ಖಚಿತವಾಗಿದೆ.

ರಾಯಭಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ನಿನ್ನೆ ಕಾಣೆಯಾಗಿದ್ದ ಎರಡು ವರ್ಷದ ಮಗು ಬೊರವೇಲ್ಲದಲ್ಲಿ ಬಿದ್ದಿರುವ ಇಂದು ಸಂಜೆ ಖಚಿತವಾಗಿದ್ದು ರಾಯಬಾಗ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ಮಗುವಿನ ರಕ್ಷಣೆಗೆ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ ಮಾಹಿತಿ ನೀಡಿದ್ದಾರೆ.

ಅಲಖನೂರ ಗ್ರಾಮದಲ್ಲಿ ನಿನ್ನಯ ದಿನ 2 ವಷ೯ದ ಮಗು ಶರತ ಸಿದ್ದಪ್ಪ ಹಸಿರೇ ಕಾಣೆಯಾಗಿದ್ದ, ಹಾಲಪ್ಪನ ತೋಟದ ನಿವಾಸದಲ್ಲಿ,ಮನೆಯ ಮುಂದೆ ಆಟವಾಡುತ್ತಿದ್ದಾಗ ಕಾಣೆಯಾಗಿದ್ದ ಈ ಕುರಿತು ಹಾರೂಗೇರಿ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ಹೊಲದಲ್ಲಿಯೆ ಕೊರಸಿದ ಬೊರವೇಲ್ಲದಲ್ಲಿ ಮನೆಯಿಂದ ಸುಮಾರು 100 ಮಿಟರ್ ಅಂತರದಲ್ಲಿದ್ದ ಬೋರವಲ್ ದಲ್ಲಿ ಸುಮಾರು 15 ರಿಂದ 20 ಅಡಿ ಆಳದಲ್ಲಿ ಬಿದ್ದಿರುವುದಾಗಿ ತಿಳಿದು ಬಂದಿದೆ. ಮುಂದಿನ ಕಾಯಾ೯ಚರಣೆ ಮಾಡಲು ತಯಾರಿ ಮಾಡಲಾಗುತ್ತಿದೆ.

Check Also

ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ : ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆ

ಸಂಕೇಶ್ವರ : ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ ಗೊಂಡಿದ್ದ ಇಬ್ಬರು ಸಹೋದರರು ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ …

Leave a Reply

Your email address will not be published. Required fields are marked *