ಬೆಳಗಾವಿ- ಮೂವರು ಜನ ಯುವಕರು ಕಾಕತಿ ಪೋಲೀಸ್ ಠಾಣೆ ವ್ಯಾಪ್ತಿಯ ಹೊನಗಾ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಧ್ವಂಸಕ್ಕೆ ಯತ್ನಿಸುತ್ತಿರುವಾಗ,ಗ್ರಾಮಸ್ಥರು ಜಮಾಯಿಸಿ ಪೋಲೀಸರಿಗೆ ಮಾಹಿತಿ ನೀಡಿದ ಘಟನೆ ಇಂದು ಸಂಜೆ ನಡೆದಿದೆ.
ಇಂದು ಸಂಜೆ ಹೊತ್ತಿಗೆ ಮೂವರು ಜನ ಯುವಕರು ಹೊನಗಾ ಗ್ರಾಮದ ಶಿವಾಜಿ ಪುತ್ಥಳಿಯ ಕಟ್ಟೆಯ ಮೇಲೆ ಏರಿ,ಗಲಾಟೆ ಮಾಡುತ್ತಿರುವಾಗ,ಗ್ರಾಮಸ್ಥರು ಜಮಾಯಿಸಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಧಾವಿಸಿದ ಕಾಕತಿ ಪೋಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪೋಲೀಸರ ವಶದಲ್ಲಿ ಇರುವ ಈ ಮೂವರು ಯುವಕರು ಕುಡಿದ ಅಮಲಿನಲ್ಲಿದ್ದರು ಎಂದು ತಿಳಿದು ಬಂದಿದೆ.
ಈ ಸುದ್ದಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಹರಡುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಶಿವಾಜಿ ಅಭಿಮಾನಿಗಳು ಜಮಾಯಿಸಿದ್ದು ಕಾಕತಿ ಪೋಲೀಸ್ ಠಾಣೆಯ ಬಳಿ ಪರಿಸ್ಥಿತಿ ಉದ್ವಿಗ್ನವಾಗಿದೆ.
ಪೋಲೀಸರು ಕೆಲವರನ್ನು ಚದುರಿಸಿ ಕಳುಹಿಸಿದ್ದರೂ ಜನ ಗುಂಪು ಗುಂಪಾಗಿ ಬರುತ್ತಲೇ ಇದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ