ಇದು ರೆಡಿ ಆಗಿದ್ದು ಇಲ್ಲೇ…ಪೋಸ್ಟ್ ಆಗಿದ್ದು ಅಲ್ಲೇ….ಸಂಜಯ ರಾವುತನ ಹುಚ್ಚಾಟ ನಾ..ಒಲ್ಲೇ…!!!

ವ್ಯಂಗ್ಯ ಚಿತ್ರ ಬಿಡಿಸಿದ್ದು ಇಲ್ಲೇ ಟ್ವಿಟರ್ ಎಂಟ್ರಿ ಆಗಿದ್ದು ಅಲ್ಲೇ..ಸಂಜಯ ರಾವುತನ ಆಟ ನಾ..ಒಲ್ಲೇ…!!

ಬೆಳಗಾವಿ- ಮಹಾರಾಷ್ಟ್ರದಲ್ಲಿ ಮರಾಠಿಗರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿರುವ ಶಿವಸೇನೆ ಬೆಳಗಾವಿ ಗಡಿ ವಿಚಾರವನ್ನು ಕೆಣಕಿ, ಮುಗ್ದ ಮರಾಠಿಗರ ದಿಕ್ಕು ತಪ್ಪಿಸುವ ದುಸ್ಸಹಾಸ ಮಾಡುವ ಕಾರ್ಯ ಮಾಡುತ್ತಿದೆ.

ಸ್ವಾಭಿಮಾನಿ ಕನ್ನಡಿಗರ ಮತ್ತೆ ಕೆಣಕಿದ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಬೆಳಗಾಂವ ಫೈಲ್ಸ್’ ಅಂತಾ ಟ್ವಿಟ್ಟರ್‌ನಲ್ಲಿ ವಿವಾದಿತ ಪೋಸ್ಟ್ ಮಾಡಿ,ಮತ್ತೆ ಕಾಲು ಕೆದರಿ ಜಗಳಾಡುವ ಪುಂಡಾಟಿಕೆ ಶುರು ಮಾಡಿದ್ದಾರೆ.ಪದೇಪದೇ ಗಡಿವಿವಾದ ಕೆಣಕುತ್ತಿರುವ ಮಹಾರಾಷ್ಟ್ರ ಶಿವಸೇನೆ,
ದಿ ಕಾಶ್ಮೀರ ಫೈಲ್ಸ್ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆ ವೇಳೆಯೇ ಶಿವಸೇನೆ ನಾಯಕ ಸಂಜಯ ರಾವುತ ವಿವಾದಿತ ಪೋಸ್ಟ್ ಮಾಡಿದ್ದಾರೆ.

ಬೆಳಗಾವಿ ಫೈಲ್ಸ್ ಅಂತಾ ವಿವಾದಿತ ವ್ಯಂಗ್ಯ ಚಿತ್ರ ಪೋಸ್ಟ್ ಮಾಡಿದ ಸಂಜಯ್ ರಾವುತ್, ಬೆಳಗಾವ ಫೈಲ್ಸ್ ಏನು ಕಡಿಮೆ ಇದೆಯಾ? ಪ್ರಜಾಪ್ರಭುತ್ವದ ಹತ್ಯೆ ಎಂಬ ಬರಹ ಇರುವ ವಿವಾದಿತ ವ್ಯಂಗ್ಯ ಚಿತ್ರ ಪೋಸ್ಟ್ ಮಾಡಿದ್ದು,ಪೋಸ್ಟ್ ಮೂಲಕ ಬೆಳಗಾವಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ಆಗ್ತಿದೆ ಅಂತಾ ಬಿಂಬಿಸುವ ಯತ್ನ ಮಾಡಿದ್ದಾರೆ.

ದಿ ಕಾಶ್ಮೀರ್ ಫಾಯಿಲ್ಸ್ ಚಿತ್ರಕ್ಕಿಂತ ಬೆಳಗಾವಿ ಫಾಯಿಲ್ಸ್ ಭಯಾನಕವಾಗಿದೆ.ಬೆಳಗಾವಿ ಫಾಯಿಲ್ಸ್ ಚಿತ್ರ ಮಾಡಬೇಕು ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲೆ ಕರ್ನಾಟಕದ ಪೋಲೀಸರು ದೌರ್ಜನ್ಯ ವೆಸಗುತ್ತಿದ್ದಾರೆ. ಕರ್ನಾಟಕ ಸರ್ಕಾರ ಮರಾಠಿ ಭಾಷಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಸಂಜಯ ರಾವುತ್ ವ್ಯಂಗ್ಯ ಚಿತ್ರದ ಜೊತೆಗೆ ಟ್ವೀಟ್ ಮಾಡಿದ್ದಾರೆ

ಸಂಜಯ ರಾವುತ ಅವರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ವ್ಯಂಗ್ಯ ಚಿತ್ರವನ್ನು ಬೆಳಗಾವಿಯ ವ್ಯಂಗ್ಯ ಚಿತ್ರ ಕಲಾವಿದ ಜಗದೀಶ್ ಕುಂಟೆ ಅವರು ಬಿಡಿಸಿದ್ದಾರೆ.ಈ ಕಲಾವಿದ ತರುಣ ಭಾರತ ಮರಾಠಿ ದಿನಪತ್ರಿಕೆಯ ಗರಡಿಯಲ್ಲಿ ಪಳಗಿದ್ದು ಈಗ ಅವರು ಸ್ವತಂತ್ರವಾಗಿದ್ದಾರೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *