ಬೆಳಗಾವಿ- ಕೊರೋನಾ ಸೊಂಕು ಯಾವ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆಯೋ ಅಂತಹ 170 ಜಿಲ್ಲೆಗಳನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಿದ್ದು ಕೇಂದ್ರದ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯೂ ರೆಡ್ ಝೋನ್ ಪಟ್ಟಿಯಲ್ಲಿ ಸೇರಿಕೊಂಡಿದೆ.
ಕೇಂದ್ರ ಸರ್ಕಾರ ಕೊರೋನಾ ಸೊಂಕಿಗೆ ಸಮಂಧಿಸಿದಂತೆ, ಕೆಂಪು,ಹಳದಿ,ಮತ್ತು ಹಸಿರು ಹೀಗೆ ಮೂರು ವಲಯಗಳನ್ನಾಗಿ ವರ್ಗೀಕರಿಸಿದ್ದು ರೆಡ್ ಝೋನ್ ಗೆ ಸೇರ್ಪಡೆಯಾಗುವ ರಾಷ್ಟ್ರದ 170 ಜಿಲ್ಲೆಗಳ ಪಟ್ಟಿ ಮಾಡಿದೆ ಕರ್ನಾಟಕದ ಎಂಟು ಜಿಲ್ಲೆಗಳು ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ಎಂಟು ಜಿಲ್ಲೆಗಳಲ್ಲಿ,ಬೆಳಗಾವಿಯೂ ಇದೆ .
ಬೆಳಗಾವಿ ಜಿಲ್ಲೆ ಕೇಂದ್ರ ಸರ್ಕಾರದ ರೆಡ್ ಝೋನ್ ಪಟ್ಟಿಯಲ್ಲಿ ಸೇರಿಕೊಂಡಿರುವದರಿಂದ ,ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾಗೆ ಅಜ್ಜಿ ಸಾವನ್ನೊಪ್ಪಿರುವದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಟ್ಟು ನಿಟ್ಟಿನ ಲಾಕ್ ಡೌನ್ ಮುಂದುವರೆಯಲಿದೆ.