ಬೆಳಗಾವಿ, ಡಿಸೆಂಬರ್ ೨೭
ರಾಜ್ಯ ಪೊಲೀಸರು, ರಾಷ್ಟ್ರದಲ್ಲಿಯೇ ಅತ್ಯಂತ ದಕ್ಷತೆ ಹಾಗೂ ಶಿಸ್ತಿನ ಪೊಲೀಸ್ ಎಂಬ ಹೆಗ್ಗಳಿಕೆ ಹೊಂದಿದ್ದು, ಅವರ ಮನ ಸ್ಥೈರ್ಯ ಕುಗ್ಗಿಸುವ ಯಾವುದೇ ಪ್ರಯತ್ನವನ್ನು, ಖಂಡಿಸುವುದಾಗಿ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು ವಿಧಾನ ಸಭೆಯಲ್ಲಿ, ಗುಡುಗಿದ್ದಾರೆ.
ಇಂದು, ಸದನದಲ್ಲಿ, ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ, ಸಚಿವರು, ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣವನ್ನು, ಗೌಣವಾಗಿಸಿ, ಮಾತನಾಡಿ, ಹಿರಿಯ ಪೊಲೀಸ್ ಅಧಿಕಾರಿಗಳ ವೃತ್ತಿ ನಿಷ್ಠೆಯನ್ನು ಪ್ರಶ್ನೆ ಮಾಡಿದ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ನಡವಳಿಕೆ ಖಂಡನೀಯ, ಎಂದರು.
ಮಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಹಿಂದೆ ಭಾರಿ ಸಂಚು ಇದ್ದು, ಎನ್ಐಎ ಸಂಸ್ಥೆ ತನಿಖೆ ಕೈಗೊಂಡಿದೆ, ಅದೃಷ್ಟವಶಾತ್ ಭಾರಿ ಅನಾಹುತವೊಂದು ಕೂದಲೆಳೆ ಯಲ್ಲಿ ತಪ್ಪಿ ಹೋಗಿದೆ.
ಆದರೆ ಘಟನೆ ಸಂಬಂಧ, ಕಾಂಗ್ರೆಸ್ ನಾಯಕರು, ಹಿರಿಯ ಪೊಲೀಸ್ ಅಧಿಕಾರಿಯನ್ನು, ಗುರಿಯಾಗಿಸಿ, ಟೀಕೆ ಮಾಡಿರುವುದು, ಶೋಭೆ ತರುವ ವಿಷಯವಲ್ಲ ಎಂದ ಸಚಿವರು ” ಭಯೋತ್ಪಾದನೆ ಸಂಚಿನ ವಿರುದ್ಧ ಪಕ್ಷ ಭೇಧ ಮರೆತು, ಸ್ಪಷ್ಟ ಸಂದೇಶ ರವಾನಿಸ ಬೇಕು” ಎಂದು ಆಗ್ರಹಿಸಿದರು.
ಒಂದು ವೇಳೆ ಕುಕ್ಕರ್ ಬಾಂಬರ್ ಬದುಕಿ ಉಳಿಯದಿದ್ದಲ್ಲಿ, ಸ್ಫೋಟ ಕೃತ್ಯದ ರೂವಾರಿಗಳು ಯಾರು ಎನ್ನುವ ಪ್ರಶ್ನೆ ಹಾಗೂ ಅನುಮಾನಗಳು ಬೇರೆ ಕೊಮುಗಳವರ ಮೇಲೆ ಉಳಿದು ಹೋಗುತ್ತಿದ್ದವು, ಎಂದು ಸಚಿವರು ಹೇಳಿದರು.
ಪ್ರಸ್ತುತ ಸ್ಫೋಟದಲ್ಲಿ ಗಾಯಗೊಂಡಿರುವ, ಕುಕ್ಕರ್ ಬಾಂಬರ್, ಆಸ್ಪತ್ರೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದು, ತನಿಖೆ ನಡೆಸುತ್ತಿರುವ ಪೊಲೀಸರು, ಮಹತ್ವದ ಮಾಹಿತಿ ಯನ್ನು ಕಲೆ ಹಾಕುತ್ತಿದ್ದಾರೆ, ಎಂದರು.
Eom