ಪಾಲಿಕೆ ಆಸ್ತಿ ಗುಳುಂ ACB ಪೋಲೀಸರ ಕಾರ್ಯಾಚರಣೆ ನಾಲ್ವರ ಬಂಧನ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಖುಲ್ಲಾ ಜಾಗೆಗಳ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಅಮಾಯಕರಿಗೆ ಮಾರಾಟ ಮಾಡಿದ ಜಾಲವನ್ನು ಎಸಿಬಿ ಪೋಲೀಸರು ಪತ್ತೆಮಾಡಿದ್ದಾರೆ
ಪಾಲಿಕೆ ಆಸ್ತಿಯನ್ನು ಬೇರೆಯವರ ಹೆಸರಿನಲ್ಲಿ ಖರೀಧಿ ಮಾಡಿ ಪಾಲಿಕೆಯ ಖುಲ್ಲಾ ಜಾಗೆಗಳನ್ನು ಗುಳುಂ ಮಾಡಿದ ನಾಲ್ವರು ಖದೀಮರನ್ನು ಎಸಿಬಿ ಪೋಲೀಸರು ಬಂಧಿಸಿದ್ದಾರೆ
ಈ ಪ್ರಕರಣಕ್ಕೆ ಸಮಂಧಿಸಿದಂತೆ ಮಲಪ್ರಭಾ ಭರಮಾ ಅಜರೇಕರ ಶಹಾಪೂರ ಮತ್ತು ಬೆಳಗಾವಿ ಶಮೀಮಾ ಬಾನು ರಪೀಕ ಅಹ್ಮದ ಇನಾಮದಾರ ರಾಯಲ್ ಸ್ಕೂಲ್ ಪ್ರಿನ್ಸಿಪಲ್ ಸುಭಾಷ್ ನಗರ ಬೆಳಗಾವಿ ಇವರನ್ನು ಎಸಿಬಿ ಕಸ್ಟಡಿಗೆ ತೆಗೆದುಕೊಂಡಿರುವ ಎಸಿಬಿ ಪೋಲೀಸರು ಮಂಗಳವಾರ ಕಸ್ಟಡಿಗೆ ತೆಗೆದುಕೊಂಡ ಆರೋಪಿಗಳ ಆರೋಗ್ಯ ತಪಾಸಣೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಮಾಡಲಾಯಿತು
ಬೆಂಗಳೂರ ಸರ್ವೆ ಇಲಾಖೆ ಸಿಎಲ್ ಶ್ರೀಧರ ಅವರು ಪಾಲಿಕೆ ಆಸ್ತಿ ಗುಳುಂ ಮಾಡಿರುವ ಬಗ್ಗೆ ಎಸಿಬಿ ಪೋಲೀಸರಿಗೆ ದೂರು ನೀಡಿದ್ದರು
ಪ್ರಕರಣ ದಾಖಲಿಸಿಕೊಂಡ ಎಸಿಬಿ ಪೋಲೀಸರು ಮುಖ್ಯ ಆರೋಪಿ ರಾಯಲ್ ಸ್ಕೂಲ್ ಪ್ರನ್ಸಿಪಲ್ ಶಮೀಮಾ ಬಾನೋ ಅವರ ಮನೆ ತಪಾಸಣೆ ಮಾಡಿದಾಗ ಅನೇಕ ಖೊಟ್ಟಿ ದಾಖಲೆಗಳು ಸಿಕ್ಕಿರುವ ಹಿನ್ನಲೆಯಲ್ಲಿ ಎಸಿಬಿ ಪೋಲೀಸರು ಶಮೀಮಾ ಇನಾಮದಾರ ಎಂಬಾತಳನ್ನು ಕಸ್ಟಡಿಗೆ ತೆಗೆದುಕೊಂಡು ಹೆಚ್ವಿನ ವಿಚಾರಣೆ ನಡೆಸಿದ್ದಾರೆ