ಕೇಂದ್ರ ಕಾನೂನು ಆಯೋಗದ ಕಾಯ್ದೆ ತಿದ್ದುಪಡಿಗೆ ವಕೀಲರ ವಿರೋಧ

ಬೆಳಗಾವಿ- ಕೇಂದ್ರ ಕಾನೂನು ಆಯೋಗ ವಕೀಲರಿಗೆ ಮಾರಕವಾಗುವ ತಿದ್ದುಪಡಿ ತರಲು ಹೊರಟಿದ್ದು ಇದಕ್ಕೆ ಬೆಳಗಾವಿ ವಕೀಲರ ಸಂಘ ತೀವ್ರ ವಿರೋಧ ವ್ಯೆಕ್ತಪಡಿಸಿದೆ

ನಗರದಲ್ಲಿ ಪ್ರತಿಭಟನೆ ನಡೆಸಿದ ವಕೀಲರ ಸಂಘದ ಸದಸ್ಯರು ಕೇಂದ್ರ ಕಾನೂನು ಆಯೋಗ ಶಿಸ್ತು ಸುಧಾರಣಾ ಸಮೀತಿಯಲ್ಲಿ ಖಾಸಗಿ ವ್ಯೆಕ್ತಿಗಳನ್ನು ಸೇರಿಸುವ ಮತ್ತು ಕೇಂದ್ರ ವಕೀಲರ ಪರಿಷತ್ತು ಮತ್ತು ರಾಜ್ಯ ವಕೀಲರ ಪರಿಷತ್ತಿನ ಹಕ್ಕುಗಳನ್ನು ಮತ್ತು ಸ್ವತಂತ್ರತೆಯನ್ನು ಕಸಿದುಕೊಳ್ಳುವ ತಿದ್ದುಪಡಿಗಳನ್ನು ತರಲು ಹೊರಟಿದ್ದು ಇದಕ್ಕೆ ಅವಕಾಶ ನೀಡಬಾರದು ಎಂದು ವಕೀಲರು ಒತ್ತಾಯಿಸಿದರು

ಕೇಂದ್ರ ಕಾನೂನು ಆಯೋಗದ ಕಾಯ್ದೆಯಲ್ಲಿ ವಕೀಲರಿಗೆ ಪೂರಕವಾಗುವ ಅಂಶಗಳನ್ನು ಅಳವಡಿಸಿ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ನ್ಯಾಯವಾದಿಗಳು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರದ ಕಾನೂನು ಸಚಿವರಲ್ಲಿ ಮನವಿ ಮಾಡಿಕೊಂಡರು

ಎಸ್ ಎಸ್ ಕಿವಡಸಣ್ಣವರ.ಪ್ರವೀಣ ಅಗಸಗಿ.ಎಜಿ ಮುಳವಾಡಮಠ,ಎ ಆರ್ ಪಾಟೀಲ ಜಿ ಎಸ್ ಯಳ್ಳೂರು ಎಸ್ ವಾಯ್ ಜೋಡಗುಂದಿ ಆರ್ ಪಿ ಪಾಟೀಲ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿದಿದ್ದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *