ಬೆಳಗಾವಿ- ಬೆಳಗಾವಿ ಸಾಂಬ್ರಾ ವಿಮಾನ ನಿಲ್ಧಾಣದ ರನ್ ವೇ ಅಗಲೀಕರಣವಾದ ಬಳಿಕ ಮೊದಲ ಬಾರಿಗೆ ಬೆಳಗಾವಿಯಲ್ಲಿ ಇಂಡಿಗೋ ಏರ್ ಬಸ್ ಆಗುವ ಮೂಲಕ ಹೊಸ ಇತಿಹಾಸ ಸೃಷ್ಠಿ ಮಾಡಿದೆ.
ಯಾಕಂದ್ರೆ ಮಲೇಶಿಯಾದ ಕಾಲಲಾಂಪೂರದಿಂದ 132 ವಿದ್ಯಾರ್ಥಿಗಳನ್ನು ಇಂಡಿಗೋ ಏರ್ ಬಸ್ ವಿಮಾನ ಬೆಳಗಾವಿ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ತಲುಪಿಸಿದ್ದು ಬೆಳಗಾವಿ ಇರಿಹಾಸದಲ್ಲೇ ಮೊದಲ ಬಾರಿಗೆ ಏರ್ ಬಸ್ ಲ್ಯಾಂಡ್ ಆಗಿರು ದು ಸಂತಸದ ಸಂಗತಿಯಾಗಿದ್ದು, ಏರ್ ಬಸ್ ಬೆಳಗಾವಿಯ ರನ್ ವೇ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆಗಿದೆ.
1999 ರಲ್ಲಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ಧಾಣದ ಅಭಿವೃದ್ಧಿ ಕಾಮಗಾರಿಯನ್ನುಆರಂಭಿಸಲಾಗಿತ್ತು,ಈ ಕಾಮಗಾರಿ 2016 ರಲ್ಲಿ ಮುಕ್ತಾಯಗೊಂಡಿತ್ತು ಇದಾದ ಬಳಿಕ ಮೊದಲ ಬಾರಿಗೆ ಏರ್ ಬಸ್ ಲ್ಯಾಂಡ್ ಆಗುವ ಮೂಲಕ ಹೊಸ ಪರ್ವ ಆರಂಭಿಸಿದೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಇವತ್ತು ಏರ್ ಬಸ್ ಲ್ಯಾಂಡ್ ಆಗಿದ್ದು ಇನ್ನು ಮುಂದೆ ಕಾರ್ಗೋ ವಿಮಾನಗಳು ಬೆಳಗಾವಿಯಲ್ಲಿ ಲ್ಯಾಂಡ್ ಆಗುವ ಕಾಲ ದೂರ ಉಳಿದಿಲ್ಲ.
ಬೆಳಗಾವಿಯಿಂದ ಕಾರ್ಗೋ ವಿಮಾನ ಸೇವೆ ಆರಂಭವಾದರೆ ಇಲ್ಲಿ ಬೆಳೆಯುವ ಬೆಳೆಗಳನ್ನು ಇಲ್ಲಿ ಉತ್ಪಾದಿಸುವ ಕುಂದಾ ಕರದಂಟು ಸೇರಿದಂತೆ ಇತರ ಪದಾರ್ಥಗಳನ್ನು ರಪ್ತು ಮಾಡಬಹುದಾಗಿದೆ.
ಇಂದು ಮಲೇಶಿಯಾದಿಂದ ಬೆಳಗಾವಿಗೆ ಬಂದಿರುವ 132 ವಿದ್ಯಾರ್ಥಿಗಳು ಕೆ ಎಲ್ ಇ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಲಿದ್ದಾರೆ.