ಬೆಳಗಾವಿ- ಮಾನವೀಯತೆ ಅನ್ನೋದು ಎಲ್ಲ ಧರ್ಮ ಜಾತಿಗಳನ್ನು ಮೀರಿದ್ದು,ಎನ್ನುವದನ್ನು ಬೆಳಗಾವಿಯ ಮುಸ್ಲಿಂ ಯುವಕರು ತೋರಿಸಿದ್ದಾರೆ,ಕೊರೋನಾ ಮಹಾಮಾರಿಯಿಂದ ಮೃತಪಟ್ಟ ಬೆಳಗಾವಿಯ 70 ವರ್ಷದ ವೃದ್ದನನ್ನು ಮುಸ್ಲಿಂ ಯುವಕರು ಹಿಂದೂ ಧರ್ಮದ ವಿಧಿವಿದಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದಿದ್ದಾರೆ.
ನಿನ್ನೆ ರಾತ್ರಿ ಬೆಳಗಾವಿ ಮಹಾನಗರದ ಸರಾಫ್ ಗಲ್ಲಿಯಲ್ಲಿ ಕೊರೋನಾ ಮಹಾಮಾರಿಯಿಂದ 70 ವರ್ಷದ ವ್ಯೆಕ್ತಿಯೊಬ್ಬ ಮೃತ ಪಟ್ಟಿದ್ದ,ಕೊರೋನಾಗೆ ಹೆದರಿ ಅಂತ್ಯಕ್ರಿಯೆಗೆ ಜನ ಬಾರದ ಹಿನ್ನಲೆಯಲ್ಲಿ ಮುಸ್ಲೀಂ ಯುವಕರೇ ಮೃತ ವ್ಯೆಕ್ತಿಯ ಅಂತ್ಯಕ್ರಿಯೆ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ
ಬೆಳಗಾವಿಯ ಸರಾಫ್ ಗಲ್ಲಿಯಿಂದ ಮೃತ ವ್ಯೆಕ್ತಿಯ ಶವವನ್ನು ಅಂಬ್ಯಲೆನ್ಸ್ ನಲ್ಲಿ ಸದಾಶಿವ ನಗರದ ಸ್ಮಶಾನಕ್ಕೆ ತಂದರು,ಮುಸ್ಲಿಂ ಯುವಕರೇ ಚಿತಾಗಾರದಲ್ಲಿ ಕಟ್ಟಿಗೆಗಳನ್ನು ಕೂಡಿಸಿದರು,ದೂರದಲ್ಲಿ ನಿಂತು ಅರ್ಚಕರು ಹೇಳಿದಂತೆ ಹಿಂದೂ ಧರ್ಮದ ವಿಧಿವಿಧಾನಗಳನ್ನು ನೆರವೇರಿಸಿದ ಮುಸ್ಲಿಂ ಯುವಕರು ವೃದ್ಧನ ಅಂತ್ಯಕ್ರಿಯೆ ಮುಗಿಸಿದ್ದಾರೆ.
ಬೆಳಗಾವಿಯ ಅಂಜುಮನ್ ಸಂಸ್ಥೆಯ ಅದ್ಯಕ್ಷ ರಾಜು ಸೇಠ ಅವರು ಅಂತ್ಯಕ್ರಿಯೆ ಗಾಗಿಯೇ ಯುವಕರ ತಂಡವೊಂದನ್ನು ನಿಯೋಜಿಸಿದ್ದಾರೆ,ಈ ತಂಡ ಯಾವುದೇ ಧರ್ಮ ಜಾತಿ ಲೆಕ್ಕಿಸದೇ ಬೆಳಗಾವಿ ಜಿಲ್ಲೆಯ ಹಳ್ಳಿಗಳಿಗೂ ಹೋಗಿ ಪ್ರಚಾರದ ಹಂಗಿಲ್ಲದೇ ನೂರಾರು ಜನರ ಅಂತ್ಯಕ್ರಿಯೆ ಮಾಡಿದೆ.
ಬೆಳಗಾವಿ ಮಹಾನಗರದಲ್ಲೂ ಇದೇ ಯುವಕರ ತಂಡ ಜೀವದ ಹಂಗು ತೊರೆದು, ಜಾತಿ ಧರ್ಮ ನೋಡದೇ ನೂರಾರು ಮೃತರ ಅಂತ್ಯಕ್ರಿಯೆ ಮುಗಿಸಿದೆ.
ಬೆಳಗಾವಿಯ ಅಂಜುಮನ್ ಸಂಸ್ಥೆಯು ಕೊರೋನಾ ರೋಗಿಗಳಿಗಾಗಿ ಆಕ್ಸಿಝನ್ ವ್ಯೆವಸ್ಥೆ ಮಾಡಿತ್ತು ಈಗ ಇದೇ ಸಂಸ್ಥೆ ಅಂಜುಮನ್ ಎ ಇಸ್ಲಾಂ ಫಿನುರಲ್ ಟೀಂ ಕಟ್ಟಿಕೊಂಡು ಸದ್ದಿಲ್ಲದೇ ಪುಣ್ಯದ ಕಾರ್ಯವನ್ನು ಮುಂದುವರೆಸಿದೆ.
ಒಂದು ಫೋನ್ ಮಾಡಿದ್ರೆ ಸಾಕು ಈ ಮುಸ್ಲೀಂ ಯುವಕರು ಸೇವೆಗೆ ಧಾವಿಸುತ್ತಾರೆ.