Breaking News

ಬೆಳಗಾವಿ ಎಪಿಎಂಸಿ ಎಂಈಎಸ್ ಗೆ ಸಮಾಧಾನ.ಕಾಂಗ್ರೆಸ್ ಗೆ ವರದಾನ.ಬಿಜೆಪಿಗೆ ಅವಮಾನ

ಬೆಳಗಾವಿ- ಗೆದ್ದವರನೆಲ್ಲ ನಮ್ಮವರೇ ಎಂದು ಭಗವಾ ಪೇಟಾ ಸುತ್ತಿ ,ಬುಟ್ಟಿಗೆ ಹಾಕಿಕೊಂಡ ಎಂಈಎಸ್ ನಾಯಕರು ಬೆಳಗಾವಿ ಎಪಿಎಂಸಿ ಯಲ್ಲಿ ಭಗವಾ ಫಡಕಲಾ..ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ

ಬೆಳಗಾವಿ ಎಪಿಎಂಸಿ ಯಲ್ಲಿ ಒಟ್ಟು ಹನ್ನೆರಡು ಸ್ಥಾನಗಳ ಪೈಕಿ ಎಂಈಎಸ್  ಆರು ಸ್ಥಾನಗಳಲ್ಲಿ ಗೆಲವು ಸಾಧಿಸಿದೆ ಬಿಜೆಪಿ ಕೇವಲ ಹಿರೇಬಾಗೇವಾಡಿಯಲ್ಲಿ ಮಾತ್ರ ಗೆಲವು ಸಾಧಿಸಿದ್ದು ಕಾಂಗ್ರೆಸ ನಾಲ್ಕು ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಎಂಈಎಸ್ ಭಧ್ರಕೋಟೆಗೆ ಲಗ್ಗೆ ಇಟ್ಟಿದೆ

ಈ ಚುನಾವಣೆಯಲ್ಲಿ ಇನ್ನೊಂದು ವಿಶೇಷ ಏನೆಂದರೆ ಸಾಂಬ್ರಾ,ಮತ್ತು ಬೆಳಗುಂದಿಯಲ್ಲಿ ವಿಜಯ ಸಾಧಿಸಿದ ಅಭ್ಯರ್ಥಿಗಳು ನಮ್ಮ ಅಭ್ಯರ್ಥಿಗಳು ಎಂದು   ಎಂಈಎಸ್  ನಾಯಕರು ಹೇಳಿಕೊಂಡರೆ ಇತ್ತ ಬಿಜೆಪಿ ಇವರು ನಮ್ಮವರು ಎಂದು ಪ್ರತಿಪಾದಿಸಿದೆ ಇದನ್ನು ಗಮನಿಸಿದರೆ ಬೆಳಗಾವಿ ಎಪಿಎಂಸಿ ಅತಂತ್ರವಾಗಿರುವದು ಸ್ಪಷ್ಠವಾಗಿದೆ

ಇಲ್ಲಿ ಯಾರು ಬಹುಮತ ಸಾಧಿಸುತ್ತಾರೆ ಅನ್ನೋದು ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿಯೇ ಗೊತ್ರಾಗಲಿದೆ ಅಲ್ಲಿಯವರೆಗೆ ಗೆದ್ದವರು ಚಕ್ಕರ್ ಹೊಡೆಯುವದು ಗ್ಯಾರಂಟಿ

ಬೆಳಗಾವಿ

ಈಗ ಹನ್ನೆರಡು ಕ್ಷೇತ್ರಗಳಲ್ಲಿ ಬೆಳಗಾವಿ ನಗರ ಎಪಿಎಂಸಿ ಮತಕ್ಷೇತ್ರದಲ್ಲಿ ಚಂದ್ರಕಾಂತ ಕುಂಡಸ್ಕರ್ ಹಾಗು ಎಂಈಎಸ್ ನ ತಾನಾಜಿ ಪಾಟೀಲ ನಡುವೆ ಜಿದ್ಸಾ ಜಿದ್ದಿಯ ಸ್ಪರ್ಧೆ ನಡೆಯಿತು ಮೂರು ಬಾರಿ ನಡೆದ ಮತ ಎಣಿಕೆಯಲ್ಲಿ ಪ್ರಥಮ ಬಾರಿಗೆ ಕುಂಡಸ್ಕರ್ ಗೆದ್ದರು ಎಂದು ಗೊತ್ತಾಯಿತು ನಂತರ ಅಂತಿಮವಾಗಿ ನಡೆದ ಮತಗಳ ಕೌಂಟ್ ನಲ್ಲಿ ತಾನಾಜಿ ಪಾಟೀಲ ಗೆಲುವಿನ ನಗೆ ಬೀರಿದರು ಇದೇ ಕ್ಷೇತ್ರದಿಂದ ಸ್ಪರ್ದಿಸಿದ್ದ ಹಾಲಿ ಎಪಿಎಂಸಿ ಅಧ್ಯಕ್ಷ ಶಿವನಗೌಡ ಪಾಟೀಲ ಮೂರನೇಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು

ತಾನಾಜಿ ಪಾಟೀಲ 1078 ಮತಗಳನ್ನು ಪಡೆದು ವಿಜಯ ಶಾಲಿಗಳಾದರು ಚಂದ್ರಕಾಂತ ಕುಂಡಸ್ಕರ್ 1070 ಮತಗಳನ್ನು ಪಡೆದು ಎರಡನೇಯ ಸ್ಥಾನ ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಶಿವನಗೌಡ ಪಾಟೀಲ 645 ಮತಗಳನ್ನು ಪಡೆದು ಮೂರನೇಯ ಸ್ಥಾನ ಪಡೆದರು

ಕಾಕತಿ ಮತಕ್ಷೇತ್ರ

ಕಾಂಗ್ರೆಸ್ಸಿನ ಆನಂದ ಕೃಷ್ಣಾ ಪಾಟೀಲ ಅವರು 2339 ಮತಗಳನ್ನು ಪಡೆದು ಗೆಲವು ಸಾಧಿಸಿದರೆ ಎಂಈಎಸ್ ಅಭ್ಯರ್ಥಿ ವಿಶ್ವನಾಥ ಜ್ಯೋತಿಬಾ ಪಾಟೀಲ 1752 ಮತಗಳನ್ನು ಪಡೆದು ಪರಾಭವಗೊಂಡರು

ಹಿರೇಬಾಗೇವಾಡಿ

ಬಿಜೆಪಿಯ ರೇಣುಕಾ ಫಡಿಗೌಡ ಪಾಟೀಲ1765 ಮತಗಳನ್ನು ಪಡೆದು ಗೆಲುವನ್ನು ತಮ್ಮದಾಗಿಸಿಕೊಂಡರೇ ಕಾಂಗ್ರೆಸ ಅಭ್ಯರ್ಥಿ ಜಯಶ್ರೀ ಪ್ರಕಾಶ ಜಪ್ತಿ1527 ಮತಗಳನ್ನು ಪಡೆದು ಪರಾಭವಗೊಂಡರು

ಸಾಂಬ್ರಾ

ಎಂಈಎಸ್ ಅಭ್ಯರ್ಥಿ ಲಗಮಪ್ಪ ಭೀಮಪ್ಪ ನಾಯಕ 2149 ಮತಗಳನ್ನು ಪಡೆದು ಗೆಲವು ಸಾಧಿಸಿದರೆ ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಕಲ್ಲಪ್ಪ ಸೀತಾಮನಿ 1712 ಮತ ಪಡೆದು ಪರಾಭವಗೊಂಡರು

ಉಚಗಾಂವ

ಮಾಜಿ ಬುಡಾ ಅಧ್ಯಕ್ಷ ಕಾಂಗ್ರೆಸ್ ಅಭ್ಯರ್ಥಿ   ಯುವರಾಜ ಕದಂ1867 ಮತಗಳನ್ನು ಪಡೆದು ವಿಜಯಮಾಲೆ ತಮ್ಮ ಕೊರಳಿಗೆ ಹಾಕಿ ಕೊಂಡರೆ ಅವರ ಪ್ರತಿಸ್ಪರ್ಧಿ ಎಂಈಎಸ್ ನಕಾಶಿನಾಥ ನಾಯಿಕ 1102 ಮತಗಳನ್ನು ಪಡೆದು ಪರಾಭವಗೊಂಡರು

ಬಸವನ ಕುಡಚಿ

ಕಾಂಗ್ರೆಸ್ಸಿನ ಸುಧೀರ ನಾಗೇಶ ಗಡ್ಡೆ ಅವರು 946 ಮತಗಳನ್ನು ಪಡೆದು ವಿಜಯಶಾಲಿಗಳಾದರು ಇವರ ಪ್ರತಿಸ್ಪರ್ಧಿ ಬಿಜೆಪಿಯ ಯಲ್ಲಪ್ಪ ಕುರಬರ 710 ಮತಗಳನ್ನು ಪಡೆದು ಸೋತರು

ದೇಸೂರ

ಕಾಂಗ್ರೆಸ್ ಅಭ್ಯರ್ಥಿ ಸಂಜೀವ ಕಲ್ಲೊಳ್ಳಿ ಮಾದರ 2028 ಮತಗಳನ್ನು ಪಡೆದು ಭರ್ಜರಿ ಗೆಲವು ಸಾಧಿಸಿದರೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಪರಶರಾಮ ಕೋಲಕಾರ 1718 ಮತ ಪಡೆದು ಪರಾಭವಗೊಂಡರು

ಬೆಳಗುಂದಿ

ಎಂಈಎಸ್ ಅಭ್ಯರ್ಥಿ ಜಾಧವ ನಿಂಗಪ್ಪ ವಿಠ್ಠಲ ,1530 ಮತಗಳನ್ನು ಪಡೆದು ಗೆದ್ದರೆ ಎಂಈಎಸ್ ಕಿಣೇಕರ ಗುಂಪಿನ ನಿಂಗಪ್ಪ ಮೋರೆ1346 ಮತ ಪಡೆದು ಸೋತರು

ಪೀರಣವಾಡಿ

ಎಂಈಎಸ್ ಅಭ್ಯರ್ಥಿ ಆರ್ ಕೆ ಪಾಟೀಲ 1155 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರೆ ಸಾವಂತ ಪಾಟೀಲ555 ಮತಗಳನ್ನು ಪಡೆದು ಸೋಅನುಭವಿಸಿದರು

ಯಳ್ಳೂರ

ಎಂಈಎಸ್ ಅಭ್ಯರ್ಥಿ ಮಹೇಶ ಜುವೇಕರ 883 ಮತಗಳನ್ನು ಪಡೆದು ಗೆದ್ದರೆ ಅವರ ಪ್ರತಿಸ್ಪರ್ಧಿ ಎಂಈಎಸ್ ಬಂಡಾಯ ಅಭ್ಯರ್ಥಿ ಅಮೋಲ ದೇಸಾಯಿ ,460 ಮತಗಳನ್ನು ಪಡೆದು ಸೋಲು ಅನುಭವಿಸಿದರು

ವರ್ತಕರ ಮತದಾರ ಕ್ಷೇತ್ರ

ಎಂಈಎಸ್ ಅಭ್ಯರ್ಥಿ ಮಹೇಶ ಕುಗಜಿ 285 ಮತಗಳನ್ನು ಪಡೆದು ವಿಜಯಶಾಲಿಗಳಾದರು ಅವರ ಪ್ರತಿಸ್ಪರ್ಧಿ ಬಸವಂತ ಮಾಯನ್ನಾಚೆ 280 ಮತ ಪಡೆದು ಪರಾಭವಗೊಂಡರು

ಹುದಲಿ

ಹುದಲಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿರುವದನ್ನು ನಾವಿಲ್ಲಿ ಸ್ಮರಿಸಬಹುದು

 

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *