ಬೆಳಗಾವಿ- ಫೆ ೧೮ ರಂದು ಬೆಳಗಾವಿ ಎಪಿಎಂಸಿ,ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಬಿಜೆಪಿ ಕಸರತ್ತು ನಡೆಸಿದರೆ ಎಂಈಎಸ್ ಎರಡೂ ಪಕ್ಷಗಳನ್ನು ಮೀರಿಸಿ ಎಪಿಎಂಸಿಯಲ್ಲಿ ಅಧಿಕಾರ ಹಿಡಿಯುವ ತಂತ್ರ ರೂಪಿಸಿದೆ
ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಾಧಿಸಲು ಕೇವಲ ಒಬ್ಬ ಸದಸ್ಯನ ಬೆಂಬಲ ಬೇಕಾಗಿದೆ ಆದರೆ ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪುಗಳಾಗಿದ್ದು ಒಂದು ಗುಂಪು ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ
ಎಂಈಎಸ್ ನಲ್ಲಿಯೂ ಎರಡು ಗುಂಪುಗಳಿವೆ ಕಿಣೇಕರ ಗುಂಪು ಶಿವಾಜಿ ಸುಂಠಕರ ಅವರ ಎರಡು ಗುಂಪುಗಳಿದ್ದು ಶಿವಾಜಿ ಸುಂಠಕರ ಗುಂಪು ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ ಇಲ್ಲವಾದಲ್ಲಿ ಬಿಜೆಪಿ ಶಿವಾಜಿ ಸುಂಠಕರ ಗುಂಪಿಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ
ಒಟ್ಟಾರೆ ಬೆಳಗಾವಿಯ ಎಪಿಎಂಸಿ ಅತಂತ್ರವಾಗಿದ್ದು ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ ಶಮನವಾದಲ್ಲಿ ಮಾಜಿ ಬುಡಾ ಅಧ್ಯಕ್ಷ ಯುವರಾಜ ಕದಂ ಎಪಿಎಂಸಿ ಅಧ್ಯಕ್ಷರಾಗುವ ಸಾಧ್ಯತೆ ಇದೆ