ಬೆಳಗಾವಿ-ಶನಿವಾರ ನಡೆದ ಬೆಳಗಾವಿ ಎಪಿಎಂಸಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಗುಂಪಿಗೆ ಅದೃಷ್ಟ ಒಲಿದಿದೆ ಎಂಈಎಸ್ ನ ನಿಂಗಪ್ಪ ಜಾಧವ ಅವರು ಅಧ್ಯಕ್ಷರಾಗಿ
ಹಿರೇ ಬಾಗೇವಾಡಿ ಕ್ಷೇತ್ರದ ಬಿಪಿಯ ರೇಣುಕಾ ಪಾಟೀಲ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ
ಸತೀಶ ಜಾರಕಿಹೊಳಿ ಬಣದಿಂದ ನಿಂಗಪ್ಪ ಜಾಧವ ರಮೇಶ ಜಾರಕಿಹೊಳಿ ಬಣದಿಂದ ಯುವರಾಜ ಕದಂ ಹಾಗು ಎಂಈಎಸ್ ದಿಂದ ತಾನಾಜಿ ಪಾಟೀಲ ಅವರು ನಾಮ ಪತ್ರ ಸಲ್ಲಿಸಿದ್ದರು
ಉಪಾಧ್ಯಕ್ಷ ಸ್ಥಾನಕ್ಕಾಗಿ ಸುಧೀರ ಗಡ್ಡೆ ಹಾಗು ರೇಣುಕಾ ಪಾಟೀಲ ಅವರು ನಾಮ ಪತ್ರ ಸಲ್ಲಿಸಿದ್ದರು ನಂತರ ನಡೆದ ಮತದಾನದಲ್ಲಿ ಯುವರಾಜ ಕದಂ,ಹಾಗು ನಿಂಗಪ್ಪ ಜಾಧವ ಅವರು ತಲಾ ೭ ಮತಗಳನ್ನು ಪಡೆದುಕೊಂಡರು ಇಬ್ಬರು ಚೀಟಿ ಎತ್ತುವ ನಿರ್ಧಾರಕ್ಕೆ ಒಪ್ಪಿಕೊಂಡಾಗ ಚುನಾವಣಾ ಅಧಿಕಾರಿ ಯಾಗಿದ್ದ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಚೀಟಿ ಎತ್ತಿ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿದರು
ನಂತರ ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ಎಂಈಎಸ್ ನ ನಿಂಗಪ್ಪ ಜಾಧವ ಅವರು ಅದ್ಯಕ್ಷರಾಗಿ ಆಯ್ಕೆಯಾದರು ಉಪಾಧ್ಯಕ್ಷರಾಗಿ ಬಿಜೆಪಿಯ ರೇಣುಕಾ ಪಾಟೀಲ ಅವರು ಆಯ್ಕೆಯಾದರು
ಸತೀಶ ಜಾರಕಿಹೊಳಿ ಗುಂಪಿನ ಸದಸ್ಯರು ಬೆಂಗಳೂರಿನಿಂದ ನೇರವಾಗಿ ಬೆಳಗಾವಿ ಎಪಿಎಂಸಿಗೆ ಆಗಮಿದಿದರು
ಕಾಂಗ್ರೆಸ್ ಹಿರಿಯ ಸದಸ್ಯ ಯುವರಾಜ ಕದಂ ಅವರಿಗೆ ಹಿನ್ನಡೆಯಾಯಿತು ಬೆಳಗಾವಿ ಎಪಿಎಂಸಿಯಲ್ಲಿ ನಡೆದ ರಾಜಕೀಯ ಕಾದಾಟದಲ್ಲಿ ಸತೀಶ ಜಾರಕಿಹೊಳಿ ಮೇಲುಗೈ ಸಾಧಿಸಿದರು
ಬೆಳಗಾವಿ ಎಪಿಎಂಸಿ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಅವರು ಜ್ಯಾಕ್ ಪಾಟ್ ಹೊಡೆದರು ಸತೀಶ ಜಾರಕಿಹೊಳಿ ಅವರ ಕೃಪಾ ಕಟಾಕ್ಷದಿಂದ ಎಂಈಎಸ್ ಅಧಿಕಾರದ ಗದ್ದುಗೆ ಏರಿತು ಜೊತೆಗೆ ಅಧಿಕಾರಕ್ಕಾಗಿ ಕಾಂಗ್ರೆಸ,ಎಂಈಎಸ್ ಹಾಗು ಬಿಜೆಪಿಯ ಮೈತ್ರಿಯ ತ್ರಿವಳಿ ಸಂಗಮ ಏರ್ಪಟ್ಟಿತು