ಬೆಳಗಾವಿ- ಸೋಮವಾರ ಬೆಳಗಾವಿ ಎಪಿಎಂಸಿ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನೇತ್ರತ್ವದಲ್ಲಿ ಎಪಿಎಂಸಿ ಸದಸ್ಯರ ಮಹತ್ವದ ಸಭೆ ನಡೆಯಿತು
ನಗರದ ಸರ್ಕ್ಯುಟ್ ಹೌಸ್ ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಎಲ್ಲ ಕಾಂಗ್ರೆಸ್ ಸದಸ್ಯರು ಹಾಗು ಕಾಂಗ್ರೆಸ್ ಬೆಂಬಲಿತ ಸದಸ್ಯರು ಸಭೆಯಲ್ಲಿ ಭಾಗ ವಹಿಸಿದ್ದರು ಅದ್ಯಕ್ಷ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಯುವರಾಜ ಕದಂ ಹಾಗೂ ಸುಧೀರ ಗಡ್ಡೆ ಅವರ ಹೆಸರು ಪ್ರಸ್ತಾಪವಾಯಿತು ಎಲ್ಲರ ಅಭಿಪ್ರಾಯ ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಎಲ್ಲ ಎಪಿಎಂಸಿ ಸದಸ್ಯರು ಒಗ್ಗಟ್ಟಿನಿಂದ ಇರುವಂತೆ ಸೂಚಿಸಿದರು
ಸತೀಶ ಜಾರಕಿಹೊಳಿ ಅವರು ಪ್ರವಾಸದಲ್ಲಿದ್ದು ನಾಳೆ ಬೆಳಗಾವಿಗೆ ಬರುತ್ತಾರೆ ಎಲ್ಲ ಸಾಧಕ ಬಾಧಕಗಳನ್ನು ವಿಚಾರಿಸಿ ಪಕ್ಷದ ಹಿತದಲ್ಲಿ ಸಹೋದರ ಸತೀಶ ತೀರ್ಮಾಣ ಕೈಗೊಳ್ಳುತ್ತಾರೆ.ಪಕ್ಷದ ಅದ್ಯಕ್ಷರನ್ನು ಆಯ್ಕೆ ಮಾಡುವಾಗ ಜಾತಿ ನೋಡಿ ಮಾಡುವದು ಬೇಡ ಪಕ್ಷದ ಸೇವೆ ಪರಗಣಿಸಿ ಆಯ್ಕೆ ಮಾಡೋಣ ಎಂದು ಎಪಿಎಂಸಿ ಸದಸ್ಯರಿಗೆ ಕಿವಿಮಾತು ಹೇಳಿದರು ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಗುಂಪಿನಲ್ಲಿ ಗುರುತಿಸಿಕೊಂಡ ಎಪಿಎಂಸಿ ಸದಸ್ಯರು ರಮೇಶ ಜಾರಕಿಹೊಳಿ ಅವರ ಸಭೆಯಲ್ಲಿ ಭಾಗವಹಿಸುವ ಮೂಲಕ ಎಲ್ಲ ವಿವಾದಗಳಿಗೆ ತೆರೆ ಎಳೆದರು.
ಸಭೆಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿ ಸಚಿವ ರಮೇಶ ಜಾರಕಿಹೊಳಿ ರಾಜ್ಯಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ವಿಚಾರ ಎಚ್ ಎ ಎಲ್ ನಲ್ಲಿ ಸಿಬ್ಬಂಧಿ ಜತೆಗೆ ಸಂವಾದ ನಡೆಸಲಿದ್ದಾರೆ ರಾಜ್ಯದಲ್ಲಿ ಎಂಪಿ, ಎಂಎಲ್ಎ ಉಪ ಚುನಾವಣೆ ವಿಚಾರ ಕೆಪಿಸಿಸಿ ಅಧ್ಯಕ್ಷ, ಸಿಎಲ್ ಪಿ ನಾಯಕರ ನಿರ್ಧಾರಕ್ಕೆ ಬದ್ಧ ನಾಯಕರ ಎಲ್ಲಿ ಹೇಳಿದ್ರು ಪ್ರಚಾರಕ್ಕೆ ಸಿದ್ಧ ಎಲ್ಲಾ ಉಪ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲಲ್ಲಿದೆ ಎಂದು ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು
ಅಕ್ಟೋಬರ್ 15ಕ್ಕೆ ಬೆಳಗಾವಿ ಎಪಿಎಂಸಿ ಚುನಾವಣೆ ಹಿನ್ನೆಲೆ ಪಿ ಎಲ್ ಡಿ ಬ್ಯಾಂಕ್ ರೀತಿಯಲ್ಲಿ ತಪ್ಪು ನಿರ್ಣಯ ಆಗುವದಿಲ್ಲ ಕಾಂಗ್ರೆಸ್, ಎಂಇಎಸ್ ಹಾಗೂ ಇತರರು ಸೇರಿ ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ ಸ್ಥಳೀಯ ಸಂಸ್ಥೆಯಲ್ಲಿ ಪಕ್ಷ, ಜಾತಿ ಬರಬಾರದು ನಮ್ಮ ಅಭಿಪ್ರಾಯ ಎಂದರು
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರ ಗೆಲ್ಲಲ್ಲು ಪ್ಲ್ಯಾನ್ ಮಾಡಿದ್ದೇವೆ
ನಾನು, ಸತೀಶ್ ಜಾರಕಿಹೊಳಿ, ವಿವೇಕರಾವ್ ಪಾಟೀಲ್ ಸ್ಪರ್ಧೆ ಮಾಡಲು ಸಿದ್ಧ
ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವಂತ ಅಭಿಪ್ರಾಯವಾಗಿದೆ ಎಂದು ಬೆಳಗಾವಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ