ಬೆಳಗಾವಿ- ಸೋಮವಾರ ಬೆಳಗಾವಿ ಎಪಿಎಂಸಿ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆ ನಡೆಯಲಿದೆ.
ಬೆಳಗಾವಿ ಎಪಿಎಂಸಿಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದಿದ್ದರೂ,ಎಲ್ಲ ಹನ್ನೊಂದು ಜನ ಚುನಾಯಿತ ಸದಸ್ಯರು ಒಗ್ಗಟ್ಟಾಗಿ,ಅಧ್ಯಕ್ಷ ಉಪಾದ್ಯಕ್ಷರ ಹೆಸರನ್ನು ನೀವೇ ಸೂಚಿಸಿ ಎಂದು ಸತೀಶ್ ಜಾರಕಿಹೊಳಿ ಅವರಿಗೆ ಹೇಳಿದ್ದಾರೆ.
ಇಂದು ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಇಬ್ಬರು ಮಾತುಕತೆ ಮಾಡಿ,ಅದ್ಯಕ್ಷ ಉಪಾದ್ಯಕ್ಷರ ಹೆಸರನ್ನು ಅಂತಿಮಗೊಳಿಸುತ್ತಾರೆ ,ಎಂದು ತಿಳಿದು ಬಂದಿದೆ.
ಅದ್ಯಕ್ಷ ಉಪಾದ್ಯಕ್ಷ ಸ್ಥಾನಕ್ಕೆ 11ಜನ ಚುನಾಯಿತ ಸದಸ್ಯರು ಆಕಾಂಕ್ಷಿಗಳಾಗಿದ್ದಾರೆ.ಸತೀಶ್ ಜಾರಕಿಹೊಳಿ ಅವರು ಕೈಗೊಳ್ಳುವ ತೀರ್ಮಾಣವೇ ಅಂತಿಮ ಎಂದು ಎಪಿಎಂಸಿ ಸದಸ್ಯರೊಬ್ಬರು ಬೆಳಗಾವಿ ಸುದ್ಧಿಗೆ ತಿಳಿಸಿದ್ದಾರೆ.
ಎಪಿಎಂಸಿ ಅದ್ಯಕ್ಷ ಸ್ಥಾನಕ್ಕೆ ಈ ಹಿಂದೆ ನಡೆದ, ಎರಡು ಚುನಾವಣೆಗಳಲ್ಲಿ,ಯಾರಿಗೆ ಅವಕಾಶ ನೀಡಲಾಗಿತ್ತು, ಈಗ ಯಾರಿಗೆ ಅವಕಾಶ ಕೊಡಬೇಕು,ಎಲ್ಲ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿರುವಾಗ ಎಲ್ಲರಿಗೂ ಸಮಾಧಾನ ಪಡಿಸುವದು ಸವಾಲಿನ ಕೆಲಸವಾಗಿದೆ. ಆದ್ರೆ ಸತೀಶ್ ಜಾರಕಿಹೊಳಿ ಅವರು ಯಾವ ತಂತ್ರ ರೂಪಿಸಿದ್ದಾರೆ ಅವರ ಲೆಕ್ಕಾಚಾರ ಏನು ? ಎನ್ನುವದು ಸೋಮವಾರವೇ ಗೊತ್ತಾಗಲಿದೆ. ಒಟ್ಟಾರೆ ಬೆಳಗಾವಿ ಎಪಿಎಂಸಿ ಚೆಂಡು,ಸತೀಶ್ ಜಾರಕಿಹೊಳಿ ಅವರ ಅಂಗಳ ದಲ್ಲಿರುವದು ಸತ್ಯ.
ಬೆಳಗಾವಿ ಎಪಿಎಂಸಿ ಯಲ್ಲಿರುವ ಪಕ್ಷಗಳ ಬಲಾಬಲ ಇಲ್ಲಿದೆ.
ಒಟ್ಟು ಚುನಾಯಿತ ಸದಸ್ಯರು 11
ಕಾಂಗ್ರೆಸ್ -5
ಬಿಜೆಪಿ-1
ಎಂಈಎಸ್-3
ಪಕ್ಷೇತರ -2
ಒಟ್ಟು 11
ನಾಮನಿರ್ದೇಶಿತ ಸದಸ್ಯರು 6,
ಇವರಿಗೆ ಚುನಾವಣೆಗೆ ಸ್ಪರ್ದೆ ಮಾಡುವ ಅವಕಾಶ ಇಲ್ಲ,ಮತದಾನ ಮಾಡಲು ಮಾತ್ರ ಅವಕಾಶ ಇದೆ.
ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರು-3
ಟ್ರೇಡಿಂಗ್ ಲೈಸನ್ಸ ಕ್ಷೇತ್ರದಿಂದ -1
ತಾಲ್ಲೂಕಾ ಮಾರ್ಕೆಟಿಂಗ್ ಸೊಸೈಟಿಯಿಂದ-1
ತಾಲ್ಲೂಕು ಸಿಸೈಟಿಯಿಂದ – 1
ಒಟ್ಟು -6
11ಚುನಾಯಿತ ಸದಸ್ಯರು,6 ಜನ ನಾಮನಿರ್ದೇಶಿತ ಸದಸ್ಯರು ಬೆಳಗಾವಿ ಎಪಿಎಂಸಿಯಲ್ಲಿ ಒಟ್ಟು 17 ಜನ ಸದಸ್ಯರು
ಹೀಗೆ ಬೆಳಗಾವಿ ಎಪಿಎಂಸಿಯಲ್ಲಿ 11 ಜನ ಚುನಾಯಿತ ಸದಸ್ಯರು 6 ಜನ ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಒಟ್ಟು 17 ಜನ ಸದಸ್ಯರಿದ್ದಾರೆ. ಈ 17 ಜನ ಸದಸ್ಯರ ಪೈಕಿ ಯಾರು 9 ಮತಗಳನ್ನು ಪಡೆಯುತ್ತಾರೆಯೋ ಅವರು ಬಹುಮತ ಸಾಧಿಸುತ್ತಾರೆ .