Breaking News

ಕಾಂಗ್ರೆಸ್ ಪೆನಲ್: ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಬೆಳಗಾವಿ:

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಪಿಎಂಸಿ 7 ಕ್ಷೇತ್ರಗಳ ಕಾಂಗ್ರೆಸ್ ಪೆನಲ್ ಅಭ್ಯರ್ಥಿಗಳು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ನೇತೃತ್ವದಲ್ಲಿ ಸಾವಿರಾರು ಬೆಂಬಲಿಗರ ಮೆರವಣಿಗೆಯೊಂದಿಗೆ ಬೆಳಗಾವಿ ತಹಸೀಲ್ದಾರ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಗುರುವಾರ ಬೆಳಿಗ್ಗೆ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ಸಮಾವೇಶಗೊಂಡ ಅಭ್ಯರ್ಥಿಗಳು ಹಾಗೂ ಸಾವಿರಾರು ಜನ ಬೆಂಬಲಿಗರು ಮೆವರಣಿಗೆ ಮೂಲಕ ಚನ್ನಮ್ಮ ರಸ್ತೆ, ಶನಿವಾರ ಕೂಟ ಮಾರ್ಗವಾಗಿ ಬೆಳಗಾವಿ ತಹಸೀಲ್ದಾರ ಕಚೇರಿಗೆ ತಲುಪಿದರು. ಬೆಳಗಾವಿ ಗ್ರಾಮೀಣ ಮತಕೇತ್ರದಲ್ಲಿ ಬರುವ ಉಚಗಾಂವಿ ಎಪಿಎಂಸಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯುವರಾಜ್ ಕದಂ, ಬೆಳಗುಂದಿ ಕ್ಷೇತ್ರದಿಂದ ಬಾಳು ದೇಸೂರಕರ, ಬಾಗೇವಾಡಿ ಕ್ಷೇತ್ರದಿಂದ ಜಯಶ್ರೀ ಪ್ರಕಾಶ ಜಪ್ತಿ, ಕುಡಚಿ ಕ್ಷೇತ್ರದಿಂದ ನಾಗೇಶ ಗಡ್ಡೆ, ದೇಸೂರ ಮತಕ್ಷೇತ್ರದಿಂದ ಸಂಜು ಮ್ಯಾದಾರ, ಪೀರಣವಾಡಿ ಮತಕ್ಷೇತ್ರದಿಂದ ಭಗವಾನ್ ಹಲಗೇಕರ, ಸಾಂಬ್ರಾ ಮತಕ್ಷೇತ್ರದಿಂದ ಕಲ್ಲಪ್ಪ ಸೇತಿಮಣಿ ನಾಮಪತ್ರ ಸಲ್ಲಿಸಿದರು.

ನಾಮ ಪತ್ರ ಸಲ್ಲಿಸದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ, ರಾಜ್ಯ ಸರ್ಕಾರ ರೈತರ ಅನೂಕಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜೊತೆಗೆ ಬೆಳಗಾವಿ ಗ್ರಾಮೀಣ ಮತಕೇತ್ರದಲ್ಲಿರುವ ಕೆರೆಗಳನ್ನು ತುಂಬಲು ಕ್ರಮ ಕೈಗೊಳ್ಳಲಾಗಿದೆ. ರೈತರ ಪರವಾಗಿ ಸರ್ಕಾರ ಮತ್ತು ತಾವು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವುದರಿಂದ ಎಪಿಎಂಸಿ ಚುನಾವಣೆಯಲ್ಲಿ ರೈತರು ಕಾಂಗ್ರೆಸ್ ಪೆನಲ್‍ಗೆ ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಲ್ಲ ಕಾಂಗ್ರೆಸ್ ಮುಖಂಡರು, ಸಆವಿರಾರು ಜನ ಬೆಂಬಲಿಗರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *