ಬೆಳಗಾವಿ ಎಪಿಎಂಸಿ ನಗರ ಕ್ಷೇತ್ರದಲ್ಲಿ ಹಲವಾರು ಗದ್ದಲಗಳ ನಡುವೆ ಮತ ಎಣಿಕೆ, ಮರು ಮತ ಎಣಿಕೆ ಹೀಗೆ ಎಣಿಕೆಗಳ ಮೇಲೆ ನಾಲ್ಕು ಬಾರಿ ಎಣಿಕೆಯಾದ ನಂತರ ತಾನಾಜಿ ಪಾಟೀಲ ಅಚ್ಚರಿಯ ಗೆಲುವು ಕಂಡಿದ್ದಾರೆ. ಪ್ರತಿಸ್ಪರ್ಧಿ ಚಂದ್ರಕಾಂತ ಕೊಂಡುಸ್ಕರ್ ವಿರುದ್ದ 8 ಮತಗಳ ಅಂತರದಿಂದ ತಾನಾಜಿ ವಿಜಯ ಸಾಧಿಸಿದರು.
ಮೊದಲು ಮತ ಎಣಿಕೆ ನಡೆದಾಗ ಚಂದ್ರಕಾಂತ ಅವರು 4 ಮತಗಳ ಅಂತರದಿಂದ ಗೆದ್ದಿದ್ದಾರೆ ಎಂದು ಗೊತ್ತಾಯಿತು ಇದಕ್ಕೆ ತಾನಾಜಿ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು. ನಂತರ ನಡೆದ ಮರು ಮತ ಎಣಿಕೆಯಲ್ಲಿ ಚಂದ್ರಕಾಂತ ಅವರು 14 ಮತಗಳಿಂದ ಗೆದ್ದಿದ್ದಾರೆ ಎಂದರು. ಮತಗಳ ಸಂಕಲನ ಸರಿಯಾಗಿಲ್ಲ ಎಂದು ತಾನಾಜಿ ಬೆಂಬಲಿಗರು ಮತ್ತೆ ತಕರಾರು ಮಾಡಿದರು.
ಕೊನೆ ಗಳಿಗೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮಧ್ಯ ಪ್ರವೇಶಿಸಿ ಗೊಂದಲ ನಿವಾರಿಸಿದರು. ಅಂತಿಮ ತೀರ್ಮಾನದಂತೆ ಟ್ಗೂ ಮತಗಳನ್ನು ಎರಡು ಬಾರಿ ಕೂಡಿದಾಗ ತಾನಾಜಿ ಅವರೇ 4 ಮತಗಳಿಂಗ ಗೆದ್ದಿರುವುದು ದೃಢ ಪಟ್ಡಿತು. ನಂತರ ತಾನಾಜಿ ಅವರು ಮತ ಕೇಂದ್ರದಿಂದ ಹೊರಬಂದು ಬೆಂಬಲಿಗರೊಂದಿಗೆ ಸಂಭ್ರಮ ಆಚರಿಸಿದರು.
ಎಂಈಎಸ್ ಅಭ್ಯರ್ಥಿ ತಾನಾಜಿ ಪಾಟೀಲ ೧೦೭೮ ಜಯಭೇರಿ ಕುಂಡಸ್ಕರ್ ೧೦೭೦ ಶಿವನಗೌಡ ಪಾಟೀಲ ೬೪೫ ಮತ ಪಡೆದು ಪರಾಭವ ಗೊಂಡಿದ್ದಾರೆ ಮರು ಮತ ಏಣಿಕೆ ನಡೆದು ನಂತರ ಮೂರ್ನಾಲ್ಕು ಬಾರಿ ಕೌಂಟ್ ಮಾಡಿದ ಮೇಲೆ ಕೊನೆಯಲ್ಲಿ ತಾನಾಜಿ ಪಾಟೀಲ ಅಚ್ಚರಿಯ ಗೆಲವು ಸಾಧಿಸಿದ್ದಾರೆ