ಬೆಳಗಾವಿಯ ಅಶ್ವತ್ಥಾಮ ಮಂದಿರ ದಕ್ಷಿಣ ಭಾರತದದ ಏಕೈಕ ಮಂದಿರ

ಬೆಳಗಾವಿ- ಬೆಳಗಾವಿ ನಗರದ ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ಮಂದಿರ ದಕ್ಷಿಣ ಭಾರತದ ಏಕೈಕ ಮಂದಿರವಾಗಿದೆ ಹೋಳಿ ಹಬ್ಬದ ದಿನ ಸಾವಿರಾರು ಜನ ಭಕ್ತರು ತಮ್ಮ ಶಾಪ ವಿಮೋಚನೆಗಾಗಿ ಮಂದಿರದ ಎದುರು ಉರುಳು ಸೇವೆ ಮಾಡಿ ಅಶ್ವತ್ಥಾಮ ನನ್ನು ಆರಾಧಿಸುತ್ತಾರೆ

ಭಾರತದಲ್ಲಿ ಒಟ್ಟು ಎರಡು ಅಶ್ವತ್ಥಾಮ ಮಂದಿರಗಳಿವೆ ಒಂದು ಉತ್ತರ ಭಾರತದಲ್ಲಿದೆ ಇನ್ನೊಂದು ಮಂದಿರ ಇರೋದು ಬೆಳಗಾವಿಯ ಪಾಂಗುಳ ಗಲ್ಲಿಯಲ್ಲಿ ಹೋಳಿ ಹಬ್ಬದ ದಿನ ಭಕ್ತರ ದಂಡು ಮಂದಿರದ ಎದುರು ಉರುಳು ಸೇವೆ ಮಾಡಿ ಹರಕೆ ತೀರಿಸುತ್ತಾರೆ

ಹೋಳಿ ಹಬ್ಬದ ದಿನ ಅಶ್ವತ್ಥಾಮ ಮಂದಿರದ ಎದುರು ಉರುಳು ಸೇವೆ ಮಾಡಿದರೆ ಶಾಪದಿಂದ ಮುಕ್ತರಾಗುತ್ತೇವೆ ಅನ್ನೋದು ಭಕ್ತರ ನಂಬಿಕೆ ಹೀಗಾಗಿ ನಾಳೆ ಹೋಳಿ ಹಬ್ಬದ ದಿನ ಭಕ್ತರು ಉರುಳು ಸೇವೆ ಮಾಡೋದು ಬೆಳಗಾವಿ ಹೋಳಿಯ ಪ್ರಮುಖ ಆಕರ್ಷಣೆ

ಬೆಳಗಾವಿಯ ಗಣಪತಿ ಬೀದಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕಾಮ ದಹನ ಮಾಡಲಾಗುತ್ತದೆ ಗಲ್ಲಿ ಗಲ್ಲಿ ಗಳಲ್ಲಿ ಡಿಜೆ ಹಚ್ಚಿ ಯುವಕರು ಕುಣಿದು ಕುಪ್ಪಳಿಸುತ್ತಾರೆ ಭಡಕಲ್ ಗಲ್ಲಿ ಖಡಕ್ ಗಲ್ಲಿ ಗಳಲ್ಲಿ ಯುವಕರು ನೀರಿನ ಕಾರಂಜಿಗಳಲ್ಲಿ ತೊಯ್ದು ಕುಣಿಯುವದು ಬೆಳಗಾವಿ ನಗರದ ಪ್ರಮುಖ ಸಂಪ್ರದಾಯ ಆಗಿದೆ

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *