Breaking News

ಬೆಳಗಾವಿಯ ಅಟೋ ನಗರದ ಮಟನ್ ಫ್ಯಾಕ್ಟರಿ ಗೆ ಬೆಂಕಿ..

ಬೆಳಗಾವಿ- ಬೆಳಗಾವಿ ನಗರದ ಅಟೋ ನಗರದಲ್ಲಿರುವ ಮಟನ್ ಫ್ಯಾಕ್ಟರಿ ಗೆ ಶಾರ್ಟ್ ಸರ್ಕ್ಯುಟ್ ನಿಂದಾಗಿ ಆಕಸ್ಮಿಕವಾಗಿ ಬೆಂಕಿ ತಗಲಿ ಅಪಾರ ಪ್ರಮಾಣದ ಹಾನಿಯಾಗಿದೆ

ಅಟೋ ನಗರದಲ್ಲಿರುವ ಎಂಜಲ್ ಇಂಡಸ್ಟ್ರೀಸ್ ಮಟನ್ ಫ್ಯಾಕ್ಟರಿಯ ಪ್ಯಾಕಿಂಗ್ ವಿಭಾಗದ ರಟ್ಟಿನ ಪ್ಯಾಕಿಂಗ್ ದಾಸ್ತಾನಕ್ಕೆ ಬೆಂಕಿ ತಗಲಿದ್ದು ಅಪಾರ ಪ್ರಮಾಣ ಹಾನಿಯಾಗಿದೆ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂಧಿ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ

ಎಂಜಲ್ ಇಂಡಸ್ಟ್ರೀಸ್ ಕಾರ್ಖಾನೆಯಲ್ಲಿ ಮಟನ್ ಪ್ಯಾಕ್ ಮಾಡಿ ಅದನ್ನು ವಿದೇಶಕ್ಕೆ ಎಕ್ಸಪೋರ್ಟ ಮಾಡಲಾಗುತ್ತದೆ ಎಂದು ಹೇಳಲಾಗಿದ್ದು ಮಟನ್ ಪ್ಯಾಕ್ ಮಾಡಲು ತಂದಿಟ್ಟ ರಟ್ಟಿನ ದಾಸ್ತಾನಕ್ಕೆ ಬೆಂಕಿ ಆವರಿಸಿದ್ದು ಬೆಂಕಿ ಹರಡದಂತೆ ತಡೆಯಲು ಅಗ್ನಿ ಶಾಮಕ ದಳದ ಸಿಬ್ಬಂಧಿ ಪ್ರಯತ್ನಿಸುತ್ತಿದ್ದಾರೆ

ಲಕ್ಷಾಂತರ ರೂ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *