ಬೆಳಗಾವಿ- ಬೆಳಗಾವಿಯಲ್ಲಿ ಅಟೋ ಮೀಟರ್ ಕಡ್ಡಾಯಗೊಳಿಸುವ ವಿಷಯದಲ್ಲಿ ರಾಜಕಾರಣ ಪ್ರವೇಶ ಮಾಡಿದ್ದು ಇದಕ್ಜೆ ಸಮಂಧಿಸಿದಂತೆ ಕೆಲವರು ಪರವಾಗಿ ಕೆಲವರು ವಿರೋಧ ನಿಲುವು ತಾಳಿರುವದರಿಂದ ಅಟೋ ಮೀಟರ್ ಕಡಾಯದ ವಿಷಯ ಈಗ ಮತ್ತಷ್ಟು ಕಗ್ಗಂಟಾಗಿದೆ
ಬೆಳಗಾವಿಯಲ್ಲಿ ಅಟೋ ಚಾಲಕರು ಮಂಗಳವಾರ ತಮ್ಮ ಅಟೋಗಳ ಜೊತೆಗೆ ನಗರದ ಸರ್ದಾರ ಮೈದಾನದಲ್ಲಿ ತಮ್ಮ ಅಟೋಗಳನ್ನು ನಿಲ್ಲಿಸಿ ಜಿಲ್ಲಾಡಳಿತದ ವಿರುದ್ಧ ಸಮರ ಸಾರಿದ್ದಾರೆ
ಸರ್ದಾರ ಮೈದಾನದಲ್ಲಿ ಸಮಾವೇಶ ಗೊಂಡಿರುವ ಸಾವರಾರು ಜನ ಅಟೋ ಚಾಲಕರು ತಮ್ಮ ಅಟೋಗಳೊಂದಿಗೆ ಮುಷ್ಕರ ಆರಂಭಿಸಿದ್ದಾರೆ ಜಿಲ್ಲಾಢಳಿತ ಅಟೋ ಮೀಟರ್ ಮಿನಿಮಮ್ ದರವನ್ನು 30 ರೂ ನಿಗದಿ ಮಾಡಿ ನಂತರ ಪ್ರತಿ ಕಿ ಮೀ ಗೆ 20 ರೂ ದರವನ್ನು ನಿಗದಿ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ
ಅಟೋ ಚಾಲಕರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಸ್ವಂತ ಮನೆ ಇಲ್ಲ ಜೊತೆಗೆ ಬ್ಯಾಂಕ್ ಬ್ಯಾಲೆನ್ಸೂ ಇಲ್ಲವಂತೆ ಇವರ ಸಹಾಯಕ್ಕಾಗಿ ಯಾರೊಬ್ಬರೂ ಬರುತ್ತಿಲ್ಲ ಅಂತೆ ಅದಕ್ಕಾಗಿ ಅಟೋ ದರವನ್ನು ಹೆಚ್ಚಿಸಬೇಕೆನ್ನುವದು ಅಟೋ ಚಾಲಕರ ಬೇಡಿಕೆಯಾಗಿದೆ
ನಗರದ ರಸ್ತೆಗಳನ್ನು ಸುಧಾರಿಸಬೇಕು ಸರ್ಕಾರಿ ಬಸ್ ಗಳಲ್ಲಿ ಕುರಿ ತುಂಬಿದಂತೆ ಪ್ರಯಾಣಿಕರನ್ನು ತುಂಬುವದನ್ನು ನಿಲ್ಲಿಸಬೇಕು ಬೇಸ್ ಮೆಟ್ ಗಳನ್ನು ತೆರವು ಮಾಡಿ ಅಲ್ಲಿ ಪಾರ್ಕಿಂಗ್ ವ್ಯೆವಸ್ಥೆ ಮಾಡಬೇಕು ನಗರದಲ್ಲಿ ಇನ್ನಷ್ಟು ಅಟೋ ನಿಲ್ಧಾಣಗಳನ್ನು ಮಂಜೂರು ಮಾಡಬೇಕು ಎನ್ನುವದು ಅಟೋ ಚಾಲಕ ಮತ್ತು ಮಾಲೀಕರ ಒತ್ತಾಯವಾಗಿದೆ