ಬೆಳಗಾವಿ- ತ್ಯಾಗ ಬಲಿದಾನದ ಸಂದೇಶ ಸಾರುವ ಬಕ್ರೀದ್ ಹಬ್ಬವನ್ನು ಬೆಳಗಾವಿಯಲ್ಲಿ ಶೃದ್ಧಾಭಕ್ತಿಯಿಂದ ಆಚರಿಸಲಾಯಿತು
ಮಳೆಯನ್ನು ಲೆಕ್ಕಿಸದೇ ಮುಸ್ಲೀಂ ಬಾಂಧವರು ಈದಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ಬೆಳಿಗ್ಗೆ 9 ಘಂಟೆಗೆ ಪ್ರಥಮ ಕಂತಿನ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು 10 ಘಂಟೆಗೆ ಎರಡನೇಯ ಕಂತಿನ ಪ್ರಾರ್ಥನೆ ನಡೆಯಿತು
ಹಬ್ಬದ ನಿಮಿತ್ಯ ಬೆಳಗಾವಿ ನಗರದ ವಿವಿಧ ಬಡಾವಣೆಗಳ ಮಸೀದಿಗಳಲ್ಲಿಯೂ ಕೂಡಾ ಮುಸ್ಲೀಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು
ಈದಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಸಂಧರ್ಭದಲ್ಲಿ ಮಾತನಾಡಿದ ಸಮಾಜದ ಮೌಲ್ವಿಗಳು ತ್ಯಶಗ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಶೃದ್ಧಾಭಕ್ತಿಯಿಂದ ಆಚರಿಸಬೇಕು ಧರ್ಮಾಚರಣೆಯಲ್ಲಿ ಸಿಗುವ ತೃಪ್ತಿ ಮತ್ತು ಮಾನಸಿಕ ಶಾಂತಿ ಬೇರೆ ಯಾವ ಆಚರಣೆಯಲ್ಲಿ ಸಿಗುವದಿಲ್ಲ ಪ್ರತಿಯೊಬ್ಬರು ಅಲ್ಲಾನ ಆಜ್ಞೆ ಪಾಲಿಸಬೇಕು ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸಬೇಕು ಎಂದು ಹೇಳಿದರು
ಸಾಮೂಹಿಕ ಪ್ರಾರ್ಥನೆ ಮುಗಿದ ಬಳಿಕ ನಗರ ಪೋಲೀಸ್ ಆಯುಕ್ತ ಡಿಸಿ ರಾಜಪ್ಪ ಡಿಸಿಪಿ ಸೀಮಾ ಲಾಟ್ಕರ್ ಸೇರಿದಂತೆ ಇತರ ಪೋಲೀಸ್ ಅಧಿಕಾರಿಗಳು ಮುಸ್ಲೀಂ ಬಾಂಧವರಿಗೆ ಶುಭಾಶಯ ಕೋರಿದರು.