ಬೆಳಗಾವಿ- ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ ಹಬ್ಬವನ್ನು ಬೆಳಗಾವಿಯಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು
ಲಕ್ಷಕ್ಕೂ ಹೆಚ್ವು ಮುಸ್ಲೀಂ ಬಾಂಧವರು ನಗರದ ಅಂಜುಮನ್ ಸಂಸ್ಥೆಯ ಈದಗಾ ಮೈದಾನದಲ್ಲಿ ಎರಡು ಕಂತಿನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಮುದಲು ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಫ್ತಿ ಅಬ್ದುಲ್ ಅಜೀಜ್ ಅವರು ಬಕ್ರೀದ ಹಬ್ಬದ ಸಂದೇಶ ನೀಡಿದರು ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ ಹಬ್ಬವನ್ನು ಅಲ್ಹಾನ ಆಜ್ಞೆಯಂತೆ ಆಚರಿಸಬೇಕು ಪ್ರೀತಿ ಸಹಬಾಳ್ವೆಯಿಂದ ಒಬ್ಬ ಉತ್ತಮ ಮಾನವನಾಗಿ ಧಾರ್ಮಿಕ ಕರ್ತವ್ಯಗಳನ್ನು ನಿಭಾಯಿಸಬೇಕು ಎಂದು ಸಂದೇಶ ನೀಡಿದರೆ ಎರಡನೇಯ ಕಂತಿನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಫ್ತೀ ಮಂಜೂರ ಆಲಂ ಅವರು ಬಕ್ರೀದ ಹಬ್ಬದ ಸಂದೇಶ ಮತ್ತು ಹಬ್ಬದ ಮಹತ್ವವನ್ನು ತಿಳಿಸಿದರು ಸಾಮೂಹಿಕ ಪ್ರಾರ್ಥನೆ ಮುಗಿದ ಬಳಿಕ ಮುಸ್ಲೀಂ ಬಾಂಧವರು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು
ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಡಿಸಿಪಿ ಸೀಮಾ ಲಾಟ್ಕರ್ ಶಾಸಕ ಫಿರೋಜ್ ಸೇಠ ,ರಾಜು ಸೇಠ ಮತ್ತು ಅವರ ಪುತ್ರರು ಮುಸ್ಲೀಂ ಬಾಂಧವರಿಗೆ ಬಕ್ರೀದ ಹಬ್ಬದ ಶುಭಾಶಯ ಕೋರಿದರು