ಯಾರಾದ್ರೂ ಸರಾಯಿ ಮಾರಿದ್ರೆ ಈ ನಂಬರ್ ಗಳಿಗೆ ಡೈಲ್ ಮಾಡಿ ಕಂಪ್ಲೇಂಟ್ ಕೊಡಿ

ಅಕ್ರಮ‌ ಮದ್ಯ ಮಾರಾಟ, ಸಾಗಾಣಿಕೆ ತಡೆಗೆ ಕಂಟ್ರೋಲ್‌ ರೂಮ್ ಸ್ಥಾಪನೆ: ಅಬಕಾರಿ ಉಪ ಆಯುಕ್ತ ಬಸವರಾಜ್

ಬೆಳಗಾವಿ, ಮಾ.೨೮(ಕರ್ನಾಟಕ ವಾರ್ತೆ): ಕರೋನಾ ವೈರಸ್ ನಿಂದ ಆಗುವ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಮದ್ಯ ಮಾರಾಟ ಅಂಗಡಿಗಳನ್ನು ಬಂದ್ ಮಾಡಲಾಗಿದ್ದು, ಅಕ್ರಮ ಮದ್ಯ ಮಾರಾಟ ಅಥವಾ ಸಾಗಾಣಿಕೆ ಮತ್ತು ಇತರೆ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ವಲಯ, ಉಪ ವಿಭಾಗ ಮತ್ತು ಜಿಲ್ಲಾಮಟ್ಟದ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿರುತ್ತದೆ ಎಂದು ಅಬಕಾರಿ ಉಪ ಆಯುಕ್ತರಾದ ಬಸವರಾಜ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಕಳ್ಳಭಟ್ಟಿ, ನಕಲಿ ಮದ್ಯ ಅಥವಾ ಹೊರ ರಾಜ್ಯಗಳಿಂದ ಅಕ್ರಮ ಮದ್ಯ‌ ಸಾಗಾಣಿಕೆ‌ ಕಂಡುಬಂದರೆ ಸಾರ್ವಜನಿಕರು ತಕ್ಷಣ ಮಾಹಿತಿಯನ್ನು ನೀಡಬೇಕು ಎಂದು ಅವರು ಕೋರಿದ್ದಾರೆ.

ವಲಯ, ಉಪ ವಿಭಾಗ ಮತ್ತು ಜಿಲ್ಲಾಮಟ್ಟದ ಕಂಟ್ರೋಲ್ ರೂಮ್ ಹಾಗೂ ಸಂಬಂಧಿಸಿದ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು ಈ ಕೆಳಗಿನಂತಿದ್ದು, ಅಕ್ರಮ ಕಂಡುಬಂದರೆ‌ ಸಾರ್ವಜನಿಕರು ತಕ್ಷಣ ಸಂಬಂಧಿಸಿದ ಕಚೇರಿ ಅಥವಾ ಅಧಿಕಾರಿಗಳಿಗೆ ದೂರು ನೀಡಬಹುದು.

ಬೆಳಗಾವಿ ಜಿಲ್ಲಾ ಕಂಟ್ರೋಲ್ 0831-2475192

ಅಥಣಿ ವಲಯ 08289-285210- 96202416693

ಬೈಲಹೊಂಗಲ ವಲಯ 08288-233717- 7829461277

ಬೆಳಗಾವಿ ಉತ್ತರ ವಲಯ 0831-2475193
9740770414

ಬೆಳಗಾವಿ ದಕ್ಷಿಣ ವಲಯ 0831-2475193
8277365833

ಚಿಕ್ಕೋಡಿ ವಲಯ 08338-274765
9008097104

ಗೋಕಾಕ ವಲಯ 08332-229333
9448876469

ಹುಕ್ಕೇರಿ ವಲಯ 08333-274769
9700111777

ಖಾನಾಪುರ ವಲಯ 08336-223402
9902021934

ಸವದತ್ತಿ ವಲಯ 08330-222876
8970346997

ರಾಯಬಾಗ ವಲಯ 08331-225018
9902500056

ರಾಮದುರ್ಗ ವಲಯ 08335-241520
9591183902

ಉಪ ವಿಭಾಗ ಬೆಳಗಾವಿ 0831-2475192
9449597072 ಹಾಗೂ 9449597073
****

Check Also

ವಕ್ಫ್ ವಿವಾದ,ಇಂದು ಬೆಳಗಾವಿಯಲ್ಲಿ ಒಂದೇ ದಿನ ಪರ,ವಿರೋಧ ಧರಣಿ

ಬೆಳಗಾವಿ- ವಕ್ಫ್ ಬೋರ್ಡ್ ನಿಂದ ರೈತರಿಗೆ ಜಾರಿಯಾಗಿರುವ ನೋಟೀಸ್ ಗಳ ಕುರಿತು ರಾಜ್ಯಾದ್ಯಂತ ವಿವಾದ ಸೃಷ್ಠಿಯಾಗಿದ್ದು ಈ ಕುರಿತು ಇವತ್ತು …

Leave a Reply

Your email address will not be published. Required fields are marked *