ಬೆಳಗಾವಿ- ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆ ಡಿಸೆಂಬರ್ 5 ರಂದು ಬೆಳಗಾವಿಯಲ್ಲಿ ನಡೆಯಲಿದ್ದು ಅದಕ್ಕಾಗಿ ಬೆಳಗಾವಿಯಲ್ಲಿ ಜಬರದಸ್ತ್ ತಯಾರಿ ನಡೆದಿದೆ.
ಬೆಳಗಾವಿಯ ಕಾಲೇಜು ರಸ್ತೆಯಲ್ಕಿರುವ ಗಾಂಧಿ ಭವನದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಸಿಟಿ ರವಿ, ಸೇರಿದಂತೆ ಬಿಜೆಪಿಯ ವರಿಷ್ಠ ನಾಯಕರು ಬೆಳಗಾವಿ ಗೆ ಆಗಮಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಜಿಲ್ಲೆಯ ಸಚಿವರು,ಕಾರ್ಯಕಾರಿಣಿ ಸಭೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಬುಧವಾರ ಬೆಳಗಾವಿಯಲ್ಲಿ ಗ್ರಾಮ ಸ್ವರಾಜ್ ಸಮಾವೇಶ ನಡೆಯಿತು,ನಾಳೆ ಶುಕ್ರವಾರ ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮೀಟಿ ಸಭೆ ಸಹ ನಡೆಯಲಿದ್ದು ಈ ಸಭೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಕೋರ್ ಕಮೀಟಿಯ 14 ಜನ ಸದಸ್ಯರು ಭಾಗವಹಿಸುತ್ತಾರೆ.
ಕಾರ್ಯಕಾರಿಣಿ ಸಭೆಗಾಗಿ ಬಿಜೆಪಿ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು,ಕುಂದಾನಗರಿ ಬೆಳಗಾವಿ ಈಗ ಸಂಪೂರ್ಣವಾಗಿ ಕಮಲ ಮಯವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ