ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ್ ಅಂಗಡಿ ಅವರ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಅನಾನುಭವಿ ಮಹಿಳೆ,ಪಾರ್ಲಿಮೆಂಟ್ ಗೆ ಹೋಗಿ ಇವರೇನು ಮಾಡಲು ಸಾದ್ಯ ಎಂದು ಹಗುರವಾಗಿ ಮಾತನಾಡಿ ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದು ಈ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಹೇಳಿದ್ದಾರೆ.
ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಮನೆ,ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಬೆಳಗಾವಿ ಕ್ರಾಂತಿಯ ನೆಲ,ಇದೇ ನೆಲದಲ್ಲಿ ಕಿತ್ತೂರು ರಾಣಿ ಚನ್ನಮ್ಮಾಜಿ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿ ಎನಿಸಿಕೊಂಡಿದ್ದು,ಇಂತಹ ಐತಿಹಾಸಿಕ ನೆಲದ ಮಹಿಳೆಯ ಕುರಿತು ಸಿದ್ರಾಮಯ್ಯ ಹಗುರವಾಗಿ ಮಾತನಾಡಿದ್ದು,ಕ್ರಾಂತಿ ನೆಲದ ಮಹಿಳೆ ಚುನಾವಣೆಯಲ್ಲಿ ಗೆಲವು ಸಾಧಿಸಿ ಸಂಸತ್ತಿನಲ್ಲಿ ಕ್ರಾಂತಿ ಮಾಡುವದರಲ್ಲಿ ಸಂದೇಹವೇ ಇಲ್ಲ ಎಂದು ಡಾ.ಸೋನಾಲಿ ವಿಶ್ವಾಸ ವ್ಯೆಕ್ತ ಪಡಿಸಿದ್ದಾರೆ.
ಪ್ರಚಾರದ ಜೊತೆ ಜನಜಾಗೃತಿ…..
ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರ ಪರವಾಗಿ ನಿರಂತರವಾಗಿ ಪ್ರಚಾರ ನಡೆಸಿರುವ ಡಾ. ಸೋನಾಲಿ ಸರ್ನೋಬತ್ ಪ್ರಚಾರದ ಸಂಧರ್ಭದಲ್ಲಿ ಮಾಸ್ಕ ವಿತರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಪ್ರಚಾರದ ಸಂಧರ್ಭದಲ್ಲಿ ಮಾಸ್ಕ ಧರಿಸದ ಸಾರ್ವಜನಿಕರಿಗೆ ಮಾಸ್ಕ ಕೊಟ್ಟು ವಿಭಿನ್ನ ರೀತಿಯಲ್ಲಿ ಮತಯಾಚಿಸಿ,ಜೊತೆಗೆ ಜನಜಾಗೃತಿ ಮೂಡಿಸಿದ್ದಾರೆ.
ಹಬ್ಬದ ದಿನವೂ ಪ್ರಚಾರ…..
ಶಾಸಕ ಅನೀಲ ಬೆನಕೆ,ಮತ್ತು ಡಾ. ಸೋನಾಲಿ ಸರ್ನೋಬತ್ ಇಂದು ಯುಗಾದಿ ಹಬ್ಬದ ದಿನವೂ ಬೆಳಗಾವಿಯ ಸೈನಿಕ್ ಕಾಲೋನಿಯಲ್ಲಿ ಮತಯಾಚಿಸಿದರು,ಸುರೇಶ್ ಅಂಗಡಿ ಅವರ ಪುತ್ರಿ ಡಾ.ಸ್ಪೂರ್ತಿ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಅನೀಲ ಬೆನಕೆ,ಬೆಳಗಾವಿ ನಗರದಲ್ಲಿ ಅಭಿವೃದ್ಧಿಯ ಹೊಳೆ ಹರಿಯುತ್ತಿದೆ,ಎಲ್ಲಿ ನೋಡಿದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ,ಈ ಅಭಿವೃದ್ಧಿಯ ಕೊಡುಗೆ ನೀಡಿದ ಬಿಜೆಪಿಗೆ ಮತ ನೀಡಿ,ಅಭಿವೃದ್ಧಿ ನೋಡಿ ಮತ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು..