ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಸಂಘಟಿಸಲು ಹಲವಾರು ದಶಕಗಳಿಂದ ಶ್ರಮಿಸುತ್ತಿರುವ ಮಲ್ಲಿಕಾರ್ಜುನ್ ತುಬಾಕಿ,ಮತ್ತು ಮಾರುತಿ ಅಷ್ಟಗಿ ಅವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಲಭಿಸಿದೆ.
ಇಂದು ಸಂಜೆ ಮುಖ್ಯಮಂತ್ರಿಗಳ ಸಚಿವಾಲಯದಿಂದ ನಿಗಮ ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷರ ಪಟ್ಟಿ ಬಿಡುಗಡೆಯಾಗಿದ್ದು, ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲ್ಪಡುವ,ಭೌಗೋಳಿಕವಾಗಿ,ರಾಜಕೀಯವಾಗಿ ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯಿಂದ ಕೇವಲ ಇಬ್ಬರಿಗೆ ಮಾತ್ರ ಅವಕಾಶ ಸಿಕ್ಕಿದೆ.
ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಯಮಕನಮರಡಿ ಕ್ಷೇತ್ರದ ಮಾರುತಿ ಅಷ್ಟಗಿ,ಅವರನ್ನು ಮತ್ತು ಮಲ್ಲಿಕಾರ್ಜುನ್ ತುಬಾಕಿ ಅವರನ್ನು ರಾಜ್ಯ ಮದ್ಯಪಾನ ಸ್ವಯಂ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಮಾರುತಿ ಅಷ್ಟಗಿ ಯಮಕನಮರಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದೆ ಮಾಡುತ್ತಲೇ ಬಂದಿದ್ದು,ಈ ಕ್ಷೇತ್ರದಲ್ಲಿ ಬಿಜೆಪಿ ಸಂಘಟಿಸಲು ಶ್ರಮಿಸುತ್ತಿದ್ದಾರೆ.
ಮಲ್ಲಿಕಾರ್ಜುನ್ ತುಬಾಕಿ ಅವರು ಬೆಳಗಾವಿ ಜಿಲ್ಲೆಯ ಹಿರಿಯ ಬಿಜೆಪಿ ನಾಯಕರಾಗಿದ್ದು,ರೈತ ಮೋರ್ಚಾ ಬಲವರ್ಧನೆಗೆ ಶ್ರಮಿಸಿದ್ದಾರೆ.
ನಿಗಮ ಮಂಡಳಿಯ ಅದ್ತಕ್ಷ ಸ್ಥಾನಕ್ಕಾಗಿ,ಬೆಳಗಾವಿ ಜಿಲ್ಲೆಯಿಂದ ಹಲವಾರು ಜನ ಅರ್ಜಿ ಹಾಕಿದ್ಸರು.ಆದ್ರೆ ಕೇವಲ ಇಬ್ಬರಿಗೆ ಮಾತ್ರ ಲಾಟರಿ ಲಭಿಸಿದೆ.