ಎಸಿ ರೂಮ್ ನಲ್ಲಿ ಕುಳಿತುಕೊಂಡು ಪಾಲಿಸಿ ಮಾಡುವ ಸರ್ಕಾರ ನಮ್ಮದಲ್ಲ
ಬೆಳಗಾವಿ- ಕೇಂದ್ರ ಸರ್ಕಾರ ಮೂರು ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ದೇಶಾದ್ಯಂತ ಸಬ್ ಕೆ ಸಾಥ್ ಸಬಕಾ ವಿಕಾಸ್ ಹೆಸರಿನಲ್ಲಿ 900 ಕಾರ್ಯಕ್ರಮಗಳು ನಡೆಯುತ್ತಿವೆ ಕೇಂದ್ರ ಸರ್ಕಾರದ ಯೋಜನೆಗಳನ್ನು ನೂರಕ್ಕೆ ನೂರರಷ್ಟು ದೇಶದ ನಾಗರಿಕರಿಗೆ ತಲುಪುಸುವದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಠೋಡ್ ತಿಳಿಸಿದ್ದಾರೆ
ಅವರು ಸೋಮವಾರ ಬೆಳಗಾವಿಯಲ್ಲಿ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತ ಎಸಿ ರೂಮ್ ನಲ್ಲಿ ಕುಳಿತುಕೊಂಡು ಪಾಲಿಸಿ ಮಾಡುವ ಸರ್ಕಾರ ನಮ್ಮದಲ್ಲ ಈ ಹಿಂದೆ ಬೇಸಿಗೆ ಬಂದಾಗ ಸರ್ಕಾರ ರಜೆ ಹೋಗುತ್ತಿತ್ತು ಆದರೆ ನಮ್ಮ ಸರ್ಕಾರ ಸುಡು ಬಿಸಿಲಿನಲ್ಲಿಯೂ ಜನರ ಬಳಿ ಹೋಗುತ್ತಿದೆ ಎಂದು ರಾಠೋಡ್ ತಿಳಿಸಿದರು
ದೇಶಾದ್ಯಂತ ನಡೆಯುತ್ತಿರುವ 900 ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಇದರಲ್ಲಿ ಕೇಂದ್ರ ಮತ್ತು ರಾಜ್ಯದ ಸಚಿವರು ಪಾಲ್ಗೊಂಡು ದೇಶದ ನಾಗರಿಕರನ್ನು ನೇರವಾಗಿ ಸಂಪರ್ಕ ಮಾಡಿ ಕೇಂದ್ರದ ಯೋಜನೆಗಳ ಬಗ್ಗೆ ಜನಾಭಿಪ್ರಾಯವನ್ನು ಸಂಗ್ರಹಿಸುತ್ತೇವೆ ಎಂದು ಸಚಿವ ರಾಠೋಡ್ ತಿಳಿಸಿದರು
ಕೇಂದ್ರ ಸರ್ಕಾರ ಎಲ್ಲ ವರ್ಗಗಳ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ರೈತರ ಏಳಿಗೆಗಾಗಿ ಫಸಲ್ ಭೀಮಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಮೋದಿ ಸರ್ಕಾರ ಎಲ್ಲರ ವರ್ಗಗಳಿಗೆ ಸ್ಪಂದಿಸುತ್ತಿದೆ ಎಂದರು
ಸಂಸದ ಸುರೇಶ ಅಂಗಡಿ ರಾಜೇಂದ್ರ ಹರಕುಣಿ ಎಂಬಿ ಝಿರಲಿ ಬಾಬುಲಾಲ ರಾಜಪುರೋಹಿತ ಕಿರಣ ಜಾಧವ ರಾಜು ಟೋಪಣ್ಣವರ ಬಸನಗೌಡ ಸಿದ್ರಾಮನಿ ಸೇರಿದಂತೆ ಹಲವಾರು ಜನ ಬಿಜೆಪಿ ಮುಖಂಡರು ಸಚಿವ ರಾಠೋಡ್ ಅವರನ್ನು ಬರಮಾಡಿಕೊಂಡರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ