ಯುವಮೋರ್ಚಾ ಕಿತ್ತೂರು ಮಂಡಲ ಅಧ್ಯಕ್ಷ ಮಹಾಂತೇಶ ಚಿನ್ನಪ್ಪಗೌಡರ ಮಂಗಳೂರು ಚಲೋ ಜಾಥಾದಲ್ಲಿ ಭಾಗವಹಿಸಲು ಬೆಳಗಾವಿಗೆ ತೆರಳುತ್ತಿದ್ದ ಸಂಧರ್ಭದಲ್ಲಿ ಚಿನ್ನಪ್ಪಗೌಡರ ಅವರನ್ನು ಕಿತ್ತೂರು ಪೋಲೀಸರು ಬಂಧಿಸಿದ್ದಾರೆ
ಬೆಳಗಾವಿಯಿಂದ ಬೆಳಗ್ಗೆ ೧೧:೩೦ಕ್ಕೆ ಮಂಗಳೂರಿಗೆ ಯುವಮೋರ್ಚಾ ಜಾಥಾ ಹೊರಡುವ ಸಮಯ ನಿಗದಿಯಾಗಿತ್ತು ಕಿತ್ತೂರಿನಿಂದ ಬೆಳಗಾವಿಗೆ ತೆರಳಲು ಬೈಕ್ ಗಳ ಜೊತೆಯಲ್ಲಿ ಸಿದ್ಧತೆಯಲ್ಲಿರುವಾಗ ಪೊಲೀಸರು ಕಿತ್ತೂರಿನ ಬಿಜೆಪಿ ಕಾರ್ಯಕರ್ತರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ
ಮಹಾಂತೇಶ ಬಂಧನಕ್ಕೆ ಬೆಳಗಾವಿ ಗ್ರಾಮೀಣ ಉಸ್ತುವಾರಿ ರಾಜ್ಯ ಯುವಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್ ಆಕ್ರೋಶ ವ್ಯೆಕ್ತಪಡಿಸಿದ್ದು ಹೋರಾಟವನ್ನು ಹತ್ತಿಕ್ಕುವ ಸರ್ಕಾರದ ನೀತಿಗೆ ತೀವ್ರವಾಗಿ ಖಂಡಿಸಿದ್ದಾರೆ
ಇಂದು ಬೆಳಗಾವಿ ಧಾರವಾಡ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಯಲ್ಲಾಪೂರ ಮಾರ್ಗವಾಗಿ ಬೆಂಗಳೂರಿಗೆ ಬೈಕ್ ರ್ಯಾಲಿಯ ಮೂಲಕ ತೆರಳಲಿದ್ದಾರೆ
ಬೆಳಗಾವಿಗಾವಿಯಲ್ಲಿ ಮಂಗಳೂರು ಚಲೋ ಬೈಕ್ ರ‌್ಯಾಲಿ ರದ್ದಾಗಿದೆ
ಬೈಲಹೊಂಗಲ, ಕಿತ್ತೂರು, ಸವದತ್ತಿ ಹಾಗೂ ಗೋಕಾಕ ನಲ್ಲಿ ಕಾರ್ಯಕರ್ತರು ಬಂಧನ ಹಿನ್ನೆಲೆ ರ‌್ಯಾಲಿ ರದ್ದು ಮಾಡಲಾಗಿದೆ
೬೦೦ ಬೈಕ್ ಮೂಲಕ ಮಂಗಳೂರು ರ‌್ಯಾಲಿಗೆ ಸಿದ್ದತೆ ನಡೆದಿತ್ತು
ಕಾರ್ಯಕರ್ತರ ಬಂಧನ ಖಂಡೀಸಿ ಚನ್ನಮ್ಮ ವೃತ್ತದಲ್ಲಿ ಧರಣಿ ನಡೆಸಿದ
ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್ ಧರಣಿಯಲ್ಲಿ ಭಾಗಿಯಾಗಿದ್ದು
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ. ನಡೆಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ