ಬೆಳಗಾವಿ- ನೆರೆಯ ಗೋವಾ ರಾಜ್ಯದ ವಿಧಾನ ಸಭೆ ಚುನಾವಣೆಯಲ್ಲಿ ಬೆಳಗಾವಿಯ ಬಿಜೆಪಿ ನಾಯಕರು ಪ್ರಚಾರದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಹಲವಾರು ಜನ ಬಿಜೆಪಿ ನಾಯಕರು ಚುನಾವಣೆ ಘೋಘಣೆ ಆದ ನಂತರ ಕಡಲ ಕಿನಾರೆಯಲ್ಲಿಯೇ ಠಿಖಾನಿ ಹೂಡಿದ್ದಾರೆ
ಮಾಜಿ ಶಾಸಕ ಅಭಯ ಪಾಟೀಲ ನೇತ್ರತ್ವದ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಯುವಕರ ಪಡೆ ಕಳೆದ ಒಂದು ತಿಂಗಳಿನಿಂದ ಗೋವಾ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ಮಾಡುತ್ತಿದೆ
ಅಭಯ ಪಾಟೀಲ,ಸಂಜಯ ಪಾಟೀಲ,ಮಹಾಂತೇಶ ಕವಟಗಿಮಠ,ಕಿರಣ ಜಾಧವ.ರಾಜು ಜಿಕ್ಕನಗೌಡ್ರ,ದೀಪಕ ಜಮಖಂಡಿ.ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವಾರು ಜನ ಬಿಜೆಪಿ ನಾಯಕರು ಪ್ರಚಾರದಲ್ಲಿ ನಿರತರಾಗಿದ್ದಾರೆ
ಗೋವಾ ರಾಜ್ಯದ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಅಭಯ ಪಾಟೀಲರ ಉಸ್ತುವಾರಿ ಇದೆ ಜೊತೆಗೆ ಪ್ರತಿಯೊಬ್ಬರು ಒಂದೊಂದು ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ
ಕಿರಣ ಜಾಧವ ಅವರು ಗೋವಾ ಸಾಕಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಮೋದ ಸಾವಂತ ಅವರ ಗೆಲುವಿಗೆ ತಮ್ಮ ಬೆಂಬಲಿಗ ಕಾರ್ಯಕರ್ತರೊಂದಿಗೆ ಪ್ರಚಾರದಲ್ಲಿ ನಿರತರಾಗಿದ್ದಾರೆ
ಒಟ್ಟಾರೆ ಬೆಳಗಾವಿಯ ಬಿಜೆಪಿ ನಾಯಕರು ಕಡಲ ಕಿನಾರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಹೀಗಾಗಿ ಗೋವಾದಲ್ಲಿ ಬೆಳಗಾವಿ ಬಿಜೆಪಿ ನಾಯಕರದ್ದೇ ಹವಾ..