ಬೆಳಗಾವಿ- ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಭಿನ್ನಮತ ಭುಗಿಲೆದ್ದಿದೆ ಶಾಸಕ ಸಂಜಯ ಪಾಟೀಲ ಮತ್ತು ಸಂಸದ ಸುರೇಶ ಅಂಗಡಿ ಯಡಿಯೂರಪ್ಪ ಅವರ ಎದುರೇ ಆರೋಪ ಪ್ರತ್ಯಾರೋಪ ಮಾಡಿ ಸಭೆಯಲ್ಲಿ ರಂಪಾಟ ನಡೆಸಿದರೆ ಸಭೆ ಮುಗಿದ ಬಳಿಕ ಉಜ್ವಲಾ ಬಡವನ್ನಾಚೆ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಹರಕುಣಿ ಅವರ ನಡುವೆ ಜಟಾಪಟಿ ನಡೆದಿದೆ
ಬೆಳಗಾವಿಯ ಡಾಬರ್ ಗೆಸ್ಟ್ ಹೌಸ್ ಪ್ರಭಾಕರ ಕೋರೆ ನಿವಾಸದಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ್ ಮತ್ತು ಸಂಸದ ಸುರೇಶ್ ಅಂಗಡಿ ನಡುವೆ ಓಪನ್ ವಾರ್ ನಡೆದಿದೆ
ರಾಜ್ಯಾಧ್ಯಕ್ಷ ಬಿಎಸ್ವೈ ಸಮ್ಮುಖದಲ್ಲೇ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡ ಮುಖಂಡರು ಪರಸ್ಪರ ಒಬ್ಬರ ಮೇಲೊಬ್ಬರು ದೋಷಾರೋಪಣೆ ಮಾಡಿಕೊಂಡು ತಮ್ಮ ನಾಯಕನ ಎದುರೇ ಕಚ್ಚಾಡಿಕೊಂಡಿದ್ದಾರೆ
ಸಂಸದ ಸುರೇಶ ಅಂಗಡಿ ಮಾತನಾಡಿ ಹಲಗಾದಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸುವ ಸಂಗತಿ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೇ ತೀರ್ಮಾಣ ಆಗಿದೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರೇ ಹಲಗಾದಲ್ಲಿ ಘಟಕ ಸ್ಥಾಪಿಸುವ ತೀರ್ಮಾಣ ಕೈಗೊಂಡಿದ್ದಾರೆ ಸಮೀತಿಯಲ್ಲಿದ್ದ ಶಾಸಕ ಸಂಜಯ ಅಂದು ಪ್ರತಿಭಟನೆ ಮಾಡದೇ ಆರು ವರ್ಷದ ಬಳಿಕ ಈಗ ಶಾಸಕ ಸಂಜಯ ಪಾಟೀಲ ಪ್ರತಿಭಟನೆ ಮಾಡಿ ರೈತರಿಗೆ ದಿಶಾಬೂಲ ಮಾಡುತ್ತಿದ್ದಾರೆ ಈ ವಿಷಯಕ್ಕೆ ಸಮಂಧಿಸಿದಂತೆ ಡಿಸಿ ಕಚೇರಿ ಆವರಣದಲ್ಲಿ ಸಾರ್ವಜನಿಕರ ಎದುರಲ್ಲಿ ನನ್ನ ಜೊತೆ ಜಗಳಾಡಿದ್ದಾರೆ ಎಂದು ಆರೋಪಿಸಿ ದಾಗ ಇಬ್ಬರ ರಂಪಾಟ ತಾರಕಕ್ಕೇರಿತು
ಹೌದು ಈ ಮಾತು ನಿಜ ಕೂಡ ಬಿಜೆಪಿ ಸರ್ಕಾರ ಇದ್ದಾಗ ಹಲಗಾ ಗ್ರಾಮದ ಜಮೀನನ್ನು ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸಲು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ ಅಂದು ಪ್ರತಿಭಟಿಸದ ಶಾಸಕ ಮಹೋದಯ ಸಂಜಯ ಪಾಟೀಲ ಈಗ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವದು ಹಾಸ್ಯಾಸ್ಪದ ಸಂಗತಿಯಾಗಿದೆ
ಕಚ್ಚಾಟಕ್ಕೆ ಬಿಎಸ್ವೈ ಅಸಮಾಧಾನ ವ್ಯೆಕ್ತಪಡಿಸಿ ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಪಕ್ಷ ಸಂಘಟನೆ ಮಾಡುವಂತೆ ಬಿಎಸ್ವೈ ಕಿವಿಮಾತು.ಹೇಳಿ ಬಿಜೆಪಿ ಜಗಳಕ್ಕೆ ಇತೀ ಶ್ರೀ ಹಾಡಿದ್ದಾರೆ