ಬೆಳಗಾವಿ- ಫೇಬ್ರುವರಿ ಮೊದಲ ವಾರದಲ್ಲಿ , ಫೆಬ್ರುವರಿ 3 ರಂದು ಗಡಿ ಸಂರಕ್ಷಣಾ ಆಯೋಗ ಬೆಳಗಾವಿಯಲ್ಲಿ ಸಭೆ ನಡೆಸಲು ನಿರ್ಧರಿಸಿದೆ .ಸಭೆಯ ದಿನಾಂಕ ನಿಗದಿಯಾಗಿದ್ದು ಆಯೋಗ ಬೆಳಗಾವಿಯ ಕನ್ನಡಪರ ಹೋರಾಟಗಾರರ ಜೊತೆ ಚರ್ಚೆ ನಡೆಸಿದ್ದು ಸಭೆಯನ್ನು ಸುವರ್ಣ ವಿಧಾನ ಸೌಧದಲ್ಲೇ ನಡೆಸುವಂತೆ ಬೆಳಗಾವಿಯ ಹೋರಾಟಗಾರರು ಆಯೋಗಕ್ಕೆ ಸಲಹೆ ನೀಡಿದ್ದಾರೆ.
ಗಡಿ ಸಂರಕ್ಷಣಾ ಆಯೋಗ ಫೆಬ್ರುವರಿ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿಯೇ ಸಭೆ ನಡೆಸಲು ಮುಂದಾಗಿತ್ತು ,ಇದಕ್ಕೆ ಬೆಳಗಾವಿಯ ಹೋರಾಟಗಾರರು ವಿರೋಧ ವ್ಯೆಕ್ತಪಡಿಸಿದ ಹಿನ್ನಲೆಯಲ್ಲಿ ಆಯೋಗ ಈಗ ಬೆಳಗಾವಿಯತ್ತ ಮುಖ ಮಾಡಿದೆ ಫೆಬ್ರುವರಿ 3ರಂದು ಬೆಳಗಾವಿಯಲ್ಲೇ ಸಭೆ ನಡೆಸಲು ಮುಂದಾಗಿದೆ
ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಎಷ್ಟು ಆಸಕ್ತಿ ತೋರಿಸುತ್ತಿದೆಯೋ ಅಷ್ಟು ಆಸಕ್ತಿಯನ್ನು ಕರ್ನಾಟಕ ಸರ್ಕಾರ ತೋರಿಸುತ್ತಿಲ್ಲ.ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಗಡಿ ವಿವಾದದ ಮೇಲುಸ್ತುವಾರಿ ನೋಡಿಕೊಳ್ಳಲು ಡಬಲ್ ಮಂತ್ರಿಗಳನ್ನು ನೇಮಿಸಿದೆ .ಮಹಾರಾಷ್ಟ್ರದ ನಾಯಕರನ್ನು ಬೆಳಗಾವಿಗೆ ಕಳುಹಿಸಿ ಬೆಳಗಾವಿಯ ಮರಾಠಿಗರಿಗೆ ಎಚ್ಚರಿಸಿ ಪ್ರಚೋದಿಸುವ ಕೆಲಸ ನಿರಂತರವಾಗಿ ನಡೆದಿದೆ.
ಗಡಿಭಾಗದ ಕನ್ನಡಪರ ಹೋರಾಟಗಾರರ ಒತ್ತಾಯದ ಮೇರೆಗೆ ಸರ್ಕಾರ ಗಡಿ ಸಂರಕ್ಷಣಾ ಆಯೋಗ ನೇಮಿಸಿತು .ನಿವೃತ್ತ ನ್ಯಾಯಮೂರ್ತಿ ವಿ.ಎಸ್ ಮಳೀಮಠ ಅವರು ಬೆಳಗಾವಿಯಲ್ಲಿ ಸಭೆ ನಡೆಸಿ,ಆಯೋಗ ಕ್ರಿಯಾಶೀಲವಾಗಿದೆ ಎಂದು ತೋರಿಸಿದ್ದರು.
ಮಳೀಮಠ ಅವರ ಬಳಿಕ ರಾಜೇಂದ್ರ ಬಾಬು ಅವರು ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸದರು ಅವರೂ ಕೂಡ ಬೆಳಗಾವಿಗೆ ಬರುವ ಮನಸ್ಸು ಮಾಡಲೇ ಇಲ್ಲ .ಈಗ ಕೆ.ಎನ್ ಮಂಜುನಾಥ ಅವರು ಗಡಿ ಸಂರಕ್ಷಣಾ ಆಯೋಗದ ಅದ್ಯಕ್ಷರಾಗಿದ್ದು ಅವರು ಫೆಬ್ರುವರಿ ಮೊದಲ ವಾರದಲ್ಲಿ ಬೆಳಗಾವಿಗೆ ಬರುತ್ತಿದ್ದಾರೆ.
ಗಡಿ ಸಂರಕ್ಷಣಾ ಆಯೋಗದ ಅದ್ಯಕ್ಷ ಕೆ.ಎನ್ ಮಂಜುನಾಥ ಅವರು ಬೆಳಗಾವಿಯ ಕನ್ನಡಪರ ಹೋರಾಟಗಾರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಪೆಬ್ರುವರಿ ಮೊದಲ ವಾರದಲ್ಲಿ ಫೆಬ್ರುವರಿ 3ರಂದು ಬೆಳಗಾವಿಯಲ್ಲಿ ಸಭೆ ನಡೆಸುವ ಮಾಹಿತಿ ನೀಡಿದ್ದಾರೆ.