ಇಬ್ಬರು ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿದ ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ,…
ಬೆಳಗಾವಿ- ಶಿವಸೇನೆಯ ಉದ್ಧವ ಠಾಖ್ರೆ ಮಹಾರಾಷ್ಟ್ರ ರಾಜ್ಯದ ಮುಖ್ಯ ಮಂತ್ರಿಯಾಗುತ್ತಲೇ ಬೆಳಗಾವಿ ಗಡಿ ವಿವಾದವನ್ನು ಕೆಣಕಿ ಮತ್ತೆ ಕಾಲು ಕೆದರಿ ಜಗಳ ತೆಗೆಯುವ ಪ್ರಯತ್ನದಲ್ಲಿದ್ದು ಬೆಳಗಾವಿ ಗಡಿ ವಿವಾದದ ಉಸ್ತುವಾರಿ ನೋಡಿಕೊಳ್ಳಲು ಇಬ್ಬರು ನಾಯಕರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ್ದಾರೆ
ಮುಂಬಯಿ ಸಹ್ಯಾದ್ರಿ ಗೆಸ್ಟ ಹೌಸ್ ನಲ್ಲಿ ಬೆಳಗಾವಿ ಗಡಿ ವಿವಾದದ ಕುರಿತು ಮಹತ್ವದ ಸಭೆ ನಡೆಸಿದ ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ ಗಡಿ ವಿವಾದದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಗಡಿ ಉಸ್ತುವಾರಿ ಸಚಿವರನ್ನಾಗಿ ಝಗನ್ ಭುಜಬಲ್ ಮತ್ತು ಏಕನಾಥ ಶಿಂದೆ ಅವರನ್ನು ನೇಮಕ ಮಾಡಿದ್ದಾರೆ
ಇಬ್ಬರು ಸಚಿವರನ್ನು ಗಡಿ ವಿವಾದದ ಉಸ್ತುವಾರಿ ನೋಡಿಕೊಳ್ಳಬೇಕು ಪ್ರತಿ ತಿಂಗಳು ಸಭೆ ನಡೆಸಿ ಗಡಿ ವಿವಾದದ ಬೆಳವಣಿಗೆಗಳ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು ಗಡಿ ವಿವಾದದ ವಾದ ನೋಡಿಕೊಳ್ಳುತ್ತಿರುವ ನ್ಯಾಯವಾದಿಗಳ ಜೊತೆಗೆ ನಿರಂತರವಾಗಿ ಸಂಪರ್ಕ ಸಾಧಿಸಬೇಕು.ಅಗತ್ತವಾಗಿರುವ ದಾಖಲೆಗಳನ್ನು ನ್ಯಾಯವಾದಿಗಳಿಗೆ ಒದಗಿಸುವದು ಸೇರಿದಂತೆ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಜರುಗಿಸಬೇಕು ಎಂದು ಮಹಾರಾಷ್ಟ್ರ ಸಿಎಂ ಗಡಿ ಉಸ್ತುವಾರಿ ಸಚಿವರುಗಳಿಗೆ ಸೂಚನೆ ನೀಡಿದ್ದಾರೆ.
ಗಡಿ ವಿವಾದದ ಕುರಿತು ಮಹಾರಾಷ್ಟ್ರ ಸಿಎಂ ಫುಲ್ ಸಿರೀಯಸ್ ಆಗಿದ್ದಾರೆ,ಇಬ್ಬರು ಸಚಿವರನ್ನು ಗಡಿ ಉಸ್ತುವಾರಿಗಾಗಿ ನೇಮಿಸಿ ಗಡಿ ವಿವಾದವನ್ನು ಜೀವಂತವಾಗಿಡಲು ಮಹಾ ಸಿಎಂ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಬೆಳಗಾವಿ ಗಡಿ ವಿವಾದದ ಕುರಿತು ಕರ್ನಾಟಕ ಸರ್ಕಾರ ಯಾವ ರೀತಿಯ ಕ್ರಮ ಜರುಗಿಸುತ್ತದೆ ಎನ್ನುವದನ್ನು ಕಾದು ನೋಡಬೇಕಾಗಿದೆ.