ಬೆಳಗಾವಿ….ಮಹದಾಯಿ ಹೋರಾಟ ಉತ್ತರ ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಳಗಾವಿ ಜಿಲ್ಲೆಯಲ್ಲೂ ಬಂದ್ ಬಿಸಿ ತಟ್ಟಿದೆ
ಜಿಲ್ಲೆಯ ರಾಮದುರ್ಗ, ಸವದತ್ತಿ ಹಾಗೂ ಬೈಲಹೊಂಗಲ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಆದೇಶ ಹೊರಡಿಸಿದ್ದಾರೆ
ಬಂದ್ ಹಿನ್ನೆಲೆ ಇಂದು ನಡೆಯಬೇಕಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಲಾಗಿದೆ BE/17 EME14 ವಿಷಯ ಡಿಸೆಂಬರ್ ೨೯ ಕ್ಕೆ ಮತ್ತು ಉಳಿದ ವಿಷಯದ ಪರೀಕ್ಷೆಗಳನ್ನು ಜನವರಿ ೮ನೇ ತಾರೀಖಿಗೆ ಮುಂದೂಡಲಾಗಿದೆ
ಬಂದಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ವಿವಿಧ ಕನ್ನಡಪರ ಮತ್ತು ಸಂಘ ಸಂಸ್ಥೆಗಳ ಬೆಂಬಲಿಸಿ ಹೋರಾಟಕ್ಕೆ ಧುಮುಕಿದ್ದು ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದಲ್ಲಿ ಟಾಯರ್ ಗೆ ಬೆಂಕಿ ಹಚ್ಚಿ ಕೇಂದ್ರ ಹಾಗು ರಾಜ್ಯ ಸರ್ಕಾರರಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ
ಬೆಳಗಾವಿಯಿಂದ ಹುಬ್ಬಳ್ಳಿ ಧಾರವಾಡ. ಗದಗ. ಬಾಗಲಕೋಟ ಕಡೆ ಹೋಗುವ ಬಸಗಳು ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು
ಉಳಿದ ಬಸಗಳು ದಿನದಂತೆ ಸಂಚಾರ ಪ್ರಾರಂಭ ಇವೆ ಬೆಳಗಾವಿಯ ಮಾರುಕಟ್ಟೆ ಮೇಲೆ ಬಂದ್ ಬಿಸಿ ತಟ್ಟದೇ ನಗರ ಜನಜೀವನ ಸಹಜವಾಗಿದೆ
ಗೋವಾ ಮಹಾರಾಷ್ಟ್ರ ಪ್ರಯಾಣಿಕರ ಪರದಾಟ
ಬೆಳಗಾವಿಯಿಂದ ಗೋವಾ ಮತ್ತು ಮಹಾರಾಷ್ಡ್ರಕ್ಕೆ ಹೋಗುವ ಬಸ್ ಗಳನ್ನು ತಡೆಯಲಾಗಿದೆ ಉಭಯ ರಾಜ್ಯಗಳಿಂದ ಬೆಳಗಾವಿಗೆ ಬಂದಿದ್ದ ಬಸ್ ಗಳನ್ನು ನಿನ್ನೆ ರಾತ್ರಿಯೇ ತಡೆಯಲಾಗಿದೆ ಬೆಳಗಾವಿ ಬಸ್ ನಿಲ್ದಾಣದಲ್ಲಿ ಬೆಳಗಾವಿಯಿಂದ ಗೋವಾ ಮತ್ತು ಮಹಾರಾಷ್ಟ್ರಕ್ಕೆ ಹೋಗುವ ಪ್ರಯಾಣಿಕರ ಪರದಾಟ ಹೆಚ್ಚಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ