Breaking News

ಬೆಳಗಾವಿ ಬಂದ್ ಹೋರಾಟ ಸಫಲ ಬಂದ್ ವಿಫಲ..!

ಬೆಳಗಾವಿ- ಮಹಾದಾಯಿಗಾಗಿ ವಿವಿಧ ಕನ್ನಡಪರ ಸಂಘಟನೆಗಳು ನೀಡಿದ ಬಂದ್ ಕರೆ ಬೆಳಗಾವಿಯಲ್ಲಿ ಸಂಪೂರ್ಣವಾಗಿ ವಿಫಲವಾದರೆ ಕನ್ನಡ ಸಂಘಟನೆಗಳಿಂದ ನಡೆದ ಹೋರಾಟ ಸಫಲವಾಯಿತು

ಮಹದಾಯಿಗಾಗಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ನಿನ್ನೆ ರಾತ್ರಿಯಿಂದಲೇ ಹೋರಾಟ ಆರಂಭಿಸಿತ್ತು ಬೆಳಗಾವಿಯಿಂದ ಗೋವಾಗೆ ತರಕಾರಿ ಮತ್ತು ಹಾಲು ಸರಬರಾಜು ಮಾಡುವ ವಾಹನಗಳನ್ನು ಉದ್ಯಮಬಾಗ ಬಳಿ ತಡೆದ ಹೋರಾಟಗಾರರ ಮೇಲೆ ಪೊಲೀಸರ್ ದರ್ಪ ತೋರಿಸಿದರು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಸೇರಿ ಹತ್ತಾರು ಕಾರ್ಯಕರ್ತರ ಮೇಲೆ ದರ್ಪ್ ತೋರಿಸಿದ ಪೋಲೀಸರು ಅಧ್ಯಕ್ಷ ಬಾಬು ಸಂಗೊಡಿ ಸೇರಿ ಕಾರ್ಯಕರ್ತರನ್ನ ಎಳೆದಾಡಿದ ಪೊಲೀಸರು ಹೋರಾಟ ತಡೆಯುವ ಪ್ರಯತ್ನ ಮಾಡಿದರು

ಮಧ್ಯರಾತ್ರಿ 12 ಗಂಟೆಗೆ ಹೋರಾಟಗಾರರಿಂದ ಕರ್ನಾಟಕ ಗೋವಾ ರಾಜ್ಯ ಸಂಪರ್ಕಿಸುವ ರಸ್ತೆ ತಡೆಗೆ ಯತ್ನ ನಡೆಯಿತು ಬೆಳಗಾವಿ ನಗರದ ಪೀರನವಾಡಿ ಕ್ರಾಸ್ ಬಳಿ ಗೋವಾಗೆ ಹೋಗುವ ವಾಹನಗಳ ತಡೆಗೆ ಯತ್ನ ಮಾಡಲಾಯಿತು ಬೆಳಗಾವಿಯಿಂದ ಗೋವಾಕ್ಕೆ ಹೋಗುವ ತರಕಾರಿ, ಹಾಲು ಸಾಗಿಸುವ ವಾಹನಗಳನ್ನು ತಡೆಯಲು ಮಂದಾದ ಪ್ರತಿಭಟನಾಕಾರರನ್ನ ಪೊಲೀಸರು ಬಂಧಿಸಿದರು

ಬೆಳಗಾವಿ ಗ್ರಾಮೀಣ ಠಾಣೆ ಸಿಪಿಐ ನಾರಾಯಣ ಸ್ವಾಮಿ ಹೋರಾಟಗಾರರ ಮೇಲೆ ದರ್ಪ‌ ತೋರಿದರು ರಸ್ತೆ ತಡೆ ಹೋರಾಡಕ್ಕೆ ಯಾರು ಅನುಮತಿಕೊಟ್ಟಿದ್ಧಾರನನ್ನ ಏರಿಯಾದಲ್ಲಿ ಪ್ರತಿಭಟನೆ ಮಾಡ್ಬೇಡಿ‌ ಎಂದು ಸಿಪಿಐ ಪ್ರತಿಭಟನಾಕಾರರನ್ನ ಪೊಲೀಸ್ ವ್ಯಾನಗೆ ಹಾಕ್ತಿಯಾ ವದಿಬೇಕಾ ಎಂದು ಸಿಪಿಐ ನಾರಾಯಣ ಸ್ವಾಮಿ ಕರ್ತವ್ಯ ನಿರತ ಅಧಿನ ಸಿಬ್ಬಂದಿ ಹಾಗೂ ಹೋರಾಟಗಾರರಿಗೆ ಅವಾಚ್ ಶಬ್ಧಗಳಿಂದ ನಿಂದನೆ ಮಾಡಿದ ಪ್ರಸಂಗವೂ ನಡೆಯಿತು

ಬೆಳಗಾವಿ ಜಿಲ್ಲೆಯ ಸಂಪೂರ್ಣ Ksrtc ಬಸ್ ಸೇವೆ ಸ್ಥಗಿತಗೊಳಿಸಲಾಗಿತ್ತು
ಗೋವಾ ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಭಾಗಕ್ಕೆ ತೆರಳುಚ ಬಸ್ ಸೇವೆ ಸ್ಥಗಿತಗೊಂಡಿತ್ತು
ಬೆಳಗಾವಿ ಜಿಲ್ಲೆ ಐದು ತಾಲೂಕಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು
ಬೆಳಗಾವಿ ಡಿಸಿ ಜಿಯಾವುಲ್ಲಾ ಅವರು ರಜೆ ಘೋಷಿಸಿ ಆದೇಶ ಹೊರಡಿಸಿದ್ದರು
ಬೆಳಗಾವಿ ಜಿಲ್ಲೆ ಬೈಲಹೊಂಗಲ, ಕಿತ್ತೂರು, ಖಾನಾಪುರ, ರಾಮದುರ್ಗ, ಸವದತ್ತಿ ತಾಲೂಕಿನಲ್ಲಿ ರಜೆ ಘೋಷಣೆ ಮಾಡಲಾಗಿತ್ತು

ಬಂದ್ ಗೆ ಕನ್ನಡ ಪರ ಮತ್ತು ರೈತ ಸಂಘಟನೆಗಳಿಂದ ಬೆಂಬಲ್ ವ್ಯಕ್ತಪಡಿಸಿ ವಿವಿಧೆಡೆ ಹೋರಾಟಗಳು ನಡೆದವು ಬೆಳಗಾವಿ ಮಹಾನಗರ ಮತ್ತು ಜಿಲ್ಲೆಯಾದ್ಯಂತ ಬೀಗಿ ಪೊಲೀಸ್ ಭದ್ರತೆ ಒದಗಿದಲಾಗಿತ್ತು
ಒಟ್ಟು 1500 ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು
೧೦ ಕೆ.ಎಸ.ಆರ.ಪಿ, ೧೫ ಕ್ಕೂ ಅಧಿಕ ಡಿಆರ್ ವಾಹನಗಳ ನಿಯೋಜನೆ ಮಾಡಲಾಗಿತ್ತು
ಮಹದಾಯಿ ಉಗಮ ಸ್ಥಾನವಾದ ಕಣಕುಂಬಿ ಮತ್ತು ಕಾಮಗಾರಿ ಸ್ಥಳದಲ್ಲಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು
ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಮಹಾದಾಯಿಗಾಗಿ ರೈಲು ತಡೆ ನಡೆಸುವಾಗ ಪೋಲೋಸರು ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಿದರು

39 ಕ್ಕೂ ಅಧಿಕ್ಕ ಕರವೇ ಕಾರ್ಯಕರ್ತರ ಬಂಧನ ಮಾಡಿದರು
ಮಹದಾಯಿ ವಿಚಾರದಲ್ಲಿ ಪ್ರಧಾನಮಂತ್ರಿ ಮಧ್ಯಪ್ರವೇಶಿಸಲು ಆಗ್ರಹಪಡಿಸಿದ ಪ್ರತಿಭಟನಾಕಾರರು ಕರವೇ ಮುಖಂಡ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಕರವೇ ಕಾಅರ್ಯಕರ್ತರು ರೈಲು ತಡೆ ನಡೆಸಿದರು

ಮಹದಾಯಿಗಾಗಿ ಕರ್ನಾಟಕ ಬಂದ್ ಬಿಸಿ ರೇಣುಕಾ ಯಲ್ಲಮ್ಮನ ಭಕ್ತರಿಗೂ ತಟ್ಟಿದ್ದು ಭಕ್ತರ ದೇವಿಯ ದರ್ಶನ ಪಡೆಯದೆ ಸವದತ್ತಿ ತಾಲೂಕಿನ ಜೋಗೂಳಬಾವಿ ಗ್ರಾಮದಲ್ಲೆ ಅಡಿಗೆ ಮಾಡಿ ಊಟಮಾಡುತ್ತಿದ್ದಾರೆ. ಹೌದು ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮ ಗುಡ್ಡದ ರೇಣುಕಾದೇವಿ ದೇವಸ್ಥಾನಕ್ಕ ದರ್ಶನಕ್ಕೆಂದು ಮಹಾರಾಷ್ಟ್ರ ಕರ್ನಾಟಕದ ಅನೇಕ ಭಕ್ತರು ಸಾವಿತ ಸಾವಿರ ಸಂಖ್ಯೆಯಲ್ಲಿ ಬರುತ್ತಾರೆ. ಆದ್ರೆ ಇಂದು ಬಂದ್ ಹಿನ್ನಲೆ ಭಕ್ತರಿಗೆ ಬಸ್ ಸೌಲಭ್ಯ ಇಲ್ಲದ ಕಾರಣ ಮಹಾರಾಷ್ಟ್ರದ ಭಕ್ತರು ಮಹಾರಾಷ್ಟ್ರದಿಂದ ಬಸ್ ಮಾಡಿಕೊಂಡು ದೇವಿ ದರ್ಶನಕ್ಕೆ ಆಗಮಿಸಿದ್ದಾರೆ. ಆದ್ರೂ ಅವರು ದೇವಿ ರೇಣುಕಾ ದೇವಿ ದರ್ಶನ ಮಾಡಲು ಆಗುತ್ತಿಲ್ಲಾ. ಪ್ರತಿಭಟನಾಕಾರರು ಭಕ್ತರ ವಾಹನ ತಡೆದ ಹಿನ್ನಲೆ ಭಕ್ತರು ಜೋಗುಳಬಾವಿಯಲ್ಲೆ ಅಡುಗೆ ಮಾಡಿ ಊಟಮಾಡುತ್ತಿದ್ದಾರೆ.
ಅಲ್ಲದೆ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ರಸ್ತೆಗೆ ಮುಳ್ಳು ಕಲ್ಲು ಹಾಕಿ ದನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಸಾರ್ವಜನಿಕರು ಮತ್ತು ಭಕ್ತರು ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *