ಬೆಳಗಾವಿ- ತೈಲಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಮತ್ತು ವಿವಿಧ ಸಂಘಟನೆಗಳು ಇಂದು ಭಾರತ್ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತ ವಾಗಿದೆ
ಇಂದು ಬೆಳಿಗ್ಗೆಯಿಂದಲೇ ಬೆಳಗಾವಿ ಸಿಬಿಟಿ ಬಸ್ ಗಳು ರಸ್ತೆಗಿಳಿಯಲಿಲ್ಲ ಹೊರಗಿನಿಂದ ಬಂದಿರುವ ಬಸ್ ಗಳು ಡಿಪೋಗಳಿಗೆ ಶಿಪ್ಟ ಮಾಡಿದ ಕಾರಣ ಬೆಳಗಾಯಿಂದ ಗೋವಾ,ಹುಬ್ಬಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳುವ ಪ್ರಯಾಣಿಕರು ಕೇಂದ್ರ ಬಸ್ ನಿಲ್ದಾಣದಲ್ಲಿ ಪರದಾಡುವ ದೃಶ್ಯ ಸಾಮಾನ್ಯವಾಗಿತ್ತು
ನಗರದಲ್ಲಿ ಸಿಬಿಟಿ ಬಸ್ ಗಳು ಸ್ತಬ್ಧ ವಾಗಿದ್ದರಿಂದ ಅಟೋ ಚಾಲಕರು ಫುಲ್ ಚಾನ್ಸ ಹೊಡೆದ್ರು .ಇಂದು ಮಿನಿಮಮ್ ಚಾರ್ಜ ಮಾತೇ ಇರಲಿಲ್ಲ ಅಟೋ ಹತ್ತಿದ ಪ್ರಯಾಣಿಕರು ಟ್ಯಾಕ್ಸಿ ಚಾರ್ಜ ತೆತ್ತ ಬೇಕಾದ ಪರಿಸ್ಥಿತಿ ಎದುರಾಯಿತು
ಬೆಳಗಾವಿ ಅಂಗಡಿಕಾರರು ಬಂದ್ ಕರೆಗೆ ಅಷ್ಟೊಂದು ರಿಸ್ಪಾನ್ಸ ಕೊಡಲಿಲ್ಲ ಅಲ್ಲಲ್ಲಿ ಅಂಗಡಿಗಳು ಹೊಟೇಲ್ ಗಳು ಬಾಗಿಲು ತೆರೆದು ತಮ್ಮ ವಹಿವಾಟು ಮುಂದುವರೆಸಿದ್ದು ಕಂಡು ಬಂದಿತು
ತೈಲ ಬೆಲೆ ಏರಿಕೆ ಖಂಡಿಸಿ
ಬೆಳಗಾವಿಯಲ್ಲಿ ಕರವೇ ನಾರಾಯಣಗೌಡ ಯುವ ಘಟಕದಿಂದ ಪ್ರತಿಭಟನೆ ನಡೆಯಿತು ಮಹಾಂತೇಶ ನಗರದ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯೆಕ್ತಪಡಿಸಿದರು ಸುಮಾರು ಒಂದು ಘಂಟೆ ಕಾಲ ಬೆಳಗಾವಿ ಗೋಕಾಕ್ ರಸ್ತೆ ತಡೆ ನಡೆಸಿದ್ದರಿಂದ ಪೋಲೀಸರು ನೂರಾರು ಕರವೇ ಕಾರ್ಯಕರ್ತರನ್ನು ಬಂಧಿಸಿದರು
ಬಂದ್ ಕರೆಯ ಬಿಸಿ ಕೇವಲ ಪ್ರಾಣಿಕರಿಗೆ ಮಾತ್ರ ತಟ್ಟಿದ್ದು ಕಂಡುಬಂದಿತು ಬೆಳಗಾವಿ ನಗರದಲ್ಲಿ ಗಣೇಶ ಹಬ್ಬದ ಖರೀದಿ ಜೋರಾಗಿಯೇ ನಡೆದಿದ್ದರಿಂದ ಅಂಗಡಿಕಾರರು ಮಾತ್ರ ಎಂದಿನಂತೆ ತಮ್ಮ ವ್ಯಾಪಾರ ಶುರು ಮಾಡಿಕೊಂಡಿದ್ದರು
ಮ್ಯಾಕ್ಸಿ ಕ್ಯಾಬ್ ಗಳ ಓಡಾಟ ಕಾಣಲಿಲ್ಲ ಮಧ್ಯಾಹ್ನದ ವರೆಗೆ ಪರಿಸ್ಥಿತಿ ನೋಡಿಕೊಂಡು ಬಸ್ ಓಡಾಟ ಆರಂಭಿಸುವದಾಗಿ ಸಾರಿಗೆ ಅಧಿಕಾರಿಗಳು ತಿಳಿಸಿದ್ದು ಪ್ರಯಾಣಿಕರು ಮಾತ್ರ ಕೇಂದ್ರ ಬಸ್ ನಿಲ್ಧಾಣದಲ್ಲೇ ಪರದಾಡುತ್ತಿದ್ದಾರೆ
ಜಿಲ್ಲಾಡಳಿತ ಮುಂಜಾಗೃತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಹಿನ್ನಲೆಯಲ್ಲಿ ವಿಧ್ಯಾರ್ಥಿಗಳು ಇಂದು ಎಂಜಾಯ್ ಮಾಡಿದ್ರು
ಬೆಳಗಾವಿ ಜಿಲ್ಲೆಯಲ್ಲಿಯೂ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕಾಂಗ್ರೆಸ್ ಕಾರ್ಯಕರ್ತರು ಅಲ್ಲಲ್ಲಿ ಪ್ರತಿಭಟನೆ ನಡೆಸಿ ತೈಲ ಬೆಲೆಯನ್ನು ಇಳಿಸುವಂತೆ ಒತ್ತಾಯಿಸುತ್ತಿದ್ದಾರೆ
ಬೆಳಗಾವಿ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಸೇಠ ನೂರಾರು ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿದಲಿದ್ದಾರೆ