ಬೆಳಗಾವಿ-ಭೂಸುಧಾರಣೆ ತಿದ್ದುಪಡಿ ಕಾಯ್ದೆ,ಎಪಿಎಂಸಿ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ ಕರೆಗೆ ಬೆಳಗಾವಿಯಲ್ಲಿ ನಿರಸ ಪ್ರತಿಕ್ರಿಯೆ ವ್ಯೆಕ್ತವಾಯಿತು.
ತಡವಾದರೂ ಬೆಳಗಾವಿ ಮಾರುಕಟ್ಟೆ ಓಪನ್ ಆಗಿತ್ತು ಬೆಳಿಗ್ಗೆ ನಗರ ಸಾರಿಗೆ ಸಂಚಾರ ಸ್ಥಗಿತಗೊಂಡಿತ್ತು ರೈತರ ಪ್ರತಿಭಟನೆ ಸುವರ್ಣಸೌಧಕ್ಕೆ ಸಾಗಿದ ಬಳಿಕ ಬಸ್ ಸಂಚಾರ ಶುರುವಾಯಿತು,ಪರಸ್ಥಳಕ್ಕೆ ಹೊರಡುವ ಬಸ್ ಗಳು ಬೆಳಿಗ್ಗೆ ಸ್ಥಗಿತಗೊಂಡರೂ ಪೋಲೀಸರ ಕಣ್ಗಾವಲು ನಲ್ಲಿ ಬಸ್ ಸಂಚಾರ ಆರಂಭಗೊಂಡಿತು,
ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ,ರೈತ ಸಂಘಟನೆಗಳು,ಕನ್ನಡಪರ,ಮತ್ತು ದಲಿತಪರ ಸಂಘಟನೆಗಳು ನಡೆಸಿದ ಪ್ರತಿಭಟನಾ ರ‌್ಯಾಲಿ ಸಕ್ಸೆಸ್ ಆಯಿತು ರೈತರ ಪ್ರತಿಭಟನೆಗೆ ವಿವಿಧ ಸಂಘಟನೆಗಳಿಂದ ಅಭೂತಪೂರ್ವ ಬೆಂಬಲ ವ್ಯೆಕ್ತವಾಯಿತು.
ಖಡೇಬಝಾರ್ ಗೆ ನುಗ್ಗಿದ ರ‌್ಯಾಲಿ
ರೈತರು ಚನ್ನಮ್ಮನ ವೃತ್ತದಲ್ಲಿ ಸಮಾವೇಶಗೊಂಡು ನಂತರ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ರ‌್ಯಾಲಿಯ ಹೊರಟರು ರ‌್ಯಾಲಿ ಸುವರ್ಣಸೌಧಕ್ಕೆ ಸಾಗುವ ಸಂಧರ್ಭದಲ್ಲಿ ಪ್ರತಿಭಟನಾಕಾರರು ಖಡೇಬಝಾರ್ ಗೆ ನುಗ್ಗಿ ಅಂಗಡಿಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿದಾಗ ಪೋಲೀಸರು ಪರಿಸ್ಥಿತಿ ಕಂಟ್ರೋಲ್ ಮಾಡಿ ರ‌್ಯಾಲಿಯನ್ನು ಮುಂದಕ್ಕೆ ಸಾಗಿಸಿದರು ಇದೇ ಸಂಧರ್ಭದಲ್ಲಿ ರೈತನೊಬ್ಬ ಸಾರಿಗೆ ಅಧಿಕಾರಿಯ ಕಾಲಿಗೆ ಬಿದ್ದು ಸಾಹೇಬ್ರ,ಇವತ್ತು ಒಂದು ದಿನ ಬಸ್ ಬಂದ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದು ವಿಶೇಷವಾಗಿತ್ತು.
ಅರಬೆತ್ತಲೆ ಪ್ರತಿಭಟನೆ,ಲಾಠಿ ರುಚಿ
ರೈತರ ರ‌್ಯಾಲಿ ಸುವರ್ಣ ವಿಧಾನಸೌಧಕ್ಕೆ ತಲುಪುತ್ತಿದ್ದಂತೆಯೇ ರೈತರು ಸುವರ್ಣ ವಿಧಾನಸೌಧದ ಎದುರು ಹೆದ್ದರಿ ತಡೆ ನಡೆಸಿದ್ರು,ಕೆಲವು ರೈತರು ಸುವರ್ಣ ವಿಧಾನಸೌಧಕ್ಜೆ ನುಗ್ಗುವ ಪ್ರಯತ್ನ ಮಾಡಿದರು ಇನ್ನು ಕೆಲವು ರೈತರು ಅರಬೆತ್ತಲೆಯಾಗಿ ಪ್ರತಿಭಟಿಸುತ್ತಿರುವಾಗ ರೈತರನ್ನು ನಿಯಂತ್ರಿಸಲು ಪೋಲೀಸರು ಹರಸಹಾಸ ಪಡಬೇಕಾಯಿತು,ಅರಬೆತ್ತಲೆಯಾದ ರೈತ ಇದೇ ಸಂಧರ್ಭದಲ್ಲಿ ಪೋಲೀಸರ ಲಾಠಿ ರುಚಿ ನೋಡಬೇಕಾಯಿತು.
ಅಣಕು ಶವಯಾತ್ರೆಗೆ ಯತ್ನ ರೈತರ ಬಂಧನ
ರೈತರು ಸುವರ್ಣ ವಿಧಾನಸೌಧದ ಎದುರು ಹೆದ್ದಾರಿ ತಡೆ ನಡೆಸುತ್ತಿರುವಾಗ, ರೈತರು ಮೋದಿ,ಮತ್ತು ಯಡಿಯೂರಪ್ಪ ಎಂದು ಬರೆದ ಅಣಕು ಶವಯಾತ್ರೆ ತಗೆಯುವ ಪ್ರಯತ್ನ ಮಾಡಿದ್ರು ಪೋಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಅಣಕು ಶವ ಯಾತ್ರೆಯನ್ನು ತಡೆದರು.ನಂತರ ಪೋಲೀಸರು ರೈತರನ್ನು ತಮ್ಮ ವಶಕ್ಕೆ ಪಡೆದು ರೈತರ ಹೋರಾಟಕ್ಕೆ ವಿರಾಮ ನೀಡಿದ್ರುರ‌್ಯಾಲಿಯ ಸಂಧರ್ಭದಲ್ಲಿ ಬಿಗಿ ಪೋಲೀಸ್ ಬಂದೋಬಸ್ತೀ ಏರ್ಪಡಿಸಲಾಗಿತ್ತು.
ಪೋಲೀಸರ ಜೊತೆ ಮಾತಿನ ಚಕಮಕಿ
ಬೆಳಗಾವಿಯ ಚನ್ನಮ್ಮನ ವೃತ್ತದಿಂದ ರೈತರ ರ‌್ಯಾಲಿ ಶುರುವಾದ ಬಳಿಕ ರೈತರು ಚನ್ನಮ್ಮನ ವೃತ್ತ ದಿಂದ ಮಾರುಕಟ್ಟೆ ಪ್ರದೇಶಕ್ಕೆ ತೆರಳಲು ಮುಂದಾದ್ರು ಈ ಸಂಧರ್ಭದಲ್ಲಿ ವಿವಿಧ ಸಂಘಟನೆಗಳ ನಾಯಕರು ಪೋಲೀಸ್ ಅಧಿಕಾರಿಗಳ ಜೊತೆ ವಾದಕ್ಕಿಳಿದರು,ಪೋಲೀಸರು ಅವರನ್ನು ತಡೆದ್ರು,ನಂತರ ಖಡೇಬಝಾರ್ ಗೆ ನುಗ್ಗುವ ಸಂಧರ್ಭದಲ್ಲಿಯೂ ಪೋಲೀಸರ ಜೊತೆ ಜಟಾಪಟಿ ನಡೆಯಿತು ನಂತರ ಸುವರ್ಣ ವಿಧಾನಸೌಧದ ಎದುರು ಹೆದ್ದಾರಿ ತಡೆ ನಡೆಸುವಾಗಲೂ ರೈತ ನಾಯಕರು ಹಾಗು ಪೋಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ರೈತರ ಪರವಾಗಿ ಪ್ರತಿಭಟಿಸಿದ ಕಾಂಗ್ರೆಸ್
ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಳಗಾವಿ ಕಿಸಾನ್ ಸೆಲ್ ಬೆಂಬಲ ವ್ಯೆಕ್ತ ಪಡಿಸಿ ಎಪಿಎಂಸಿ,ಮತ್ತು ಭೂ ಸುಧಾರಣೆ ತಿದ್ದುಪಡಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.