.!ಬೆಳಗಾವಿ-ಕೃಷಿ ಮಸೂದೆ ವಿರೋಧಿಸಿ ವಿವಿಧ ರೈತ ಸಂಘಟನೆಗಳು ನೀಡಿದ ಭಾರತ್ ಬಂದ್ ಕರೆಗೆ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ನಿರಸ ಪ್ರತಿಕ್ರಿಯೆ ವ್ಯೆಕ್ತವಾಗಿದ್ದು ಬಂದ್ ಕೇವಲ ಪ್ರತಿಭಟನೆಗೆ ಸೀಮೀತವಾಗಿದೆ.
ಬೆಳಗಾವಿ ನಗರ ಎಂದಿನಂತೆ ಸಹಜವಾಗಿದೆ,ಬಸ್ ಗಳು ಅಟೋಗಳು ಎಂದಿನಂತೆ ಓಡಾಡುತ್ತಿದ್ದು,ಶಾಲಾ ಕಾಲೇಜುಗಳು,ಅಂಗಡಿಗಳು ತೆರೆದಿವೆ, ಅಲ್ಲಲ್ಲಿ ರೈತ ಸಂಘಟನೆಗಳ ಪ್ರತಿಭಟನೆ ಹೊರತು ಪಡಿಸಿದರೆ ಬೆಳಗಾವಿಯ ವ್ಯಾಪಾರ ವಹಿವಾಟು ಸಹಜವಾಗಿದೆ.
ಬಸ್ ನಿಲ್ಧಾಣದ ಬಳಿ ಪ್ರತಿಭಟನೆ..,
ಬೆಳಗಾವಿ ಬಸ್ ನಿಲ್ದಾಣ ಎದುರು ಟೈಯರ್‌ಗೆ ಬೆಂಕಿ ಹಚ್ಚಿ ರೈತರು ಬೆಳ್ಳಂ ಬೆಳಿಗ್ಗೆ ಪ್ರತಿಭಟನೆ ನಡೆಸಿದ್ರು.ಕರ್ನಾಟಕ ರೈತ ಸಂಘ, ಹಸಿರು ಸೇನೆ, ಭಾರತೀಯ ಕೃಷಿಕ ಸಮಾಜ, ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ಬಸ್ ನಿಲ್ಧಾಣದ ಎದುರು ಪ್ರತಿಭಟಿಸಿ ಭಾರತ ಬಂದ್ ಕರೆಗೆ ಬೆಂಬಲ ವ್ಯೆಕ್ತಪಡಿಸಿದ್ರು.ರೈತರ ಪ್ರತಿಭಟನೆ ಹಿನ್ನೆಲೆ ಬಸ್‌ಗಳ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು.
ಒತ್ತಾಯಪೂರ್ವಕವಾಗಿ ಬಸ್‌ಗಳ ಸಂಚಾರ ವನ್ನುಪ್ರತಿಭಟನಾಕಾರರು ಸ್ಥಗಿತಗೊಳಿಸಿದ್ರು.
ಕೃಷಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯೆಕ್ತಪಡಿಸಿದರು. ಬೆಳಗಾವಿ ಬಸ್ ನಿಲ್ದಾಣ ಎದುರು ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ರೈತರು ಒತ್ತಾಯಪೂರ್ವಕವಾಗಿ ಕೆಲಕಾಲ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಪರದಾಡಿದರು. ಸ್ಥಳಕ್ಕೆ ಪೋಲೀಸರು ಆಗಮಿಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಿದ ಬಳಿಕಬೆಳಗಾವಿ ಬಸ್ ನಿಲ್ದಾಣದಿಂದ ಬಸ್‌ಗಳ ಸಂಚಾರ ಶುರುವಾಯತು.
ಟೋಲ್‌ಗೇಟ್ ಎದುರು ಮಲಗಿ ಬೊಬ್ಬೆ….
ಹಿರೇಬಾಗೇವಾಡಿ ಟೋಲ್‌ಗೇಟ್ ಎದುರು ಮಲಗಿ ಬೊಬ್ಬೆ ಹೊಡೆಯುತ್ತಾ ಕಾಂಗ್ರೆಸ್ ಕಾರ್ಯಕರ್ತೆ ಪ್ರತಿಭಟನೆ ನಡೆಸಿ ಎಲ್ಲರ ಗಮನ ಸೆಳೆದ ಘಟನೆ ನಡೆಯಿತು.ಬೆಳಗಾವಿ ತಾಲೂಕಿನ ಹಿರೇಬಾಗೇಬಾಡಿ ಟೋಲ್‌ಗೇಟ್ ಬಳಿ ಕಿಸಾನ್ ಕಾಂಗ್ರೆಸ್ ಪ್ರತಿಭಟನೆ ನಡೆಯಿತು.ಪ್ರತಿಭಟನಾ ನಿರತ ರೈತರನ್ನು ಪೋಲೀಸರು ವಶಕ್ಕೆ ಪಡೆದರು.ಈ ವೇಳೆ ಹೆದ್ದಾರಿ ಮೇಲೆ ಮಲಗಿ ಬೊಬ್ಬೆ ಹೊಡೆಯುತ್ತಾ ಕೈ ಕಾರ್ಯಕರ್ತೆ ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು.ಕೈಗೆ ಹಸಿರು ಶಾಲು ಕಟ್ಟಿಕೊಂಡು ಮಲಗಿ ಹೊರಳಾಡುತ್ತಾ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತೆ ಆಯೀಷಾ ಸನದಿಯನ್ನು ಪೋಲೀಸರು ವಶಕ್ಕೆ ಪಡೆದರು.
ಕುಂದಾನಗರಿ ಬೆಳಗಾವಿಯಲ್ಲಿ ಭಾರತ್ ಬಂದ್ ಠುಸ್
ಬೆಳಗಾವಿಯಲ್ಲಿ ಪ್ರತಿಭಟನೆಗೆ ಸಿಮೀತವಾದ ಭಾರತ್ ಬಂದ್ ಬೆಳಗಾವಿ ನಗರದಲ್ಲಿ ಠುಸ್ಸ್ ಆಯ್ತು.ಬೆಳಗಾವಿ ಎಪಿಎಂಸಿಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆದಿತ್ತು.
ಬೆಳಗಾವಿಯಲ್ಲಿ ಎಂದಿನಂತೆ ಸಹಜವಾಗಿತ್ತು.ಪ್ರತಿಭಟನಾ ನಿರತ ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರುಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವಾಗ ಪೋಲೀಸರು ಪ್ರತಭಟನಾಕಾರರನ್ನು ವಶಕ್ಕೆ ಪಡೆದರು.
ಯಲ್ಲಮ್ಮದೇವಿ ಮೈಮೇಲೆ ಬಂದಳೆಂದು ಮಹಿಳೆಯಿಂದ ಹೈಡ್ರಾಮಾ….
ಹಿರೇಬಾಗೇವಾಡಿ ಟೋಲ್ ಬಳಿ ರೈತರು ಪ್ರತಿಭಟನೆ ನಡೆಸುತ್ತಿರುವಾಗ ,ಮಹಿಳೆಯೊಬ್ಬಳು,ನಮಗೆ ತೊಂದರೆ ಕೊಟ್ಟರೆ ಬಿಡೋದಿಲ್ಲ ಎಂದು ಕಿರುಚಾಟ ಶುರು ಮಾಡಿದ್ರು,ಕೈಯಲ್ಲಿ ರೈತ ಧ್ವಜ ಹಿಡಿದು ಹೋರಾಟಕ್ಕೆ ಆಗಮಿಸಿದ್ದ ಮಹಿಳೆ, ದೇವರು ಮೈಮೇಲೆ ಬಂದಳೆಂದು ಮಹಿಳೆ ಕಿರುಚಾಡಿದ್ರು,ಖಾನಾಪೂರ ತಾಲೂಕಿನ ಹಟ್ಟಿಹೊಳಿ ಗ್ರಾಮದ ರೇಣುಕಾ ತಡಕೋಡ ಎಂಬ ಮಹಿಳೆಯಿಂದ ಏಕಾಏಕಿ ಕಿರುಚಾಡಿ ಎಲ್ಲರ ಗಮನ ಸೆಳೆದಿದ್ದು ವಿಶೇಷವಾಗಿತ್ತು.ಕಳೆದ ಬಾರಿ ಪ್ರವಾಹದಲ್ಲಿ ಹಿರೇಹಟ್ಟಿಹೊಳಿ ಗ್ರಾಮದ ಗದ್ದೆಗಳು ಮುಳುಗಡೆಯಾಗಿವೆ.ಪರಿಹಾರಕ್ಕಾಗಿ ಎಷ್ಟು ಬಾರಿ ಅಲೆದಾಡಬೇಕು ಎಂದು ರೈತ ಮಹಿಳೆ ಆಕ್ರೋಶ ವ್ಯಕ್ತಡಿಸಿದಾಗ,ರೈತ ಮಹಿಳೆಯನ್ನ ರೈತ ಮುಖಂಡರು ಸಮಾಧಾನ ವ್ಯೆಕ್ತಪಡಿಸಿದರು.