ಬೆಳಗಾವಿ- ಕರ್ನಾಟಕ ಬಂದ್ ಕರೆಯನ್ನು ಬೆಂಬಲಿಸಿ ಹಲವಾರು ಕನ್ನಡಪರ ಸಂಘಟನೆಗಳು ಬೆಳಗಾವಿ ನಗರದಲ್ಲಿ ಪ್ರತಿಭಟನೆ ನಡೆಸಿದರು ಆದರೆ ನಗರದ ಜನಜೀವನ ಸಹಜವಾಗಿತ್ತು
ಹಲವಾರು ಕನ್ನಡಪರ ಸಂಘಟನೆಗಳು ಸಂಸದ ಸುರೇಶ ಅಂಗಡಿ ಅವರ ನಿವಾಸದ ಮುಂದೆ ಧರಣಿ ನಡೆಸಿ ಎಂಈಎಸ್ ಸಂಘಟನೆಯನ್ನು ನಿಷೇಧಿಸಬೇಕು ಕಳಸಾ ಬಂಡೂರಿ ನಾಲಾ ವಿಷಯದ ಕುರಿತು ಕೇಂದ್ರ ಸರ್ಕಾರ ಮದ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು
ಬಂದ್ ಬೆಂಬಲಿಸಿ ಹಲವಾರು ಸಂಘಟನೆಗಳು ಪ್ರತಭಟನೆ ನಡೆಸಿದರು ಆದರೆ ನಗರದ ಅಂಗಡಿಗಳು ತೆರೆದುಕೊಂಡಿದ್ದವು ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು
ರೈತರಿಂದ ಪ್ರತಿಭಟನೆ
ಬೆಳಗಾವಿಯಲ್ಲಿ ಕರ್ನಾಟಕ ಬಂದಗೆ ಬೆಂಬಲಿಸಿ ರೈತರಿಂದ ಪ್ರತಿಭಟನೆ ನಡೆಯಿತು ನಗರದ ಚನ್ನಮ್ಮ ವೃತ್ತದಲ್ಲಿ ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು
ಪ್ರಧಾನಿ ಮೋದಿ ಪ್ರತಿಕೃತಿ ಮುಂದೆ ಕಣ್ಣೀರಿಟ್ಟು ಬಾಯಿಬಡಿದುಕೊಂಡ ರೈತರು ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿದರು ಕೇಂದ್ರ ಸರ್ಕಾರದ ರೈತ ಜನ ವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು