ಬೆಳಗಾವಿಯಲ್ಲಿ ಇನ್ಮುಂದೆ ಪ್ಲಾಸ್ಟಿಕ್ ಖರೀಧಿಸಿದ್ರೆ,ಮಾರಿದ್ರೆ ಹುಷಾರ್….!!!
ಬೆಳಗಾವಿ- ಬೆಳಗಾವಿ ನಗರದಲ್ಲಿ ಪ್ಲಾಸ್ಟಿಕ್ ಖರೀದಿ ,ಮತ್ತು ಮಾರಾಟಕ್ಕೆ ಬ್ರೆಕ್ ಹಾಕಲು ಇಬ್ಬರಿಗೂ ದಂಡ ವಿಧಿಸಿ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಸಮರ್ಪಕವಾಗಿ ಜಾರಿಗೆ ತರುತ್ತೇವೆ ಎಂದು
ರಾಷ್ಟ್ರೀಯ ಹಸಿರು ನ್ಯಾಯಾಧೀಕಣದ ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಸುಭಾಷ್ ಅಡಿ ಅವರು ಎಚ್ಚರಿಕೆ ನೀಡಿದ್ದಾರೆ.
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸಭೆ ನಡೆಸಿ ಇದಾದಬಳಿಕ ಪತ್ರಿಕಾಗೋಷ್ಠಿಯನ್ನು ನಡೆಸಿದ ಅವರು ಬೆಳಗಾವಿ ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧದ ಕುರಿತು ವ್ಯಾಪಕ ಜನ ಜಾಗೃತಿ ಮೂಡಿಸುತ್ತೇವೆ, ಪ್ಲಾಸ್ಟಿಕ್ ಮಾರಾಟ ಮಾಡುವವರ ಜೊತೆಗೆ ಖರೀಧಿಸುವ ಗ್ರಾಹಕರ ಮೇಲೂ ದಂಡ ಹಾಕ್ತೇವಿ ಎಂದು ಸುಭಾಷ್ ಆಡಿ ಎಚ್ಚರಿಕೆ ನೀಡಿದ್ರು
ಸಾರ್ವಜನಿಕರು ಕಡ್ಡಾಯವಾಗಿ ಒಣ ಕಸ ಮತ್ತು ಹಸಿ ಕಸವನ್ನು ಭೇರ್ಪಡಿಸಬೇಕು ,ಎಲ್ಲಿ ನೋಡಿದಲ್ಲಿ ಕಸ ಚೆಲ್ಲುವವರ ಮೇಲೆಯೂ ಕ್ಯಾಮರಾ ನಿಗಾ ಇಟ್ಟು ಅವರ ವಿರುದ್ಧವೂ ಕ್ರಮ ಜರುಗಿಸಲಾಗುವದು ಎಂದು ಸುಭಾಷ್ ಆಡಿ ಎಚ್ಚರಿಕೆ ನೀಡಿದ್ರು
ಬೆಳಗಾವಿ ನಗರದಲ್ಲಿ ಬೀದಿ ವ್ಯಾಪಾರಿಗಳ ವಲಯಗಳನ್ನು ಸ್ಥಾಪಿಸಿ ಅಲ್ಲಿಯ ಕಸ ಸಂಗ್ರಹಣೆಗೆ ಡಸ್ಟಬೀನ್ ವ್ಯೆವಸ್ಥೆ ಮಾಡಲಾಗುವದು ಜೊತೆಗೆ ಎಲ್ಲಿ ನೋಡಿದಲ್ಲಿ ಕಸ ಚೆಲ್ಲುವ ಸಾರ್ವಜನಿಕರ ಮೇಲೆ ಕ್ರಮ ಜರುಗಿಸಲು ಮಾರ್ಶಲ್ ಗಳ ನೇಮಕ ಮಾಡಲಾಗುವದು ಎಂದು ಸುಭಾಷ್ ಆಡಿ ತಿಳಿಸಿದರು