Breaking News

ಸಿಸಿಬಿ ಪೋಲೀಸರಿಂದ ಭರ್ಜರಿ… ರಿಕವರಿ..!

ಬೆಳಗಾವಿ- ಬೆಳಗಾವಿ ನಗರದ ವಿವಿಧ ಪೋಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ  ನಡೆದ ಹದಿನಾಲ್ಕು ಕಳ್ಳತನದ ಪ್ರಕರಣಗಳನ್ನ ಪತ್ತೆ ಮಾಡಿರುವ ಸಿಸಿಬಿ ಪೋಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅಪಾರ ಪ್ರಮಾಣದ ಬಂಗಾರದ ಆಭರಣ ಹಾಗು ಬೆಳ್ಳಿಯ ವಸ್ತುಗಳನ್ನು ವಶ ಪಡಿಸಿಕೊಂಡು ಭರ್ಜರಿ ರಿಕವರಿ ಮಾಡಿದ್ಸಾರೆ

ಸಿಪಿಐ ಗಡ್ಡೇಕರ ಅವರ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೋಲೀಸರು ಬೆಳಗಾವಿಯ ಜಿನಾಬಕುಲ್ ಫ್ಯಾಕ್ಟರಿ ಬಳಿ ಇಬ್ಬರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೋಲೀಸರು ಒಟ್ಟು ಹದಿನಾಲ್ಕು ಕಳ್ಳತನದ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ

ಕಂಗ್ರಾಳಿಯ ಗಣೇಶ ಸುರೇಶ ತುಬಾಕಿ, ಬೆಳಗಾವಿ ಮಹಾದ್ವಾ ರಸ್ತೆಯ ನೀಲೇಶ ಲಕ್ಷ್ಮಣ ಬಡವಂಚಿ ಎಂಬಾತರನ್ನು ಬಂದಿಸಿರುವ ಪೋಲೀಸರು ೬೬೨ ಗ್ರಾಂ ತೂಕದ ಬಂಗಾರದ ಆಭರಣಗಳು,ಮತ್ತು ಒಂದು ಕೆಜಿ ೯೫ ಗ್ರಾಂ ಬೆಳ್ಳಿಯ ವಸ್ತುಗಳು ಹಾಗು ಪಲ್ಸರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ

೨೧ ಲಕ್ಷ ೬೫ ಸಾವಿರ ಕಿಮ್ಮತ್ತಿನ ಮಾಲನ್ನು ಸಿಸಿಬಿ ಪೋಲೀಸರು ವಶಪಡಿಸಿಕೊಂಡಿದ್ದಾರೆ ಸಿಸಿಬಿ ಪೋಲೀಸರ ಕಾರ್ಯಾಚರಣೆಗೆ ನಗರ ಪೋಲೀಸ್ ಆಯುಕ್ತ ಕೃಷ್ಣಭಟ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *